ಮನೆ, ಮಕ್ಕಳು,ಸಂಸಾರದ ಬಗ್ಗೆ ವರುಣ್ ಧವನ್ ಮಾತು, ಸಮಂತಾ ಮೂಕ ರೋಧನೆ ಕಂಡು ಕಣ್ಣೀರಾದ ಫ್ಯಾನ್ಸ್....!

ಪ್ರೀತಿ-ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ, ಯಾವಾಗಲಾದರೂ, ಹೇಗಾದರು ಹುಟ್ಟಬಹುದು. ಆದರೆ ಹಿಂದೆ ಹೀಗೆ ಹುಟ್ಟಿದ ಪ್ರೀತಿಗೆ ಎಕ್ಸ್‌ಪೈರಿ ಡೇಟ್ ಇರ್ತಿರಲಿಲ್ಲ. ಆದರೆ ಈಗ ಇದೆ. ಬದಲಾದ ಈ ಕಾಲದಲ್ಲಿ ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಅದು ಕೊನೆವರೆಗೆ ಉಳಿಯುತ್ತದೆ. ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್ ಬೈ ಹೇಳುತ್ತದೆ.

ಇನ್ನೂ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎಂದು ಕೆಲವೊಮ್ಮೆ ಅನಿಸಿದಂತೆ ಪ್ರೀತಿಯಿಂದ ನೋವನ್ನು ಕೂಡ ಪದೇ ಪದೆ ಅನುಭವಿಸಬೇಕಾಗುತ್ತೆ. ಪ್ರೀತಿಯಲ್ಲಿ ಬೀಳುವುದು ಮತ್ತು ಪ್ರೀತಿಯಿಂದ ದೂರವಾಗುವುದು ಈಗೀಗ ತುಂಬಾನೇ ಕಾಮನ್ನು. ಅನುಭವಗಳ ಮೂಲಕ ಹಲವು ವಿಚಾರ ಕಲಿತುಕೊಂಡರೂ, ಪ್ರೀತಿಯ ವಿಷಯದಲ್ಲಿ ಮಾತ್ರ ಅನೇಕ ಸಲ ತುಂಬಾ ಹರ್ಟ್ ಆಗುತ್ತೆ. ಕೆಲವೊಮ್ಮೆ ಜೀವನಪೂರ್ತಿ ಕಾಡುತ್ತೆ. ನಾಗಚೈತನ್ಯ ಅವರಿಂದ ದೂರವಾದ ಸಮಂತಾಗೆ ಕೂಡ ಈ ಪ್ರೀತಿ ಭಾವನಾತ್ಮಕವಾಗಿ ನೋವು ಕೊಡುತ್ತಿರಬಹುದು ಅನ್ನುವುದು ಸದ್ಯಕ್ಕೆ ಅನೇಕರಿಗೆ ಕಾಡುತ್ತಿರುವ ಅನುಮಾನ. ಇದಕ್ಕೆ ಕಾರಣವಾಗಿದ್ದು ಸಿಟಾಡೆಲ್ ಚಿತ್ರದ ಪ್ರಚಾರದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸಂದರ್ಶನ.

Samantha Ruth Prabhu s sad reaction goes viral after Varun Dhawan discusses family planning

ಹೌದು, ಅಸಲಿಗೆ ಸಮಂತಾ ಅಭಿನಯದ ಸಿಟಾಡೆಲ್ ಚಿತ್ರ ಅಮೆಜಾನ್ ಫ್ರೈಂನಲ್ಲಿ ಪ್ರಸಾರವಾಗುತ್ತಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರದಲ್ಲಿ ಚಿತ್ರದ ನಾಯಕ ವರುಣ್ ಧವನ್ ಮತ್ತು ಸಮಂತಾ ಭಾಗಿಯಾಗಿದ್ದರು. ಚಿತ್ರದ ಕುರಿತು ಮಾತನಾಡುತ್ತಿದ್ದರು. ಆದರೆ, ಈ ಸಮಯದಲ್ಲಿ ಚಿತ್ರದ ಕುರಿತು ಮಾತನಾಡುತ್ತಾ, ಮಾತನಾಡುತ್ತಾ.. ವರುಣ್ ಧವನ್ ಮನೆಯ ಬಗ್ಗೆ ಮಾತನಾಡಿದರು. ಸಂಸಾರದ ಸುಖ ದುಃಖದ ಬಗ್ಗೆ ತಮ್ಮ ಮನದ ಮಾತು ಹಂಚಿಕೊಂಡರು. ನನ್ನ ಮಗಳು ಲಾರಾ ಈ ಪ್ರಪಂಚಕ್ಕೆ ಬರುವ ಮುನ್ನ ನಾನು ಈ ಚಿತ್ರದ ಚಿತ್ರೀಕರಣ ಶುರು ಮಾಡಿದ್ದೇ, ಆ ಸಮಯದಲ್ಲಿ ನಾನು ನನ್ನ ಪತ್ನಿ ನತಾಶಾ ಬಹುದೊಡ್ಡ ಪರೀಕ್ಷೆಯನ್ನು ಎದುರಿಸಿದೆವು ಅಂದರು. ಇನ್ನೂ ಈ ಚಿತ್ರದಲ್ಲಿ ಕೂಡ ಇದೇ ತರಹದ ಪಾತ್ರವನ್ನು ರಚಿಸಲಾಗಿದೆ. ಹೀಗಾಗಿ ಬನ್ನಿ ನನ್ನ ಹೃದಯಕ್ಕೆ ಅತೀ ಹತ್ತಿರವಾದ ಪಾತ್ರವೆಂದು ವರುಣ್ ಧವನ್ ಹೇಳಿದರು. ಬನ್ನಿ ಪಾತ್ರವನ್ನು ನಾನು ಭಾವನಾತ್ಮಕವಾಗಿ ಅರ್ಥ ಮಾಡಿಕೊಂಡು ಅಭಿನಯಿಸಿದ್ದೇನೆ ಎಂದು ಹೇಳಿದರು.

ಆದರೆ ಈ ಸಮಯದಲ್ಲಿ ಅಲ್ಲಿದ್ದವರ ಎಲ್ಲರ ಗಮನ ಸಮಂತಾ ಅವರ ಮೇಲಿತ್ತು. ಅವರ ಹಾವ-ಭಾವ ಸೆರೆಹಿಡಿಯಲು ಕ್ಯಾಮರಾ ಕಣ್ಣು ಹಾತೊರೆಯುತ್ತಿತ್ತು. ಹೀಗಾಗಿಯೇ ಅತ್ತ ವರುಣ್ ಧವನ್ ಸಂಸಾರ, ಮನೆ, ಪತ್ನಿ ಎಂದು ಮಾತನಾಡುತ್ತಿದ್ದ ಸಮಯದಲ್ಲಿ ಸಮಂತಾ ಅವರ ಬಾಡಿ ಹೋದ ಮುಖ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಮಂತಾ ಮುಖದಲ್ಲಿನ ದುಗುಡ-ದುಮ್ಮಾನ-ನೋವು ಅನೇಕರಿಗೆ ಅರ್ಥವಾಗಿದೆ.

ಹೀಗಾಗಿಯೇ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರುವ ಅನೇಕರು ಸಮಂತಾಗೆ ಜೋರು ಅಳಬೇಕಿದೆ ಆದರೆ ಸಾಧ್ಯವಾಗದೇ ತಮ್ಮ ನೋವನ್ನು ಸಹಿಸಿಕೊಂಡು ಕುಂತಿದ್ದಾರೆ ಎಂದಿದ್ದಾರೆ. ಸಮಂತಾಗೆ ಈ ತರಹದ ಕಷ್ಟ ಬರಬಾರದಿತ್ತು ಎಂದಿದ್ದಾರೆ. ಸಮಂತಾ ಅವರ ದಯನೀಯ ಸ್ಥಿತಿ ಕಂಡು ಅನೇಕರು ಮರುಕ ಪಟ್ಟಿದ್ದಾರೆ. ನಿಮ್ಮ ಜೀವನದಲ್ಲಿ ಕೂಡ ಹೊಸ ವ್ಯಕ್ತಿ ಬಂದೇ ಬರುತ್ತಾರೆ ಆಗ ನಿಮ್ಮ ಜೀವನಲ್ಲಿ ಎಲ್ಲವೂ ಸರಿಯಾಗುತ್ತೆ ಎನ್ನುತ್ತಿದ್ದಾರೆ. ಕತ್ತಲಾದ ಮೇಲೆ ಬೆಳಕು ಬಂದೇ ಬರುತ್ತೆ ಎಂದು ಸಮಂತಾಗೆ ಅನೇಕರು ಸಾಂತ್ವಾನವನ್ನು ಹೇಳುತ್ತಿದ್ದಾರೆ. ಯಾರು ಇರದಿದ್ದರೆ ವರುಣ್ ಧವನ್ ಮಾತುಗಳನ್ನು ಕೇಳಿ ಸಮಂತಾ ಜೋರಾಗಿ ಕಿರುಚಿ ಗಳ ಗಳನೇ ಅಂತ ಸಮಂತಾ ಅಳುತ್ತಿದ್ದರು ಎಂದಿದ್ದಾರೆ. ಈ ಸಂದರ್ಶನದ ವಿಡಿಯೋ ಸದ್ಯಕ್ಕೆ ವೈರಲ್ ಆಗಿದೆ.

More from Filmibeat

Read more about: samantha varun dhawan divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X