»   » ಆಹಾ ! ಸಮೀರಾ ರೆಡ್ಡಿಗೆ ಮದ್ವೆಯಂತೆ

ಆಹಾ ! ಸಮೀರಾ ರೆಡ್ಡಿಗೆ ಮದ್ವೆಯಂತೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಭಾರತದ ಬಹು ಜನಪ್ರಿಯ ರೂಪದರ್ಶಿ ಸಮೀರಾ ರೆಡ್ಡಿಗೆ ಮದುವೆಯಾಗೋ ಮನಸ್ಸು ಬಂದಿದೆಯಂತೆ. ಹಲವಾರು ಭಾಷೆಗಳಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡಿರುವ ಸಮೀರಾಗೆ ಉದ್ಯಮಿ ಅಕ್ಷಯ್ ವರ್ಡೆ ಜತೆ ಲಗ್ನವಾಗೋ ಕಾಲ ಕೂಡಿ ಬಂದಿದೆ.

ಕನ್ನಡದಲ್ಲಿ ವರದ ನಾಯಕ ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಕಾಣಿಸಿಕೊಂಡಿದ್ದ ಸಮೀರಾ ರೆಡ್ಡಿ ಇತ್ತೀಚೆಗೆ ಭಾರಿ ಸುದ್ದಿ ಮಾಡಿದ್ದರು. ಚಿತ್ರವೊಂದರಲ್ಲಿ ಹೆಜ್ಜೆ ಹಾಕಲು ಬರೋಬ್ಬರಿ ರು.50 ಲಕ್ಷ ಎಣಿಸುವ ಸಮೀರಾ ಇದ್ದಕ್ಕಿದ್ದಂತೆ ಅರೆ ನಗ್ನ ಪೋಸ್ ನೀಡಿ ಫ್ಯಾಷನ್ ಪರೇಡ್ ನಲ್ಲಿ ಕಾಣಿಸಿಕೊಂಡಿದ್ದರು. ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ನಲ್ಲಿ ಸಮೀರಾ ಉಡುಗೆ ಕಂಡು ಅಭಿಮಾನಿಗಳು ಕೂಡಾ ಬೆಚ್ಚಿದ್ದರು.

ಈಗ ಮದುವೆ ಮಾತೆತ್ತಿರುವ ಚೆಲುವೆ ಮದುವೆಯಾದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ಸುಳಿವು ಕೊಟ್ಟಿರುವುದು ಅವರ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಆಗಿದೆ. ಕಳೆದ ಡಿಸೆಂಬರ್ 14ರಂದೇ ಉದ್ಯಮಿ ಅಕ್ಷಯ್ ಜತೆ ಸಮೀರಾಗೆ ನಿಶ್ಚಿತಾರ್ಥ ಆಗಿದೆಯಂತೆ. ಹತ್ತಿರದ ಸಂಬಂಧಿಗಳು, ಗೆಳೆಯ ಗೆಳತಿಯರು ಮಾತ್ರ ಕಾರ್ಯಕ್ರಮಕ್ಕೆ ಹೋಗಿದ್ದರು ಎಂಬ ಸುದ್ದಿಯಿದೆ. ಆದರೆ, ಮದುವೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ಅಕ್ಷಯ್ ಮೇಲೆ ಸಮೀರಾಗೆ ಪ್ರೇಮಾಂಕುರವಾಗಲು ಕ್ಷಣ ಕಾಲ ಸಾಕಾಯಿತಂತೆ. ಇಬ್ಬರ ಪ್ರೇಮಕ್ಕೆ ಮದುವೆಗೆ ಎರಡು ಕಡೆ ಮನೆಯವರು ಒಪ್ಪಿಗೆ ನೀಡಿದ್ದಾರಂತೆ.

ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಬೈಕ್ ತಯಾರಿಸುವ ಕಂಪನಿ ಹೊಂದಿರುವ ಅಕ್ಷಯ್ ಈಗ ಸಮೀರಾ ಜತೆ ಜೀವನ ಪಯಣ ಆರಂಭಿಸಲಿದ್ದಾರೆ. ಅಕ್ಷಯ್ ವರ್ಡೆ ಅವರ ಕಂಪನಿ ತಯಾರಿಸಿದ ಬೈಕನ್ನು ಇತ್ತೀಚೆಗೆ ತುಂಬಾ ಚರ್ಚೆಗೊಳಗಾದ ಓ ಮೈ ಗಾಡ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಬಳಸಿದ್ದರು.

ಬಾಲಿವುಡ್ ಅಂಗಳಕ್ಕೆ 2002ರಲ್ಲಿ ಮೈನೆ ದಿಲ್ ತುಜ್ಕೋ ದಿಯಾ ಚಿತ್ರದ ಮೂಲಕ ಕಾಲಿಟ್ಟ ಸಮೀರಾ ನಂತರ ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಅಸಲ್, ವಾರಣಂ ಆಯಿರಂ, ನಾಡುನಿಸಿ ನಾಯ್ಗಲ್, ವೇಡಿ, ವೆಟೈ ಚಿತ್ರಗಳಲ್ಲಿ ಉತ್ತಮ ಅಭಿನಯ ನೀಡಿದ್ದಾರೆ. ಈಗ ಸೂರ್ಯ ಜತೆ ಧೃವ ನಕ್ಷತ್ರಂ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಯಾಕೋ ಚಿತ್ರ ಮುಂದುವರೆದಿಲ್ಲ.

ಸಮೀರಾ ಬೆಕ್ಕಿನ ನಡಿಗೆ

ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ನಲ್ಲಿ ಸಮೀರಾ ಕಾಣಿಸಿಕೊಂಡಿದ್ದು ಹೀಗೆ

ಸಮೀರಾ ಬೆಕ್ಕಿನ ನಡಿಗೆ

ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ನಲ್ಲಿ ಸಮೀರಾ ಕಾಣಿಸಿಕೊಂಡಿದ್ದು ಹೀಗೆ

ಸಮೀರಾ ಬೆಕ್ಕಿನ ನಡಿಗೆ

ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ನಲ್ಲಿ ಸಮೀರಾ ಕಾಣಿಸಿಕೊಂಡಿದ್ದು ಹೀಗೆ

ಸಮೀರಾ ಬೆಕ್ಕಿನ ನಡಿಗೆ

ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ನಲ್ಲಿ ಸಮೀರಾ ಕಾಣಿಸಿಕೊಂಡಿದ್ದು ಹೀಗೆ

ಸಮೀರಾ ಬೆಕ್ಕಿನ ನಡಿಗೆ

ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ನಲ್ಲಿ ಸಮೀರಾ ಕಾಣಿಸಿಕೊಂಡಿದ್ದು ಹೀಗೆ

ಸಮೀರಾ ಬೆಕ್ಕಿನ ನಡಿಗೆ

ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್ ಟೂರ್ ನಲ್ಲಿ ಸಮೀರಾ ಕಾಣಿಸಿಕೊಂಡಿದ್ದು ಹೀಗೆ

English summary
After donning grease paint for over a decade, gorgeous Sameera Reddy seems to be ready to bid goodbye to films. The actress is getting ready to marry businessman named Akshai Varde.
Please Wait while comments are loading...