"ಸ್ತನಗಳ ಗಾತ್ರ ಹೆಚ್ಚಿಸಿಕೊಳ್ಳಿ ಅಂದ್ರು.. ಕೊನೆಗೆ ಪ್ಯಾಡ್ಸ್ ಬಳಸಿದ್ದೆ"; ಸಮೀರಾ ರೆಡ್ಡಿ

ಮುಂಬೈ ಬೆಡಗಿ ಸಮೀರಾ ರೆಡ್ಡಿ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದರು. ಮದುವೆ ನಂತರ ಸಿನಿಮಾಗಳಿಗೆ ಗುಡ್‌ಬೈ ಹೇಳಿ ಫ್ಯಾಮಿಲಿ ಜೊತೆ ಲೈಫ್ ಲೀಡ್ ಮಾಡುತ್ತಿದ್ದಾರೆ. 'ಮೆಸ್ಸಿ ಮಾಮ' ಹೆಸರಿನಲ್ಲಿ ತಮ್ಮ ಅತ್ತೆ ಜೊತೆ ಸೇರಿ ಆನ್‌ಲೈನ್ ಸೀರಿಸ್‌ ಮಾಡುತ್ತಿರುತ್ತಾರೆ. ಸಮೀರಾ ಮತ್ತೊಮ್ಮೆ ತಮಗಾದ ಬಾಡಿ ಶೇಮಿಂಗ್ ಕಹಿ ಅನುಭವ ಹಂಚಿಕೊಂಡಿದ್ದಾರೆ.

ಮುಂಬೈ ಬೆಡಗಿ ಸಮೀರಾ ರೆಡ್ಡಿ ಮಾಡೆಲಿಂಗ್ ಫೀಲ್ಡ್‌ನಿಂದ ಚಿತ್ರರಂಗಕ್ಕೆ ಬಂದವರು. 'ಮೈನೆ ದಿಲ್ ತುಜ್ಕೊ ದಿಯಾ' ಎನ್ನುವ ಸಿನಿಮಾದಲ್ಲಿ ಮೊದಲಿಗೆ ನಟಿಸಿದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಬಂದರು. ಸಮೀರಾ ಒಳ್ಳೆ ಪಾತ್ರಗಳಲ್ಲಿ ನಟಿಸಿದ್ದಕ್ಕಿಂತ ಗ್ಲಾಮರ್ ಡಾಲ್ ಆಗಿ ಮಿಂಚಿದ್ದೇ ಹೆಚ್ಚು. 'ಪ್ಲ್ಯಾನ್', 'ಮುಸಾಫೀರ್' ಹೀಗೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದ ಬಳಿಕ ಟಾಲಿವುಡ್ ಕಡೆ ಮುಖ ಮಾಡಿದ್ದರು.

Sameera Reddy recalls again being body shamed, and also how she deals with that

ಕನ್ನಡದಲ್ಲಿ ಮಾಲಾಶ್ರೀ ನಟನೆಯ 'ದುರ್ಗಿ' ಚಿತ್ರದ ತೆಲುಗು ವರ್ಷನ್‌ನಲ್ಲಿ ಜ್ಯೂ. ಎನ್‌ಟಿಆರ್ ಹೀರೊ ಆಗಿ ನಟಿಸಿದ್ದರು. ಆ ಚಿತ್ರಕ್ಕೆ ಸಮೀರಾ ರೆಡ್ಡಿ ನಾಯಕಿಯಾಗಿ ಆಯ್ಕೆ ಆಗಿದ್ದರು. ಬಳಿಕ ಚಿರಂಜೀವಿ ಜೊತೆ 'ಜೈ ಚಿರಂಜೀವ' ಮತ್ತೆ ಎನ್‌ಟಿಆರ್‌ ಜೊತೆ 'ಅಶೋಕ್' ಸಿನಿಮಾಗಳಲ್ಲಿ ಬಿಂದಾಸ್ ಬೆಡಗಿ ತೆರೆಹಂಚಿಕೊಂಡಿದ್ದರು. ಅದೇ ಸಮಯದಲ್ಲಿ ತಾರಕ್ ಜೊತೆ ಸಮೀರಾ ಹೆಸರು ತಳುಕು ಹಾಕಿಕೊಂಡಿತ್ತು.

ಜ್ಯೂ. ಎನ್‌ಟಿಆರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವದಂತಿ ಕೇಳಿಬರುತ್ತಿದ್ದಂತೆ ತೆಲುಗು ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಕಮ್ಮಿ ಮಾಡಿದ್ದರು. ಈ ವಿಚಾರವನ್ನು ಆಕೆಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಬಳಿಕ ತಾರಕ್‌ ಜೊತೆಗೆ ಅಂತಹ ಕಾಯ್ದುಕೊಳ್ಳಲು ಆರಂಭಿಸಿದ್ದಾಗಿ ಬಳಿಕ ಮದುವೆ ಆಗಿದ್ದರು. ಇದೇ ಕಾರಣಕ್ಕೆ ತೆಲುಗು ಸಿನಿಮಾಗಳಿಂದ ದೂರಾಗಿದ್ದಾಗಿ ಸಮೀರಾ ವಿವರಿಸಿದ್ದರು.

ಬಳಿಕ ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲಿ ಮಾತ್ರ ಸಮೀರಾ ರೆಡ್ಡಿ ಬಣ್ಣ ಹಚ್ಚಿದ್ದರು. ಮದುವೆಗೂ ಮುನ್ನ ಕನ್ನಡದ 'ವರದನಾಯಕ' ಚಿತ್ರದಲ್ಲಿ ಆಕೆ ನಟಿಸಿದ್ದರು. ಅಯ್ಯಪ್ಪ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್, ಚಿರಂಜೀವಿ ಸರ್ಜಾ ಜೊತೆಯಾಗಿ ನಟಿಸಿದ್ದರು. ಸುದೀಪ್ ಜೋಡಿಯಾಗಿ ಸಮೀರಾ ಮಿಂಚಿದ್ದರು.

Sameera Reddy recalls again being body shamed, and also how she deals with that

ನಟಿ ಸಮೀರಾ ರೆಡ್ಡಿ ಚಿತ್ರರಂಗದಲ್ಲಿ ತಮಗಾದ ಬಾಡಿ ಶೇಮಿಂಗ್ ವಿಚಾರವನ್ನು ಸಾಕಷ್ಟು ಬಾರಿ ಹಂಚಿಕೊಂಡಿದ್ದಾರೆ. ಮತ್ತೊಮ್ಮೆ ಈ ಬಗ್ಗೆ ಮಾತನಾಡಿದ್ದಾರೆ. "ನಾನು ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ನನ್ನ ಸ್ತನಗಳ ಸೈಜ್ ಚಿಕ್ಕದಾಗಿ ಇರುವುದರ ಬಗ್ಗೆ ವ್ಯಂಗ್ಯವಾಡಿದ್ದರು. ಸರ್ಜರಿ ಮಾಡಿಸಿಕೊಳ್ಳುವಂತೆ ಕೆಲವರು ಸಲಹೆ ನೀಡಿದ್ದರು. ಇಂತಹ ಕಾಮೆಂಟ್‌ಗಳು ನನ್ನ ಮೇಲೆ ಒತ್ತಡಕ್ಕೆ ಕಾರಣವಾಗಿತ್ತು" ಎಂದಿದ್ದಾರೆ.

"ಸರ್ಜರಿ ಬಗ್ಗೆ ಎಲ್ಲರೂ ಹೇಳುವುದನ್ನು ಕೇಳಿ ಆ ಬಗ್ಗೆ ನಾನು ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿದೆ. ಸರ್ಜರಿಯಿಂದ ಏನೆಲ್ಲಾ ಆಗಬಹುದು ಎನ್ನುವ ಬಗ್ಗೆ ವಿಚಾರಿಸಿದೆ. ಒಂದು ಹಂತದಲ್ಲಿ ಸರ್ಜರಿ ಮಾಡಿಸಿಕೊಳ್ಳಬೇಕು ಎನ್ನುವ ನಿರ್ಣಯಕ್ಕೆ ಬಂದುಬಿಟ್ಟಿದ್ದೆ. ಬಳಿಕ ಯಾಕೋ ನಿರ್ಧಾರ ಬದಲಿಸಿಕೊಂಡೆ" ಎಂದು ಸಮೀರಾ ರೆಡ್ಡಿ ಹೇಳಿದ್ದಾರೆ.

"ಸಿನಿಮಾಗಳಲ್ಲಿ ಸ್ತನಗಳ ಗಾತ್ರ ದೊಡ್ಡದಾಗಿ ಕಾಣಿಸಲು ಪ್ಯಾಡ್ಸ್ ಬಳಸುತ್ತಿದ್ದೆ. ಒಂದು ವೇಳೆ ನಾನು ಸರ್ಜರಿ ಮಾಡಿಸಿಕೊಂಡಿದ್ದರೆ ಸಂತೋಷವಾಗಿ ಇರುತ್ತಿರಲಿಲ್ಲ. ಹಾಗಾಗಿ ಸರ್ಜರಿ ಮಾಡಿಸಿಕೊಳ್ಳುವಂತೆ ಯಾರಿಗೂ ಸಲಹೆ ನೀಡುವುದಿಲ್ಲ" ಎಂದಿದ್ದಾರೆ. 2014ರಲ್ಲಿ ಸಮೀರಾ ರೆಡ್ಡಿ ಅಕ್ಷೈ ವಾರ್ದೆ ಎಂಬುವವರ ಕೈ ಹಿಡಿದರು. ದಂಪತಿಗೆ ಒಬ್ಬ ಮಗ, ಒಬ್ಬಳು ಮಗಳು ಇದ್ದಾರೆ.

More from Filmibeat

English summary
Sameera Reddy Reveals Her Experience Of Body Shaming In film industry
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X