For Quick Alerts
  ALLOW NOTIFICATIONS  
  For Daily Alerts

  ಹೇಗಿದ್ದ ನಟಿ ಹೇಗಾಗಿಬಿಟ್ಟರು: 'ವರದನಾಯಕ'ನ ನಾಯಕಿಯ ಹೊಸ ಅವತಾರ ನೋಡಿ

  |

  ಕನ್ನಡದ 'ವರದನಾಯಕ' ಸಿನಿಮಾದಲ್ಲಿ ನಟಿಸಿದ್ದ ನಟಿ ಸಮೀರಾ ರೆಡ್ಡಿ ಸಿನಿಮಾಗಳಿಂದ ಬಹುತೇಕ ದೂರವಾಗಿಬಿಟ್ಟಿದ್ದಾರೆ. ತಾವಾಯಿತು ತಮ್ಮ ಕುಟುಂಬವಾಯಿತು ಹಾಗೂ ಸಾಮಾಜಿಕ ಜಾಲತಾಣವಾಯಿತೆಂದು ಆರಾಮವಾಗಿದ್ದಾರೆ.

  ಸಿನಿಮಾದಿಂದ ದೂರ ಉಳಿದು ಕುಟುಂಬದ ಬಗ್ಗೆ ಹೆಚ್ಚು ಗಮನವಹಿಸಿದ್ದರಿಂದ ಸಮೀರಾ ದೇಹ ಸೌಂದರ್ಯ ಇತರೆ ವಿಷಯಗಳ ಬಗ್ಗೆ ಗಮನ ನೀಡಿರಲಿಲ್ಲ. ಹಾಗಾಗಿ ಸುಂದರವಾಗಿ, ಸಪೂರವಾಗಿದ್ದ ಸಮೀರ ದಪ್ಪಗಾಗಿದ್ದರು. ಆದರೆ ತಮ್ಮ ದೇಹಾಕಾರದಲ್ಲಾದ ಬದಲಾವಣೆಯನ್ನು ಯಾವುದೇ ಅಂಜಿಕೆಯಿಲ್ಲದೆ ಸಾಮಾಜಿಕ ಜಾಲತಾಣದಲ್ಲಿ ತೋರಿಸಿದ್ದ ನಟಿ ಸಮೀರಾ, ತಾಯಿಯಾದ ನಂತರ ಇದು ಸಾಮಾನ್ಯ ಬದಲಾವಣೆ ಬಾಹ್ಯ ಸೌಂದರ್ಯ ಹೋಯಿತೆಂದು ಬೇಸರವಿಲ್ಲ ಎಂದಿದ್ದರು.

  ಆದರೆ ನಟಿ ಸಮೀರ ಈಗ ಮತ್ತೆ ಬದಲಾಗಿದ್ದಾರೆ, ದಪ್ಪಗಿದ್ದ ಸಮೀರ ಈಗ ಮತ್ತೆ ತಮ್ಮ ಹಳೆಯ 'ಹೀರೋಯಿನ್' ಲುಕ್‌ನ ಹತ್ತಿರಕ್ಕೆ ಬಂದಿದ್ದಾರೆ. ತಮ್ಮ ಬದಲಾವಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಟಿ ಸಮೀರಾ ರೆಡ್ಡಿ.

  ಎರಡು ಚಿತ್ರ ಹಂಚಿಕೊಂಡಿರುವ ಸಮೀರಾ

  ಎರಡು ಚಿತ್ರ ಹಂಚಿಕೊಂಡಿರುವ ಸಮೀರಾ

  ತಮ್ಮದೇ ಎರಡು ಚಿತ್ರವನ್ನು ಸಮೀರಾ ರೆಡ್ಡಿ ಹಂಚಿಕೊಂಡಿದ್ದಾರೆ. ಒಂದರಲ್ಲಿ ಬಹಳ ದಪ್ಪಗಿರುವ ಸಮೀರಾ, ಎರಡನೇ ಚಿತ್ರದಲ್ಲಿ ಸಾಕಷ್ಟು ತೆಳ್ಳಗಾಗಿದ್ದಾರೆ. ಚಿತ್ರಕ್ಕೆ ಒಕ್ಕಣೆ ಬರೆದಿರುವ ಸಮೀರಾ, ''ಚಿತ್ರಗಳು ಹೇಗೆ ನಮ್ಮನ್ನು ಮೋಸ ಮಾಡುತ್ತವೆ ನೋಡಿ. ನಾನು ತೆಳ್ಳಗಾಗಿದ್ದೇನೆ ನಿಜ ಆದರೆ ನನಗೆ ಇನ್ನೂ ಬೊಜ್ಜು ಇದೆ. ಅದು ಇನ್ನು ಕೆಲವು ದಿನಗಳಲ್ಲಿ ಹೋಗಲಿದೆ'' ಎಂದಿದ್ದಾರೆ.

  ಫಿಟ್‌ನೆಸ್ ಗುಟ್ಟು ಹಂಚಿಕೊಂಡ ಸಮೀರಾ

  ಫಿಟ್‌ನೆಸ್ ಗುಟ್ಟು ಹಂಚಿಕೊಂಡ ಸಮೀರಾ

  ತಮ್ಮ ಫಿಟ್‌ನೆಸ್‌ ಗುಟ್ಟು ಹಂಚಿಕೊಂಡಿರುವ ಸಮೀರಾ ರೆಡ್ಡಿ, ''ನಾನು ಭಿನ್ನರೀತಿಯ ಉಪವಾಸ (ಇಂಟರ್‌ಮಿಟೆಂಟ್ ಫಾಸ್ಟಿಂಗ್) ಮಾಡಿದೆ ಜೊತೆಗೆ ಬಿಡದೆ ಯೋಗ ಮಾಡಿದೆ. ಆಹಾರ ಪದ್ಧತಿಯಲ್ಲಿ ತುಸು ಬದಲಾವಣೆ ಮಾಡಿಕೊಂಡೆ ಹಾಗೂ ವಾರಕ್ಕೆ ನಾಲ್ಕು ದಿನ ಬ್ಯಾಡ್ಮಿಂಟನ್ ಆಡಿದೆ. ನನ್ನ ದೇಹದ ತೂಕದಲ್ಲಿ ದೊಡ್ಡ ಬದಲಾವಣೆಯೇ ಕಾಣಿಸಿಕೊಂಡಿತು. ಕೆಲವೇ ತಿಂಗಳಲ್ಲಿ ನಾನು ನನ್ನ ಗುರಿ ಮುಟ್ಟಲಿದ್ದೇನೆ'' ಎಂದಿದ್ದಾರೆ ಸಮೀರ.

  ವಿಡಿಯೋ ಹಂಚಿಕೊಂಡಿದ್ದ ಸಮೀರಾ

  ವಿಡಿಯೋ ಹಂಚಿಕೊಂಡಿದ್ದ ಸಮೀರಾ

  ಕೆಲವು ತಿಂಗಳ ಹಿಂದೆ ತಾವು ದಪ್ಪಗಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿದ್ದರು ಸಮೀರಾ ರೆಡ್ಡಿ. ಅಂದ ಹೋಯಿತೆಂದು ಅಪಮಾನ ಪಟ್ಟುಕೊಳ್ಳದಿರಿ ನಿಮ್ಮನ್ನು ನೀವು ಪ್ರೀತಿಸಿ ಎಂದು ಹೇಳಿದ್ದರು. ''ಇದು ನನ್ನ ನಿಜ ಬಣ್ಣ, ನನ್ನ ಕೂದಲು ಬೆಳ್ಳಗಾಗಿವೆ, ಕತ್ತಿನ ಭಾಗದಲ್ಲಿ ಹೆಚ್ಚಿನ ಚರ್ಮ ಬೆಳೆದಿದೆ. ಹೊಟ್ಟೆ ದಪ್ಪಗಾಗಿದೆ'' ಎಂದೆಲ್ಲಾ ವಿಡಿಯೋದಲ್ಲಿ ಧೈರ್ಯವಾಗಿ ತೋರಿಸಿದ ಸಮೀರಾ, ಬಾಡಿ ಶೇಮಿಂಗ್‌ಗೆ ಹೆದರಿದವರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದರು.

  ಮುಂಬೈನಿಂದ ಅಭಿಮಾನಿಗೆ ಬುದ್ದಿ ಹೇಳಿದ ರಶ್ಮಿಕ! | Filmmibeat Kannada
  ನನ್ನ ದೇಹಕ್ಕೆ ನಾನೇ ಅವಮಾನ ಮಾಡುತ್ತಿದ್ದೆ: ಸಮೀರಾ

  ನನ್ನ ದೇಹಕ್ಕೆ ನಾನೇ ಅವಮಾನ ಮಾಡುತ್ತಿದ್ದೆ: ಸಮೀರಾ

  ಮತ್ತೊಂದು ಪೋಸ್ಟ್‌ನಲ್ಲಿ, ''ನಾನು ಏನೂ ಅರಿಯದೆ ಸಿನಿಮಾ ಉದ್ಯಮಕ್ಕೆ ಹೋದೆ ಆಗ ನಾನು ನನ್ನನ್ನು ಇತರ ನಟಿಯರೊಟ್ಟಿಗೆ ಹೋಲಿಸಿ ನೋಡುತ್ತಿದ್ದೆ. ಬಣ್ಣ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದ್ದೆ. ಕಣ್ಣಿಗೆ ಲೆನ್ಸ್ ಹಾಕಿಕೊಳ್ಳುತ್ತಿದ್ದೆ. ದೇಹದ ಹಲವು ಭಾಗಗಳಿಗೆ ಪ್ಯಾಡ್‌ಗಳನ್ನಿಟ್ಟುಕೊಳ್ಳುತ್ತಿದ್ದೆ. ಆದರೆ ಆ ನಂತರ ನನಗೆ ಅರ್ಥವಾಯಿತು. ನಾನು ನನ್ನ ದೇಹಕ್ಕೆ ಎಷ್ಟು ಅವಮಾನ ಮಾಡಿದ್ದೆ ಎಂದು'' ಎಂದು ಹೇಳಿಕೊಂಡಿದ್ದರು.

  English summary
  Actress Sameera Reddy shared her body transformation photos. She shared her experience and fitness formula.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X