For Quick Alerts
  ALLOW NOTIFICATIONS  
  For Daily Alerts

  ನಟ ಸಲ್ಮಾನ್ ಹತ್ಯೆಗೆ ಸ್ಕೆಚ್ ಹಾಕಿದ್ದ ಪಾತಕಿ ಬಂಧನ

  By Mahesh
  |

  ಮುಂಬೈ, ಜೂನ್ 10: ನಟ ಸಲ್ಮಾನ್ ಖಾನ್ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದ ಶಾರ್ಪ್ ಶೂಟರ್ ಸಂಪತ್ ನೆಹ್ರಾ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

  ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗಿನ ಸದಸ್ಯನಾಗಿರುವ ಸಂಪತ್ ನೆಹ್ರಾ, ಜನವರಿ ತಿಂಗಳಿನಲ್ಲಿ ಸಲ್ಮಾನ್ ಖಾನ್ ಮನೆ, ಸಲ್ಮಾನ್ ಓಡಾಡುವ ದಾರಿಯನ್ನು ಮೊಬೈಲ್ ಮೂಲಕ ಚಿತ್ರೀಕರಿಸಿದ್ದನು. ಕೃಷ್ಣಮೃಗ ಕೇಸಿಗೆ ಸಂಬಂಧಿಸಿದಂತೆ ಸಲ್ಮಾನ್ ಕೊಲ್ಲುವುದಾಗಿ ಬಿಷ್ಣೋಯಿ, ಈ ಹಿಂದೆ ಬೆದರಿಕೆ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

  ರಾಜಸ್ತಾನದ ಬಿಷ್ಣೋಯಿ ಸಮುದಾಯದ ಸಂಪತ್, ಸಲ್ಮಾನ್ ಹತ್ಯೆಗೆ ಯೋಜನೆ ರೂಪಿಸಿದ್ದ ಹಾಗೂ ಕಾರ್ಯ ಮುಗಿದ ಕೂಡಲೇ ವಿದೇಶಕ್ಕೆ ಹಾರಲು ಸಿದ್ಧತೆ ನಡೆಸಿದ್ದ.

  ಕೃಷ್ಣಮೃಗ ಕೇಸಿನಲ್ಲಿ ಜೋಧಪುರದ ಸೆಂಟ್ರಲ್ ಜೈಲಿನಲ್ಲಿ ಎರಡು ರಾತ್ರಿ ಕಳೆದ ಸಲ್ಮಾನ್ ಖಾನ್ ನಂತರ ಜಾಮೀನು ಪಡೆದು ಹೊರ ಬಂದಿದ್ದಾರೆ.

  ನೆಹ್ರಾನನ್ನು ಜೂನ್ 06ರಂದು ಹೈದರಾಬಾದಿನಲ್ಲಿ ಬಂಧಿಸಿದ ಪೊಲೀಸರು, ವಿಚಾರಣೆಗೊಳಪಡಿಸಿದಾಗ, ಸಲ್ಮಾನ್ ಹತ್ಯೆಯ ಸಂಚು ತಿಳಿದು ಬಂದಿದೆ.

  English summary
  Sampat Nehrawas a sharpshooter with the notorious Lawrence Bishnoi gang. Bishnoi had threatened to kill Salman Khan in January.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X