ವೀಕೆಂಡ್‌ನಲ್ಲಿ ಆಗಲಿಲ್ಲ ಕಮಾಲ್: ನಷ್ಟದಲ್ಲಿ ಸಾಗುತ್ತಿರುವ ಅಕ್ಷಯ್ ಕುಮಾರ್ ಸಿನಿಮಾ
ಅಕ್ಷಯ್ ಕುಮಾರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಭಾರಿ ದೊಡ್ಡ ನಿರೀಕ್ಷೆ ಹುಟ್ಟಿಸಿತ್ತು. ಭಾರಿ ಬಜೆಟ್‌ನ ಈ ಸಿನಿಮಾ ದೊಡ್ಡ ಹಿಟ್ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಎಲ್ಲವೂ ಉಲ್ಟಾ ಆಗಿದೆ.
ರಾಜಾ ಪೃಥ್ವಿರಾಜ್ ಚೌಹಾಣ್ ಜೀವನ ಕುರಿತ ಅಕ್ಷಯ್ ಕುಮಾರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಕಳೆದ ಶುಕ್ರವಾರ (ಜೂನ್ 03) ರಂದು ಬಿಡುಗಡೆ ಆಗಿತ್ತು. 300 ಕೋಟಿ ಬಜೆಟ್‌ನ ಈ ಸಿನಿಮಾದ ಮೇಲೆ ಬಹು ದೊಡ್ಡ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ.
ಬಿಡುಗಡೆ ಆದ ದಿನ ತೀರ ಕಳಪೆ ಕಲೆಕ್ಷನ್ ಮಾಡಿತ್ತು 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ. 300 ಕೋಟಿ ಬಜೆಟ್‌ನ ಬಜೆಟ್‌ನ ಈ ಸಿನಿಮಾ ಬಿಡುಗಡೆ ಆದ ಮೊದಲ ದಿನ ಗಳಿಸಿದ್ದು ಕೇವಲ 10 ಕೋಟಿ. ಆದರೆ ವಾರಾಂತ್ಯದಲ್ಲಿ ಸಿನಿಮಾ ಒಳ್ಳೆಯ ಗಳಿಕೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ವಿಫಲವಾಗಿದೆ. ಸಿನಿಮಾದ ಕಲೆಕ್ಷನ್ ದಿನವೊಂದಕ್ಕೆ 20 ಕೋಟಿ ದಾಟುತ್ತಿಲ್ಲ.

ಶುಕ್ರವಾರ-ಶನಿವಾರದ ಕಲೆಕ್ಷನ್ ಎಷ್ಟು?
'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಏಕಕಾಲಕ್ಕೆ ಸುಮಾರು 4000 ಪರದೆಗಳಲ್ಲಿ ಬಿಡುಗಡೆ ಆಗಿತ್ತು. ಭಾರಿ ಬಜೆಟ್‌ನ ಈ ಸಿನಿಮಾಕ್ಕೆ ದೊಡ್ಡ ಮಟ್ಟದ ಪ್ರಚಾರದ ಬಲವೂ ದೊರಕಿತ್ತು. ಹಾಗಿದ್ದರೂ ಸಹ ಮೊದಲ ದಿನ ಕೇವಲ 10.70 ಕೋಟಿ ಗಳಿಸಿತು ಈ ಸಿನಿಮಾ. ಆದರೆ ವಾರಾಂತ್ಯದಲ್ಲಿ ಕಲೆಕ್ಷನ್ ಉತ್ತಮವಾಗುವ ನಿರೀಕ್ಷೆ ಇತ್ತು. ಆದರೆ ವಾರಾಂತ್ಯದ ಮೊದಲ ವಾರವಾದ ಶನಿವಾರ ಈ ಸಿನಿಮಾ ಗಳಿಸಿದ್ದು 12.60 ಕೋಟಿಯಷ್ಟೆ. ಶುಕ್ರವಾರದ ಕಲೆಕ್ಷನ್‌ಗಿಂತ ಕೇವಲ 1.90 ಕೋಟಿಯಷ್ಟೆ ಹೆಚ್ಚಿನ ಕಲೆಕ್ಷನ್ ಮಾಡಿತು ಸಿನಿಮಾ.

ಭಾನುವಾರದ ಕಲೆಕ್ಷನ್ ತುಸು ಪರವಾಗಿಲ್ಲ
ಮೊದಲ ದಿನಕ್ಕಿಂತಲೂ ಶನಿವಾರದ ಕಲೆಕ್ಷನ್ ತುಸು ಹೆಚ್ಚಾಗಿದ್ದ ಕಾರಣ, ಭಾನುವಾರದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಚಿತ್ರತಂಡಕ್ಕೆ ಇತ್ತು. ನಿರೀಕ್ಷೆಯಂತೆಯೇ ಭಾನುವಾರ ಸಿನಿಮಾದ ಕಲೆಕ್ಷನ್ ಹೆಚ್ಚಾಗಿದೆ ಆದರೆ ಸಿನಿಮಾ ನಷ್ಟದಿಂದ ಪಾರಾಗುವಷ್ಟು ಕಲೆಕ್ಷನ್ ಆಗಿಲ್ಲ. ಭಾನುವಾರ 'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾ ಗಳಿಸಿರುವುದು ಸುಮಾರು 16 ಕೋಟಿ ಮಾತ್ರ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಅಕ್ಷಯ್ ಕುಮಾರ್ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತವೆ, ಆದರೆ ಈ ಸಿನಿಮಾ ಕೇವಲ 16 ಕೋಟಿ ಗಳಿಸಿರುವುದು ಬಹಳ ಕಡಿಮೆ ಎನ್ನಲಾಗುತ್ತಿದೆ.

ಕೇವಲ 10 ಪರ್ಸೆಂಟ್ ಬಂಡವಾಳವಷ್ಟೆ ಹಿಂದಿರುಗಿದೆ
ಮೊದಲ ದಿನ 10.70 ಕೋಟಿ, ಎರಡನೇ ದಿನ 12.60 ಕೋಟಿ. ಈಗ ಮೂರನೇ ದಿನ 16 ಕೋಟಿ. ಒಟ್ಟು 39.30 ಕೋಟಿ ಕಲೆಕ್ಷನ್ ಅನ್ನು ಈವರೆಗೆ ಈ ಸಿನಿಮಾ ಮಾಡಿದ್ದು, ಹೂಡಿರುವ ಒಟ್ಟು ಬಂಡವಾಳದ ಕೇವಲ 10% ಅಷ್ಟೆ ಹಣ ವಾಪಸ್ಸಾಗಿದೆ. ಸಿನಿಮಾವು ಹಾಕಿರುವ ಬಂಡವಾಳವಾದರೂ ವಾಪಸ್ಸಾಗಲು ಇನ್ನೂ ಸಾಕಷ್ಟು ದೂರ ಸಾಗಬೇಕು. ಆದರೆ ಆ ಭರವಸೆ ತೀರ ಕಡಿಮೆ ಇದೆ. ಸೋಮವಾರದಿಂದ ಸಿನಿಮಾದ ಕಲೆಕ್ಷನ್ ಧಾರುಣವಾಗಿ ಕೆಳಗೆ ಬೀಳುವ ಸಾಧ್ಯತೆ ಇದೆ.

ಸಿನಿಮಾದ ಬಗ್ಗೆ ನೆಗೆಟಿವ್ ಅಭಿಪ್ರಾಯ
'ಸಾಮ್ರಾಟ್ ಪೃಥ್ವಿರಾಜ್' ಸಿನಿಮಾದ ಬಗ್ಗೆ ವಿಮರ್ಶಕರು ತೀರ ಕೆಟ್ಟ ಅಭಿಪ್ರಾಯವನ್ನೇನೂ ವ್ಯಕ್ತಪಡಿಸಿಲ್ಲ. ಆದರೆ ಐತಿಹಾಸಿಕ ಸಿನಿಮಾವೊಂದರಲ್ಲಿ ಇರಬೇಕಾದ ರೋಚಕ ಅಂಶಗಳು ಈ ಸಿನಿಮಾದಲ್ಲಿ ಕಡಿಮೆಯಿವೆ. ಪೃಥ್ವಿರಾಜ್ ಚೌಹಾಣದ ಜೀವನ ಕತೆಯ ಸಿನಿಮಾ ನೋಡಿದರೂ ಸಹ ಹೆಮ್ಮೆಯ ಅನುಭವ ಅಷ್ಟಾಗಿ ಮೂಡಿಬರುವುದಿಲ್ಲ. ತೀರಾ ಸಿನಿಮೀಯವಾಗಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಈಗಾಗಲೇ ಹಲವು ಐತಿಹಾಸಿಕ ಸಿನಿಮಾಗಳಲ್ಲಿ ನೋಡಿದ ದೃಶ್ಯಗಳೇ ಈ ಸಿನಿಮಾದಲ್ಲಿದೆ ಎಂಬ ಮಾತುಗಳು ಹೆಚ್ಚಾಗಿ ಕೇಳಿ ಬಂದಿವೆ.


Click it and Unblock the Notifications











