For Quick Alerts
  ALLOW NOTIFICATIONS  
  For Daily Alerts

  ಧರ್ಮದ ಕಾರಣಕ್ಕಾಗಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸನಾ ಖಾನ್

  |

  'ಜೈ ಹೋ' ಖ್ಯಾತಿಯ ನಟಿ ಸನಾ ಖಾನ್ ಇತ್ತೀಚಿಗಷ್ಟೆ ಚಿತ್ರರಂಗಕ್ಕೆ ವಿದಾಯ ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಹಾಕಿ ಮನರಂಜನಾ ಕ್ಷೇತ್ರಕ್ಕೆ ವಿದಾಯ ಹೇಳಿ ಧರ್ಮದ ಸೇವೆ ಮಾಡುವುದಾಗಿ ಹೇಳಿದ್ದರು. 33 ವರ್ಷದ ನಟಿ ಸನಾ ಖಾನ್ ಸಿನಿಮಾ ಮತ್ತು ಕಿರುತೆರೆ ಜೊತೆಗೆ ಬಿಗ್ ಬಾಸ್ ನಲ್ಲಿಯೂ ಕಾಣಿಸಿಕೊಂಡು ಸಾಕಷ್ಟು ಜನಪ್ರಿಯಗಳಿಸಿದ್ದರು.

  ಇದೀಗ ಸನಾ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೂರತ್ ನಲ್ಲಿ ನಡೆದ ಖಾಸಗಿ ಮದುವೆ ಸಮಾರಂಭದಲ್ಲಿ ಸನಾ ಖಾನ್, ಅನಸ್ ಸಯಾದ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತನ್ನ ಮದುವೆ ಫೋಟೋವನ್ನು ಹಾಗೂ ವಿಡಿಯೋವನ್ನು ಸನಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಧರ್ಮದ ಕಾರಣಕ್ಕಾಗಿ ಚಿತ್ರರಂಗಕ್ಕೆ ವಿದಾಯ ಹೇಳಿದ 'ಜೈ ಹೋ' ಖ್ಯಾತಿಯ ನಟಿ ಸನಾಧರ್ಮದ ಕಾರಣಕ್ಕಾಗಿ ಚಿತ್ರರಂಗಕ್ಕೆ ವಿದಾಯ ಹೇಳಿದ 'ಜೈ ಹೋ' ಖ್ಯಾತಿಯ ನಟಿ ಸನಾ

  ಫೋಟೋ ಜೊತೆಗೆ ಸನಾ, 'ಅಲ್ಲಾ ಸಲುವಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ, ಅಲ್ಲಾ ಸಲುವಾಗಿ ಮದುವೆಯಾಗಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

  ಮದುವೆಯಲ್ಲಿ ಸನಾ ಕೆಂಪು ಮತ್ತು ಗೋಲ್ಡ್ ಬಣ್ಣದ ಲೆಹೆಂಗಾ ಧರಿಸಿದ್ದಾರೆ. ಪತಿ ಅನಸ್ ಸರಳವಾಗಿ ಬಿಳಿ ಬಣ್ಣದ ಉಡುಪು ಧರಿಸಿದ್ದಾರೆ. ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

  ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಸನಾ ಚಿತ್ರಕ್ಕೆ ವಿದಾಯ ಹೇಳಿದ್ದರು. 'ನಿರ್ಗತಿಕ ಮತ್ತು ಅಸಹಾಯಕರ ಸೇವೆಯಲ್ಲಿ ಜೀವನವನ್ನು ಕಳೆಯುವುದು ಕರ್ತವ್ಯದ ಒಂದು ಭಾಗವಲ್ಲವೇ? ಒಬ್ಬ ವ್ಯಕ್ತಿ ಯಾವುದೆ ಕ್ಷಣದಲ್ಲಿ ಸಾಯಬಹುದು. ಸತ್ತಮೇಲೆ ಏನಾಗುತ್ತೆ? ನಾನು ದೀರ್ಘಕಾಲದ ವರೆಗೆ ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದೇನೆ. ಅದರಲ್ಲೂ ವಿಶೇಷವಾಗಿ ಮರಣಾನಂತರ ನನಗೆ ಏನಾಗಬಹುದು ಎನ್ನುವ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಧರ್ಮದಲ್ಲಿ ಉತ್ತರ ಹುಡುಕಿಕೊಂಡಿರುವುದಾಗಿ' ಹೇಳಿ ದೀರ್ಘವಾದ ಪೋಸ್ಟ್ ಹಾಕಿದ್ದರು.

  ಅಭಿಮಾನಿಗಳ ಮುಂದೆ ಕಣ್ಣೀರು ಹಾಕಿದ Rana Daggubati | Filmibeat Kannada

  ಬಾಲಿವುಡ್ ಸಿನಿಮಾಗಳ ಜೊತೆಗೆ ಸನಾ ಖಾನ್ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ವಿಶೇಷ ಎಂದರೆ ಕನ್ನಡದಲ್ಲಿಯೂ ಅಭಿನಯಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೂಲ್ ಸಿನಿಮಾದಲ್ಲಿ ಸನಾ ನಟಿಸಿದ್ದಾರೆ.

  English summary
  Actress Sana Khan shares first photo with Husband Anas Sayed After marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X