ಮತ್ತೊಂದು ಮಗುಗೆ ಜನ್ಮ ನೀಡಿದ ಸನಾ ಖಾನ್, ಮುಸ್ಲಿಂ ಧರ್ಮ ಗುರುನ ಮದ್ವೆಯಾಗಿರುವ ಗಣೇಶ್ ನಾಯಕಿ..!

ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವಂತಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಈ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ಇನ್ನು ನಿಜವಾದ ಪ್ರೀತಿಯ ಆಳಕ್ಕೆ ಇಳಿದು ನೋಡಿದಾಗ ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯಪೂರ್ವಕವಾಗಿರಬಾರದು ಎಂಬ ವಿಚಾರದ ಅರಿವು ಆಗುತ್ತೆ. ಹೀಗೆ ಅರಿತುಕೊಂಡು ಪ್ರೀತಿಯನ್ನು ಅರ್ಥ ಮಾಡಿಕೊಂಡು ಪ್ರೀತಿಗೋಸ್ಕರ ತನ್ನ ವೃತ್ತಿಯನ್ನೇ ತ್ಯಾಗ ಮಾಡಿ ಮುಸ್ಲಿಂ ಧರ್ಮಗುರುವಿನ ಕೈಯನ್ನು
ಹಿಡಿದವರು ಸನಾ ಖಾನ್.

2020ರ ಆಸು ಪಾಸು ಮಾನವೀಯತೆ ಮೇಲೆ ಕೆಲಸ ಮಾಡಿಕೊಂಡು, ಸೃಷ್ಟಿದಾತ ಹೇಳಿದ ನಿಯಮಗಳನ್ನು ಪಾಲಿಸುತ್ತೇನೆ. ನನಗೆ ಚಿತ್ರೋದ್ಯಮ ಹೆಸರು, ಹಣ, ಗೌರವ ಎಲ್ಲವನ್ನು ನೀಡಿದೆ. ಆದರೆ ಮನುಷ್ಯ ಹೆಸರು, ಹಣ ಮಾಡಲು ಭೂಮಿಗೆ ಬರುವುದಾ? ನನಗೆ ಇದು ಗೊತ್ತಾಯ್ತು. ಹೆಸರು, ಹಣಕ್ಕೋಸ್ಕರ ಇಡೀ ಜೀವನವನ್ನು ಕಳೆಯುವುದಲ್ಲ. ಹೀಗಾಗಿ ನಾನು ಬಣ್ಣದಲೋಕದಿಂದ ದೂರ ಹೋಗುವೆ ಎಂದು ಹೇಳಿ ಮೇಕಪ್ ಕಳಚಿದರು ಸನಾ.

sana-khan-who-starred-with-ganesh-in-cool-has-welcomed-her-second-baby

ಆ ನಂತರ ನವೆಂಬರ್ 21-2020ರಂದು ಮುಸ್ಲಿಂ ಧರ್ಮ ಗುರು ಮುಫ್ತಿ ಅನಾಸ್ ಸೈಯದ್ ಜೊತೆ ಸೂರತ್‌ನಲ್ಲಿ ಮದುವೆಯಾದರು. ಅಲ್ಲಾರಿಂದ ಇಬ್ಬರೂ ಪ್ರೀತಿಸಿದೆವು, ಅಲ್ಲಾರಿಂದಾಗಿ ಮದುವೆಯಾದೆವು, ಈ ಜಗತ್ತಿನಲ್ಲಿ ಅಲ್ಲಾ ನಮ್ಮಿಬ್ಬರನ್ನು ಒಟ್ಟಾಗಿ ಇಡಲಿ ಎಂದು ಪ್ರಾರ್ಥಿಸಿದ್ದರು. ನಾನು ಅನೇಕ ವರ್ಷಗಳ ಕಾಲ ಪ್ರಾರ್ಥಿಸಿದ ಫಲವಾಗಿ ಇಂತಹ ಗಂಡ ಸಿಕ್ಕಿದ್ದಾನೆ ಎಂದು ಹೇಳಿದ್ದರು. ಜುಲೈ 5-2023ರಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮವನ್ನು ನೀಡಿದ್ದರು.

ಇಂಥಾ ಸನಾ ಈಗ ಇನ್ನೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮತ್ತೊಮ್ಮೆ ತಾಯ್ತನದ ಸುಖವನ್ನು ಅನುಭವಿಸುತ್ತಿದ್ದಾರೆ. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್ ಹಂಚಿಕೊಂಡಿರುವ ಸನಾ ಖಾನ್ ದಯೆ ಮತ್ತು ಒಳ್ಳೆಯ ಮಾರ್ಗದಲ್ಲಿ ಅವನನ್ನು ಬೆಳೆಸಲು ನಿಮ್ಮ ನಂಬಿಕಸ್ಥ ಸೇವಕನನ್ನಾಗಿ ಮಾಡಲು ನಮಗೆ ಆಶೀರ್ವದಿಸಿ ಎಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡಿದ್ದಾರೆ. ನಮ್ಮ ಮನೆಗೆ ಮತ್ತೊಬ್ಬ ರಾಜಕುಮಾರ ಬಂದ ಖುಷಿಯ ವಿಚಾರವನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಲು ನನಗೆ ಖುಷಿಯಾಗುತ್ತಿದೆ ಎಂದಿದ್ದಾರೆ. ಜನವರಿ 5 2025ರಂದು ತನ್ನ ತಮ್ಮನಿಗೆ ಅವರ ಅಣ್ಣ ತಾರಿಕ್ ಜಮೀಲ್ ಸ್ವಾಗತವನ್ನು ಕೋರಿದ್ದಾನೆ ಎಂದು ಹೇಳಿದ್ದಾರೆ. ಫೋಸ್ಟ್ ಜೊತೆ ದೇವರು ಎಲ್ಲವನ್ನು ವಿಧಿಯಲ್ಲಿ ಬರೆದಿದ್ದಾನೆ. ಸರಿಯಾದ ಸಮಯಕ್ಕೆ ಅದನ್ನು ದಯಪಾಲಿಸುತ್ತಾನೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಸನಾ ಖಾನ್ ಅವರಿಗೆ ಅನೇಕರು ಶುಭಾಶಯವನ್ನು ಹೇಳುತ್ತಿದ್ದಾರೆ.

ಇನ್ನುಳಿದಂತೆ 2005ರಲ್ಲಿ ಚಿತ್ರರಂಗಕ್ಕೆ ಬಂದ ಸನಾ ಖಾನ್, ಅತ್ಯಲ್ಪ ಅವಧಿಯಲ್ಲಿಯೇ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದರು. ಹಿಂದಿ ಜೊತೆಯಲ್ಲಿ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು.'ಗಗನಂ', 'ಪಯಣಂ', 'ಕ್ಲೈಮ್ಯಾಕ್ಸ್', 'ಜೈಹೋ' 'ಹಲ್ಲಾಬೋಲ್' ಸನಾ ಖಾನ್ ಅಭಿನಯದ ಕೆಲ ಜನಪ್ರಿಯ ಚಿತ್ರಗಳು.

ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿ ಚೊಚ್ಚಲ ಬಾರಿ ನಿರ್ದೇಶಿಸಿದ್ದ ಚಿತ್ರ 'ಕೂಲ್' ಚಿತ್ರದಲ್ಲಿ ಕೂಡ ಸನಾ ನಾಯಕಿಯ ಪಾತ್ರ ನಿರ್ವಹಿಸಿದ್ದರು. ಕಾಜಲ್ ಎಂಬ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆಲ್ಲುವ ಪ್ರಯತ್ನ ಮಾಡಿದ್ದರು.

ಚಿತ್ರರಂಗದ ಆಚೆ ಸನಾ ಖಾನ್ ವಿವಾದಗಳಿಂದ ಕೂಡ ಹೆಸರುವಾಸಿಯಾಗಿದ್ದರು. 15 ವರ್ಷದ ಬಾಲಕಿಯೊಬ್ಬಳ ಅಪಹರಣ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಹೈಸ್ಕೂಲ್‌ನಲ್ಲಿರುವಾಗಲೇ 'ಯೇ ಹೇ ಹೈ ಸೊಸೈಟಿ' ಎಂಬ ವಯಸ್ಕರ ಚಿತ್ರದಲ್ಲಿ ನಟಿಸಿದ್ದರು.ಇನ್ನು ಹಿಂದಿಯ ಬಿಗ್ ಬಾಸ್ ಸೀಸನ್ ಆರರಲ್ಲಿ ಕೂಡ ಕಾಣಿಸಿಕೊಂಡಿದ್ದ ಸನಾ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು.ಕೇರಳದ ಕಣ್ಣೂರಿನವರಾದ ಸನಾ ಖಾನ್, ಟಿವಿ ಜಾಹೀರಾತುಗಳ ಮೂಲಕ ಪ್ರಖ್ಯಾತಿ ಗಳಿಸಿದ್ದರು.

More from Filmibeat

Read more about: bollywood actress sana khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X