ಅಂದು ಫ್ಲಾಪ್, ಇಂದು ಬ್ಲಾಕ್‌ಬಸ್ಟರ್, 05 ದಿನದಲ್ಲಿ 09 ವರ್ಷದ ಹಳೆಯ ಸಿನಿಮಾ ಗಳಿಸಿದ್ದೆಷ್ಟು ಕೋಟಿ ಗೊತ್ತಾ ?

ಸಾಮಾನ್ಯವಾಗಿ ಒಂದು ಚಿತ್ರ ಅಂದುಕೊಂಡಂತೆ ಯಶಸ್ವಿಯಾಗದೇ ಇದ್ದರೆ, ಆ ಚಿತ್ರಕ್ಕೆ ಪ್ರೇಕ್ಷಕರು ಬಾರದೇ ಇದ್ದರೆ.. ಆ ಚಿತ್ರದ ಸೋಲಿಗೆ ಪ್ರೇಕ್ಷಕರನ್ನು ಹೊಣೆಯಾಗಿಸುವ ಕೆಲಸವನ್ನು ಕೆಲವರು ತುಂಬಾ ಪ್ರಾಮಾಣಿಕವಾಗಿ ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ಚಿತ್ರದ ಸೋಲಿಗೆ ಚಿತ್ರಮಂದಿರದ ಮಾಲೀಕರನ್ನು.. ಚಿತ್ರ ವಿತರಕರನ್ನು.. ಚಿತ್ರಮಂದಿರದ ಮೇಲೆ ಬಿಗಿ ಹಿಡಿತ ಹೊಂದಿರುವ ಪಟ್ಟಭದ್ರರತ್ತ ಬೆರಳು ತೋರಿಸುತ್ತಾರೆ. ಮತ್ತೂ ಕೆಲವರು ಎಲ್ಲ ಅಸ್ತವ್ಯಸ್ತ ವ್ಯವ್ಯಸ್ಥೆಗೆ OTT ಎಂಬ ಪೆಡಂಭೂತ ಕಾರಣವೆಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ. ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಚಿತ್ರರಂಗದತ್ತ ಇನ್ನೆಂದು ತಿರುಗಿ ನೋಡದಂತೆ ಮರಳಿ ಮನೆ ಸೇರುತ್ತಾರೆ.

ಆದರೆ, ವಾಸ್ತವದಲ್ಲಿ ಪ್ರೇಕ್ಷಕರು ಉತ್ತಮವಾದ ಚಿತ್ರವನ್ನು ಯಾವತ್ತು ಕೈ ಬಿಡುವುದಿಲ್ಲ. ಅಪ್ಪಿ ತಪ್ಪಿ ಕಣ್ತಪ್ಪಿನಿಂದಾಗಿ ಆ ಚಿತ್ರವನ್ನು ಕಡೆಗಣಿಸಿದರು ಮುಂದೊಂದು ದಿನ ತಮ್ಮ ಈ ತಪ್ಪಿಗೆ ಪ್ರೇಕ್ಷಕರು ಪ್ರಾಯಶ್ಚಿತ ಪಡುತ್ತಾರೆ. ಚಿತ್ರಮಂದಿರದಲ್ಲಿ ನೋಡಲಾಗದ ಚಿತ್ರವನ್ನು ಮನೆಯಲ್ಲಿಯೇ ನೋಡಿ ಆ ಚಿತ್ರಕ್ಕೆ ತಮ್ಮ ಮನದಲ್ಲಿ ವಿಶೇಷವಾದ ಸ್ಥಾನ ನೀಡುತ್ತಾರೆ. ಇದಕ್ಕೆ ಸನಮ್ ತೇರಿ ಕಸಮ್ ಅತ್ಯುತ್ತಮ ಉದಾಹರಣೆ.

Sanam Teri Kasam re-release Day 5 2025 s Biggest Surprise Eyeing 3rd Highest-Grossing Re-Release

ಹೌದು, ಸನಮ್ ತೇರಿ ಕಸಮ್, 09 ವರ್ಷಗಳ ಹಿಂದೆ ತೆರೆಗೆ ಬಂದಿದ್ದ ಚಿತ್ರ. ಹರ್ಷವರ್ಧನ್ ರಾಣೆ ಮತ್ತು ಮಾವ್ರಾ ಅಭಿನಯದ ಈ ಪ್ರೇಮಕಥೆಯನ್ನು ಅವತ್ತು ಚಿತ್ರಮಂದಿರದಲ್ಲಿ ನೋಡಿದ್ದ ವಿಮರ್ಷಕರು ಚಿತ್ರ ಅಷ್ಟಕಷ್ಟೇ ಎಂದಿದ್ದರು. ಚಿತ್ರಮಂದಿರಕ್ಕೆ ಬೆರಳಣಿಕೆಯಷ್ಟು ಪ್ರೇಕ್ಷಕರು ಬಂದು ಎದ್ದು ಹೋಗಿದ್ದರು.

ಆದರೆ ಈಗ ಇದೇ ಸನಮ್ ತೇರಿ ಕಸಮ್ ಚಿತ್ರವನ್ನು ನೋಡಲು ಒಂಬತ್ತು ವರ್ಷದ ನಂತರ ನೋಡಲು ಪ್ರೇಕ್ಷಕರು ಮುಗಿ ಬಿದ್ದಿದ್ದಾರೆ. ನಂಬಲು ಕಷ್ಟವಾದರೂ ಇದೇ ಸತ್ಯ. ಕಳೆದ ಶುಕ್ರವಾರ ಮರು ಬಿಡುಗಡೆಯಾದ ಸನಮ್ ತೇರಿ ಕಸಮ್ ಮೊದಲ ದಿನ ₹4.25 ಕೋಟಿಯನ್ನು ಗಳಿಸಿದರೆ ಶನಿವಾರ ಚಿತ್ರ ₹5.25 ಕೋಟಿಯನ್ನು ಗಳಿಸಿತ್ತು. ರವಿವಾರ ಚಿತ್ರದ ಗಳಿಕೆಯಲ್ಲಿ ಇನ್ನೂ ಏರಿಕೆ ಕಂಡು ಬಂತು ಬಾಕ್ಸಾಫೀಸ್‌ನಲ್ಲಿ ಚಿತ್ರ ₹6.25 ಕೋಟಿಯನ್ನು ಕೊಳ್ಳೆ ಹೊಡೆಯಿತು.

ಇನ್ನು ಸಾಮಾನ್ಯವಾಗಿ ಸೋಮವಾರ ಬಂದರೆ ಸ್ಟಾರ್‌ಗಳ ಚಿತ್ರಗಳ ಗಳಿಕೆಯಲ್ಲಿಯೇ ಕುಸಿತ ಕಂಡು ಬರುತ್ತೆ. ಸನಮ್ ತೇರಿ ಕಸಮ್ ವಿಚಾರದಲ್ಲಿ ಕೂಡ ಗಳಿಕೆ ಕುಸಿದಿದೆ. ಆದರೂ ಕೂಡ ಅಚ್ಚರಿ ಎಂಬಂತೆ ಚಿತ್ರ ಸೋಮವಾರ ₹3.25 ಕೋಟಿಯನ್ನು ಗಳಿಸಿದೆ. ಮಂಗಳವಾರ ಚಿತ್ರದ ಗಳಿಸಿದ್ದು ₹3 ಕೋಟಿ. ಹೀಗೆ ಐದು ದಿನದಲ್ಲಿ ₹22 ಕೋಟಿಯನ್ನು ಸನಮ್ ತೇರಿ ಕಸಮ್ ಚಿತ್ರ ಗಳಿಸಿದೆ. ಈ ಮೂಲಕ ಕಳೆದ ಶುಕ್ರವಾರ ಬಿಡುಗಡೆಯಾದ ಹೊಸ ಚಿತ್ರಗಳಿಗೆಲ್ಲ ಸೆಡ್ಡು ಹೊಡೆದಿದೆ. ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ದಾಖಲೆಯನ್ನು ಬರೆದಿದೆ.

ಸದ್ಯ ರೀ ರಿಲೀಸ್ ಆಗಿ ಬ್ಲಾಕ್‌ ಬಸ್ಟರ್ ಆದ ಚಿತ್ರಗಳಲ್ಲಿ 38 ಕೋಟಿಯನ್ನು ಗಳಿಸುವ ಮೂಲಕ ತುಂಬಾಡ್ ಮೊದಲನೇ ಸ್ಥಾನದಲ್ಲಿದೆ. ಆ ನಂತರ ಇಳಯ ದಫಲತಿ ವಿಜಯ್ ಅಭಿನಯದ ಗಿಲ್ಲಿ { 27 ಕೋಟಿ } ಇದೆ. ನಂತರದ ಸ್ಥಾನದಲ್ಲಿ ರಣ್ಭೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಯೇ ಜವಾನಿ ಯೇ ದಿವಾನಿ { 26 ಕೋಟಿ } ಇದೆ. ಸನಮ್ ತೇರಿ ಕಸಮ್ ಈಗ ಮೂರನೇ ಸ್ಥಾನವನ್ನು ಅಲಂಕರಿಸುವ ಎಲ್ಲ ಸಾಧ್ಯತೆ ಇದೆ.

Disclaimer: ಈ ಸಿನಿಮಾದ ಕಲೆಕ್ಷನ್ ಅನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ನಿರ್ಮಾಣ ಸಂಸ್ಥೆ ಅಥವಾ ಚಿತ್ರತಂಡದ ಸದಸ್ಯರು ಅಧಿಕೃತ ಮಾಹಿತಿಯನ್ನು ನೀಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X