ಇದೇನಾ ಫೆಮಿನಿಸಂ.. ಡರ್ಟಿ ಪಿಆರ್ ಗೇಮ್; ದೀಪಿಕಾ ವಿರುದ್ಧ ವಂಗಾ ಆಕ್ರೋಶ!
ಪ್ರಭಾಸ್ ನಟನೆಯ 'ಸ್ಪಿರಿಟ್' ಸಿನಿಮಾ ನಾಯಕಿ ವಿಚಾರ ಇತ್ತೀಚೆಗೆ ಭಾರೀ ಸುದ್ದಿ ಆಗಿತ್ತು. ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ ಆಗುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಆಕೆಯ ಷರತ್ತುಗಳಿಗೆ ಚಿತ್ರತಂಡ ಒಪ್ಪಲಿಲ್ಲ ಎನ್ನಲಾಗಿತ್ತು. ಬಳಿಕ ತ್ರಿಪ್ತಿ ಡಿಮ್ರಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
'ಅರ್ಜುನ್ ರೆಡ್ಡಿ' ಹಾಗೂ 'ಅನಿಮಲ್' ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಸಂದೀಪ್ ರೆಡ್ಡಿ ವಂಗಾ ಕಟ್ಟಿ ಕೊಟ್ಟಿದ್ದಾರೆ. ಇದೀಗ ಪ್ರಭಾಸ್ ಕಾಂಬಿನೇಷನ್‌ನಲ್ಲಿ 'ಸ್ಪಿರಿಟ್' ಚಿತ್ರ ನಿರ್ಮಾಣಕ್ಕೆ ವೇದಿಕೆ ಸಿದ್ಧವಾಗಿದೆ. ಟೀ-ಸಿರಿಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಇದೆಲ್ಲದರ ನಡುವೆ ಚಿತ್ರದ ನಾಯಕಿ ಯಾರು? ಎನ್ನುವ ಬಗ್ಗೆ ಭಾರೀ ಚರ್ಚೆ ನಡೆದಿತ್ತು.

ದೀಪಿಕಾ ಪಡುಕೋಣೆ ಅವರಿಗೆ ಸಂದೀಪ್ ಕತೆ ಹೇಳಿದ್ದರು. ಆದರೆ ನಟಿಸೋಕೆ ಒಪ್ಪಿದ್ದರು. ಆದರೆ 20 ಕೋಟಿ ರೂ. ಸಂಭಾವನೆ ಡಿಮ್ಯಾಂಡ್ ಮಾಡಿದ್ದರು. ಅಷ್ಟೇ ಅಲ್ಲದೇ ಚಿಕ್ಕ ಮಗುವಿನ ಲಾಲನೆ ಪಾಲನೆ ಮಾಡಬೇಕಿದೆ. ಹಾಗಾಗಿ ದಿನದಲ್ಲಿ ಕೇವಲ 8 ಗಂಟೆಗಳ ಕಾಲ ಮಾತ್ರ ನಟಿಸೋಕೆ ಸಿದ್ಧ ಎಂದು ಷರತ್ತು ಹಾಕಿದ್ದರಂತೆ. ಇದಕ್ಕೆ ವಂಗಾ ಒಪ್ಪಲಿಲ್ಲ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಚಿತ್ರದ ಕಥೆ ಬಗ್ಗೆ ಸುದ್ದಿ ಹರಿದಾಡುತ್ತಿದೆ.
'ಸ್ಪಿರಿಟ್' ಪಕ್ಕಾ ಸಂದೀಪ್ ರೆಡ್ಡಿ ಸ್ಟೈಲ್ ಸಿನಿಮಾ. ಇದೊಂದು ಎ ರೇಟೆಡ್ ಸಿನಿಮಾ. ಸಿಕ್ಕಾಪಟ್ಟೆ ಬೋಲ್ಡ್ ಸನ್ನಿವೇಶಗಳಿವೆ, ಭರ್ಜರಿ ಆಕ್ಷನ್ ಸೀಕ್ವೆನ್ಸ್ ಇರಲಿದೆ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಪ್ರಭಾಸ್ ಹಾಗೂ ತ್ರಿಪ್ತಿ ಇದಕ್ಕೆಲ್ಲಾ ಒಪ್ಪಿಕೊಂಡಿದ್ದಾರೆ ಎಂದು ಬರೆಯಲಾಗಿತ್ತು. ಆದರೆ ಕಥೆಯನ್ನು ದೀಪಿಕಾ ಅವರೇ ಲೀಕ್ ಮಾಡಿದ್ದಾರೆ, ತಮ್ಮ ಪಿಆರ್ ಮೂಲಕ ಇದನ್ನೆಲ್ಲಾ ಮಾಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ವಂಗಾ ಕಾಮೆಂಟ್ ಮಾಡಿದ್ದಾರೆ.
ಆ ನಟಿ ಬೇಕಂತಲೇ ಚಿತ್ರದ ಕಥೆ ಲೀಕ್ ಮಾಡಿದ್ದಾರೆ ಎನ್ನುವ ಅರ್ಥದಲ್ಲಿ ಸಂದೀಪ್ ರೆಡ್ಡಿ ವಂಗಾ ಟ್ವೀಟ್ ಮಾಡಿರುವುದನ್ನು ನೋಡಬಹುದು. ಬಹಳ ಗರಂ ಆಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ದೀಪಿಕಾ ಪಡುಕೋಣೆ ಹೆಸರನ್ನು ಮಾತ್ರ ಪ್ರಸ್ತಾಪಿಸಿಲ್ಲ. ಪರೋಕ್ಷವಾಗಿ ಆಕೆಯ ವಿರುದ್ಧ ಕೆಂಡ ಕಾರಿದ್ದಾರೆ ಎಂದು ಇದೀಗ ಚರ್ಚೆ ನಡೀತಿದೆ. ಕಾಮೆಂಟ್ ಬಾಕ್ಸ್‌ನಲ್ಲಿ ಕೂಡ ಇದೇ ವಿಚಾರ ಸದ್ದು ಮಾಡ್ತಿದೆ.
"ನಾನು ಒಬ್ಬರಿಗೆ ಕಥೆ ಹೇಳುವಾಗ, ನಾನು 100% ನಂಬಿಕೆ ಇಡುತ್ತೇನೆ. ನಮ್ಮ ನಡುವೆ ಹೇಳದ NDA (ನಾನ್ ಡಿಸ್ಕ್ಲೋಸರ್ ಅಗ್ರೀಮೆಂಟ್) ಇರುತ್ತದೆ. ಆದರೆ ಹೀಗೆ ಮಾಡುವುದರ ಮೂಲಕ ನೀವು ಯಾರು ಎನ್ನುವುದನ್ನು ಬಹಿರಂಗಪಡಿಸಿದ್ದೀರಿ" ಎಂದು ಸಂದೀಪ್ ರೆಡ್ಡಿ ವಂಗಾ 'X' ಖಾತೆಯಲ್ಲಿ ಬರೆದುಕೊಂಡಿದ್ಧಾರೆ.
"ಕಿರಿಯ ಕಲಾವಿದರನ್ನು ಕೆಳಗಿಳಿಸಿ ನನ್ನ ಕಥೆಯನ್ನು ಹೊರಗಿಟ್ಟಿದ್ದೀರಾ? ಇದೇನಾ ನಿಮ್ಮ ಸ್ತ್ರೀವಾದ? ಒಬ್ಬ ಫಿಲ್ಮ್ ಮೇಕರ್ ಆಗಿ, ನಾನು ನನ್ನ ಚಿತ್ರಕ್ಕಾಗಿ ವರ್ಷಗಳ ಕಠಿಣ ಪರಿಶ್ರಮ ಹಾಕಿದ್ದೇನೆ. ಫಿಲ್ಮ್ ಮೇಕಿಂಗ ನನಗೆ ಎಲ್ಲವೂ ಆಗಿದೆ. ನೀವು ಅದನ್ನು ಪಡೆಯಲಿಲ್ಲ. ನೀವು ಅದನ್ನು ಪಡೆಯುವುದಿಲ್ಲ. ನೀವು ಅದನ್ನು ಎಂದಿಗೂ ಪಡೆಯುವುದಿಲ್ಲ. ಒಂದು ಕೆಲಸ ಮಾಡು, ಮುಂದಿನ ಬಾರಿ ಸಂಪೂರ್ಣ ಕಥೆ ಹೇಳಿಬಿಡಿ, ನನಗೆ ಯಾವುದೇ ಸಮಸ್ಯೆ ಇಲ್ಲ" ಎಂದು ವಂಗಾ ಪೋಸ್ಟ್ ಮಾಡಿದ್ದಾರೆ.
ಪರೋಕ್ಷವಾಗಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ 'ಸ್ಪಿರಿಟ್' ಕಥೆ ಬದಲಿಸುತ್ತಿರುವ ಬಗ್ಗೆ ಸುಳಿವು ಕೊಟ್ಟಿದ್ದಾರಾ? ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಸದ್ಯ ದೀಪಿಕಾ ಅಭಿಮಾನಿಗಳು ಸಂದೀಪ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇತ್ತ ತೆಲುಗು ಪ್ರೇಕ್ಷಕರು ದೀಪಿಕಾ ಮಾಡಿದ್ದು ಸರಿಯಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











