For Quick Alerts
  ALLOW NOTIFICATIONS  
  For Daily Alerts

  ಅರ್ಜುನ್ ರೆಡ್ಡಿ ನಿರ್ದೇಶಕನ ಜೊತೆ ರಣಬೀರ್ ಕಪೂರ್ ಸಿನಿಮಾ

  |

  ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಹಲ್-ಚಲ್ ಸೃಷ್ಟಿಸಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ಬಾಲಿವುಡ್‌ನಲ್ಲಿ ಸೆಟ್ಲ್ ಆಗುವ ಯೋಚನೆಯಲ್ಲಿದ್ದಂತಿದ್ದಾರೆ.

  ಈಗಾಗಲೇ ತಮ್ಮದೇ ಸಿನಿಮಾ ಅರ್ಜುನ್ ರೆಡ್ಡಿಯ ಬಾಲಿವುಡ್ ರೀಮೇಕ್ ಮಾಡಿರುವ ಸಂದೀಪ್ ರೆಡ್ಡಿ ವಂಗ, ಈಗ ರಣಬೀರ್ ಕಪೂರ್ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ.

  ಬಾಲಿವುಡ್‌ನ ಸ್ಟಾರ್ ನಟ ರಣಬೀರ್ ಕಪೂರ್ ಸಹ ಸಂದೀಪ್ ವಂಗಾ ಸಿನಿಮಾಕ್ಕೆ ಓಕೆ ಎಂದಿದ್ದು, ಸಿನಿಮಾಕ್ಕೆ 'ಡೆವಿಲ್' ಎಂದು ಹೆಸರಿಡಲಾಗಿದೆ. ಸಿನಿಮಾವು ಮಾಫಿಯಾ ಕುರಿತ ಕತೆ ಹೊಂದಿದೆ. ಆದರೆ ಸಿನಿಮಾಕ್ಕೆ ಆರಂಭದಲ್ಲಿಯೇ ಸಣ್ಣದೊಂದು ವಿಘ್ನ ಎದುರಾಗಿದೆ.

  ಸಿನಿಮಾಕ್ಕೆ 'ಡೆವಿಲ್' ಎಂದು ಹೆಸರೇನೊ ಇಡಲಾಗಿದೆ, ಆದರೆ ಆ ಹೆಸರಿನ ಹಕ್ಕು ನಿರ್ಮಾಪಕ 'ಸಾಜಿದ್ ನಾಡಿಯಾವಾಲಾ' ಬಳಿ ಇದೆಯಂತೆ. ವಂಗಾ ಮತ್ತು ತಂಡ ಸಾಜಿದ್ ಅನ್ನು ಭೇಟಿಯಾಗಿ ಹೆಸರು ನೀಡುವಂತೆ ಮನವಿ ಮಾಡಿದ್ದಾದರೂ ಹೆಸರು ನೀಡಲು ಒಪ್ಪಿಲ್ಲ ಸಾಜಿದ್.

  ಸಲ್ಮಾನ್ ಖಾನ್ ರ 'ಕಿಕ್' ಸಿನಿಮಾ ನಿರ್ಮಾಣ ಮಾಡಿದ್ದ ಸಾಜಿದ್, 'ಡೆವಿಲ್' ಹೆಸರಿನಲ್ಲಿ ಸಲ್ಮಾನ್ ಖಾನ್‌ ಜೊತೆ ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ ಹಾಗಾಗಿ ಹೆಸರು ನೀಡಲಾಗುವುದಿಲ್ಲ ಎಂದು ನಿರಾಕರಿಸಿದ್ದಾರೆ ಸಾಜಿದ್. ಹಾಗಾಗಿ ವಂಗಾ ತಮ್ಮ ಸಿನಿಮಾದ ಹೆಸರನ್ನು 'ಅನಿಮಲ್' ಎಂದು ಬದಲಾಯಿಸಿದ್ದಾರೆ.

  ರಣಬೀರ್ ಕಪೂರ್ ಈ ಸಿನಿಮಾದಲ್ಲಿ ಮಾಫಿಯಾ ಡಾನ್ ಪಾತ್ರದಲ್ಲಿ ನಟಿಸಲಿದ್ದಾರೆ. ರಣಬೀರ್ ನಟನೆಯ ಬ್ರಹ್ಮಾಸ್ತ್ರ, ಶಮ್‌ಶೇರಾ ಸಿನಿಮಾಗಳ ಬಳಿಕ ಈ ಸಿನಿಮಾ ಸೆಟ್ಟೇರಲಿದೆ. ಬ್ರಹ್ಮಾಸ್ತ್ರ ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು, ಬಿಡುಗಡೆಗೆ ತಯಾರಾಗಿದೆ.

  S Narayan ಗೆ ಗೌರವ ಡಾಕ್ಟರೇಟ್ | Filmibeat Kannada

  ಈ ಮಾಫಿಯಾ ಕತೆಯನ್ನು ವಂಗಾ ಮೊದಲಿಗೆ ಮಹೇಶ್ ಬಾಬು ಗೆ ಹೇಳಿದ್ದರಂತೆ, ಆದರೆ ಆ ಕ್ಯೂಟ್ ನಟ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಲ್ಲ, ಹಾಗಾಗಿ ವಂಗಾ, ರಣಬೀರ್ ಕಪೂರ್ ಕಚೇರಿ ಬಾಗಿಲು ಬಡಿದಿದ್ದರು.

  English summary
  Telugu director Sandeep Vanga will direct Ranbeer Kapoor's next movie. Movie name is Animal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X