ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರಂತೆ ರಿಯಾ ಚಕ್ರವರ್ತಿ!
ಜೂನ್ 14 ರಂದು ನಟ ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿದ ದಿನದಿಂದಲೂ ನಟಿ ರಿಯಾ ಚಕ್ರವರ್ತಿ ಮಾನಸಿಕ ಒತ್ತಡದಲ್ಲಿಯೇ ದಿನಗಳನ್ನು ದೂಡುತ್ತಿದ್ದಾರೆ.
ಮೊದಲಿಗೆ ಸುಶಾಂತ್ ಸಿಂಗ್ ನ ಕೊಲೆಗಾತಿ ಎಂದು ರಿಯಾ ಮೇಲೆ ಆರೋಪ ಹೊರಿಸಲಾಯಿತು. ಸುಶಾಂತ್ ಕುಟುಂಬದವರಿಂದ ಮೊದಲುಗೊಂಡು ತನ್ನದೇ ಬಾಲಿವುಡ್ ನ ಸಹೋದ್ಯೋಗಿಗಳಿಂದಲೂ ಮೂದಲಿಕೆಗೆ ಒಳಗಾಗಬೇಕಾಯಿತು ರಿಯಾ ಚಕ್ರವರ್ತಿ.
ನಂತರ ಮಾದಕ ವಸ್ತು ಪ್ರಕರಣದಲ್ಲಿ ರಿಯಾ ರನ್ನು ಎನ್‌ಸಿಬಿ ಬಂಧಿಸಿ ಜೈಲಿಗೆ ಕಳುಹಿಸಿತು, ಒಂದು ತಿಂಗಳ ಜೈಲುವಾಸದ ಬಳಿಕ ನಿನ್ನೆಯಷ್ಟೆ ಜಾಮೀನಿನ ಮೇಲೆ ಮನೆಗೆ ಬಂದಿದ್ದಾರೆ ರಿಯಾ ಚಕ್ರವರ್ತಿ. ಕೆಲ ತಿಂಗಳಿನಿಂದ ಒತ್ತಡದಲ್ಲೇ ಇದ್ದ ರಿಯಾ ಚಕ್ರವರ್ತಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದರಂತೆ.

ಹೌದು, ರಿಯಾ ಚಕ್ರವರ್ತಿ ತಾಯಿ ಸಂಧ್ಯಾ ಚಕ್ರವರ್ತಿ ಮಾಧ್ಯಮದೊಟ್ಟಿಗೆ ಮಾತನಾಡಿ ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಬಹಳ ಭಯಗೊಂಡಿದ್ದಳು, ಆತ್ಮಹತ್ಯೆಯ ಮಾತನ್ನಾಡಿದಳು, ಆದರೆ ದಿನಗಳೆದಂತೆ ಆಕೆ ಗಟ್ಟಿಯಾಗುತ್ತಾ ಹೋದಳು ಎಂದಿದ್ದಾರೆ ಸಂಧ್ಯಾ ಚಕ್ರವರ್ತಿ.
Recommended Video
ಮಗಳನ್ನು ಥೆರಫಿಗೆ ಸೇರಿಸುತ್ತೇನೆ, ಅವಳು ಈ ಒತ್ತಡಗಳಿಂದ ಹೊರಗೆ ಬರಬೇಕು, ನನ್ನ ಮಗ ಶೋವಿಕ್ ಬಗ್ಗೆಯೂ ಆತಂಕವಿದೆ, ಆತನೂ ಬೇಗ ಮನೆ ಸೇರುವಂತಾಗಲಿ ಎಂದಿದ್ದಾರೆ ಸಂಧ್ಯಾ.


Click it and Unblock the Notifications











