ಸುಶಾಂತ್ ಸಿಂಗ್ ವಿರುದ್ಧ ಮೀ ಟೂ ಆರೋಪ: ಪೊಲೀಸ್ ವಿಚಾರಣೆಯಲ್ಲಿ 'ದಿಲ್ ಬೇಚಾರ' ನಟಿ ಹೇಳಿದ್ದೇನು?

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತಂತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೆ ಒಟ್ಟು 28 ಮಂದಿಯ ವಿಚಾರಣೆ ನಡೆದ ಮುಂಬೈ ಪೊಲೀಸರು, ಈಗ ಸುಶಾಂತ್ ಸಿಂಗ್ ಅಭಿನಯದ ಕೊನೆಯ ಸಿನಿಮಾ ದಿಲ್ ಬೇಚಾರ ಚಿತ್ರದ ನಾಯಕಿ ಸಂಜನಾ ಸಾಂಘಿ ಅವರನ್ನು ವಿಚಾರಣೆ ನಡೆಸಿದ್ದು, ಅವರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

Recommended Video

Nikhil Kumaraswamy to start agriculture ತಾತನಂತೆ ಮಣ್ಣಿನ ಮಗನಾಗಲು ಹೊರಟ ನಿಖಿಲ್ ಕುಮಾರಸ್ವಾಮಿ

ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೊಲೀಸರು ಮೀ ಟೂ ಆರೋಪದ ಬಗ್ಗೆಯೂ ವಿಚಾರಣೆ ನಡೆಸಿದ್ದಾರೆ. 2018ರಲ್ಲಿಯೆ ದಿಲ್ ಬೇಚಾರ ಸಿನಿಮಾ ಸೆಟ್ಟೇರಿದೆ. ಆಡಿಷನ್ ಮೂಲಕ ಸಿನಿಮಾಗೆ ಆಯ್ಕೆ ಆಗಿರುವುದಾಗಿ ಸಂಜನಾ ಹೇಳಿದ್ದಾರೆ. ಸಿನಿಮಾಗೆ ಆಯ್ಕೆ ಆದ ನಂತರವೆ ಸುಶಾಂತ್ ಸಿಂಗ್ ಜೊತೆ ನಟಿಸಬೇಕು ಎನ್ನುವುದು ತಿಳಿದುಬಂದಿದೆ. ಅಲ್ಲದೆ ಸುಶಾಂತ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು, ದಿಲ್ ಬೇಚಾರ ಸಿನಿಮಾ ಸೆಟ್ ನಲ್ಲಿ ಭೇಟಿಯಾಗಿದ್ದು ಎಂದು ಪೊಲೀಸರ ಮುಂದೆ ಹೇಳಿದ್ದಾರೆ. ಮುಂದೆ ಓದಿ..

ಸುಶಾಂತ್ ವಿರುದ್ಧ ಮೀ ಟೂ ಆರೋಪ

ಸುಶಾಂತ್ ವಿರುದ್ಧ ಮೀ ಟೂ ಆರೋಪ

2018ರಲ್ಲಿ ಮೀ ಟೂ ಚಳುವಳಿ ಉತ್ತುಂಗದಲ್ಲಿ ಇತ್ತು. ಬಾಲಿವುಡ್ ನಟಿಯರು ಸೇರಿದ್ದಂತೆ ಬೇರೆ ಬೇರೆ ಭಾಷೆಯ ನಟಿಯರು ಚಿತ್ರರಂಗದಲ್ಲಿ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಈ ಸಮಯದಲ್ಲಿ ನಟಿ ಸಂಜನಾ ಸಾಂಘಿ ಮೇಲು ಲೈಂಗಿಕ ದೌರ್ಜನ್ಯವಾಗಿದೆ ಎಂಬ ವರದಿಯಾಗಿತ್ತು. ಆ ಸಮಯದಲ್ಲಿ ನಟ ಸುಶಾಂತ್ ಸಿಂಗ್ ಹೆಸರು ಕೇಳಿಬಂದಿತ್ತು.

ಸಂಜನಾ ಸಾಂಘಿ ಸ್ಪಷ್ಟನೆ

ಸಂಜನಾ ಸಾಂಘಿ ಸ್ಪಷ್ಟನೆ

ಆಗ ಸಂಜನಾ ಸಾಂಘಿ ಸ್ಪಷ್ಟನೆ ಕೂಡ ನೀಡಿದ್ದರು. "ನಾನು ಭಾರತದಲ್ಲಿ ಇರಲಿಲ್ಲ. ಶೂಟಿಂಗ್ ಗೆ ಇನ್ನೂ ಸಮಯವಿದ್ದ ಕಾರಣ ಅಮ್ಮನ ಜೊತೆ ಯು ಎಸ್ ಗೆ ತೆರಳಿದ್ದೆ. ಈ ಬಗ್ಗೆ ನನಗೆ ಗೊತ್ತಿಲ್ಲ. ನಾನು ಭಾರಕ್ಕೆ ವಾಪಸ್ ಆದ ಮೇಲೆ ಈ ವಿಚಾರ ಗೊತ್ತಾಗಿದೆ. ನನ್ನ ಹೆಸರನ್ನು ಸುಶಾಂತ್ ಜೊತೆ ಸೇರಿಸಿ ನನಗೂ ದೌರ್ಜವ್ಯವಾಗಿದೆ ಎಂದು ಹೇಳಲಾಗುತ್ತಿದೆ. ಇದೆಲ್ಲ ಸುಳ್ಳು ಸುದ್ದಿ. ಸುಮ್ಮನೆ ನನ್ನ ಹೆಸರನ್ನು ತರಲಾಗಿದೆ" ಎಂದು ಸಾಮಾಜಿಕ ಜಾಲತಾಣಲ್ಲಿ ಸ್ಪಷ್ಟನೆ ನೀಡಿದ್ದರು. ಈಗಲು ಪೊಲೀಸರ ಮುಂದೆ ಇದೆ ವಿಚಾರವನ್ನು ಹೇಳಿದ್ದಾರೆ.

ಸುಶಾಂತ್ ಗೆ ಎಲ್ಲಾ ಗೊತ್ತಿತ್ತು

ಸುಶಾಂತ್ ಗೆ ಎಲ್ಲಾ ಗೊತ್ತಿತ್ತು

"ಈ ಘಟನೆ ನಂತರ ಸುಶಾಂತ್ ಅವರನ್ನು ಭೇಟಿಯಾಗಿ, ಮಾತನಾಡಿದ್ದೇನೆ. ಈ ಬಗ್ಗೆ ಸುಶಾಂತ್ ತುಂಬಾ ಬೇಸರವಾಗಿದ್ದರು. ಇಮೇಜ್ ಹಾಳು ಮಾಡಲೆಂದೇ ಹೀಗೆಲ್ಲ ಮಾಡಿದ್ದಾರೆ ಎಂದು ಸುಶಾಂತ್ ಹೇಳಿದ್ದರು. ಅಲ್ಲದೆ ಅವರಿಗೆ ಗೊತ್ತಿದೆ ಯಾರು ಹೀಗೆಲ್ಲ ಮಾಡುತ್ತಿದ್ದಾರೆ ಎನ್ನುವುದು. ಸುಶಾಂತ್ ಅವರ ಹೆಸರನ್ನು ಬಹಿರಂಗ ಪಡಿಸಿಲ್ಲ. ಅಲ್ಲದೆ ಸುಶಾಂತ್ ವೈಯಕ್ತಿಕ ವಿಚಾರವನ್ನು ಯಾವತ್ತು ನನ್ನ ಬಳಿ ಹೇಳಿಕೊಂಡಿಲ್ಲ" ಎಂದು ಸಂಜನಾ ಹೇಳಿದ್ದಾರೆ.

ಸೆಟ್ ನಲ್ಲಿ ಸಾಮಾನ್ಯ ವ್ಯಕ್ತಿಯಂತೆ ಇರುತ್ತಿದ್ದರು

ಸೆಟ್ ನಲ್ಲಿ ಸಾಮಾನ್ಯ ವ್ಯಕ್ತಿಯಂತೆ ಇರುತ್ತಿದ್ದರು

"ಸುಶಾಂತ್ ಮುಂದಿನ ಪ್ರೋಜೆಕ್ಟ್ ಗಳ ಬಗ್ಗೆ ನನಗೆ ಗೊತ್ತಿಲ್ಲ. ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನುವುದು ಗೊತ್ತಿತ್ತು. ಸೆಟ್ ನಲ್ಲಿ ಸುಶಾಂತ್ ಸಾಮಾನ್ಯವ್ಯಕ್ತಿಯಂತೆ ಇರುತ್ತಿದ್ದರು. ಅಲ್ಲದೆ ಪಾಟ್ನಾನ ಜೀವದ ಬಗ್ಗೆ ಹೇಳುತ್ತಿದ್ದರು. ಉಳಿದ್ದಂತೆ ಸಿನಿಮಾ ವಿಚಾರ ಬಿಟ್ಟರೆ ಬೇರೆ ವಿಚಾರಗಳು ಚರ್ಚೆಯಾಗುತ್ತಿರಲಿಲ್ಲ" ಎಂದು ಸಂಜನಾ ವಿಚಾರಣೆಯಲ್ಲಿ ಹೇಳಿದ್ದಾರೆ.

More from Filmibeat

English summary
Dil Bechara Actress Sanjana Saghi opens up about me too allegation against Sushanth singh in investigation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X