For Quick Alerts
  ALLOW NOTIFICATIONS  
  For Daily Alerts

  'ಓಂ' ಸಿನಿಮಾದಲ್ಲಿ ಸುಶಾಂತ್ ಸಿಂಗ್ 'ದಿಲ್ ಬೇಚಾರ' ನಾಯಕಿ ಸಂಜನಾ ಸಂಘಿ

  |

  ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಸಿನಿಮಾ 'ದಿಲ್ ಬೇಚಾರ' ಚಿತ್ರದಲ್ಲಿ ನಾಯಕಿಯಾಗಿ ಮಿಂಚುವ ಮೂಲಕ ನಟಿ ಸಂಜನಾ ಸಂಘಿ ಎಲ್ಲರ ಗಮನ ಸೆಳೆದಿದ್ದರು. ಮೊದಲ ಸಿನಿಮಾದಲ್ಲೇ ಅದ್ಭುತ ಅಭಿನಯದ ಮೂಲಕ ಸಂಜನಾ ಬರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

  ದಿಲ್ ಬೇಚಾರ ಸಿನಿಮಾ ಬಳಿಕ ಸಂಜನಾ ಯಾವುದೇ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಇದೀಗ ಸಂಜನಾ ಎರಡನೇ ಸಿನಿಮಾಗೆ ಸಹಿ ಮಾಡಿದ್ದಾರೆ. ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ನಾಯಕನಾಗಿ ಮಿಂಚುತ್ತಿರುವ ಸಿನಿಮಾಗೆ ಸಂಜನಾ ಆಯ್ಕೆ ಆಗಿದ್ದಾರೆ. ಅಹ್ಮದ್ ಖಾನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾಗೆ 'ಓಂ' ಎಂದು ಹೆಸರಿಡಲಾಗಿದೆ.

  ಸುಶಾಂತ್ ಸಿಂಗ್ ವಿರುದ್ಧದ ಮೀ ಟೂ ಆರೋಪ: ಮೌನ ಮುರಿದ ಸಂಜನಾಸುಶಾಂತ್ ಸಿಂಗ್ ವಿರುದ್ಧದ ಮೀ ಟೂ ಆರೋಪ: ಮೌನ ಮುರಿದ ಸಂಜನಾ

  ಈಗಾಗಲೇ ನಟ ಆದಿತ್ಯಾ ರಾಯ್ ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ದೊಡ್ಡ ಬಜೆಟ್ ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದಾಗಿದ್ದು, ನಾಯಕಿ ಯಾರಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿತ್ತು. ಆದರೀಗ ಕುತೂಹಲಕ್ಕೆ ತೆರೆಬಿದ್ದಿದೆ. ಅಂದ್ಹಾಗೆ ನಾಯಕಿ ಪಾತ್ರಕ್ಕೆ ಸಾಕಷ್ಟು ನಟಿಯರ ಹೆಸರು ಕೇಳಿಬಂದಿತ್ತು. ಕೊನೆಯದಾಗಿ ದಿಲ್ ಬೇಚಾರ ನಟಿಯನ್ನು ಅಯ್ಕೆ ಮಾಡಲಾಗಿದೆ.

  ಕತ್ತಿ ಹಿಡಿದು ಕುದುರೆ ಏರಿದ ಶ್ರೀಲೀಲಾ ಲುಕ್ ನೋಡಿ ಎಲ್ಲರೂ ಶಾಕ್ | SreeLeela Photoshoot | Filmibeat Kannada

  'ಓಂ' ಸಿನಿಮಾ ಲವ್ ಮತ್ತು ಆಕ್ಷನ್ ಎರಡೂ ಅಂಶ ಇರುವ ಸಿನಿಮಾವಾಗಿದೆ. ಚಿತ್ರದಲ್ಲಿ ಸಂಜನಾ ಆದಿತ್ಯಾ ಪ್ರೇಯಸಿಯಾಗಿ ಮತ್ತು ಹಲವಾರು ಆಕ್ಷನ್ ದೃಶ್ಯಗಳಲ್ಲೂ ಕಾಣಿಸಿಕೊಳ್ಳಲಿದ್ದಾರಂತೆ. ಈ ಬಗ್ಗೆ ಸಿನಿಮಾತಂಡ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಓಂ ಸಿನಿಮಾ ಮುಂದಿನ ವರ್ಷದ ಪ್ರಾರಂಭದಲ್ಲಿ ಚಿತ್ರೀಕರಣ ಆರಂಭಮಾಡುವ ಸಾಧ್ಯತೆ ಇದೆ. ಮೊದಲ ಬಾರಿಗೆ ಸಂಜನಾ ಮತ್ತು ಆದಿತ್ಯ ತೆರೆಮೇಲೆ ಬರ್ತಿದ್ದಾರೆ. ಹೊಸ ಜೋಡಿಯನ್ನು ಅಭಿಮಾನಿಗಳು ಹೇಗೆ ಸ್ವಾಗತ ಮಾಡಲಿದ್ದಾರೆ ಎಂದು ಕಾದುನೋಡಬೇಕು.

  English summary
  Dil Bechara actress Sanjana Sanghi to Romance Actor Aditya Roy Kapoor in Om film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X