ಸಂಜಯ್ ದತ್ ಎಲ್ಲೇ ಹೋದ್ರೆ 'ಕೆಜಿಎಫ್ 2' ಬಗ್ಗೆಯೇ ಪ್ರಶ್ನೆ
Recommended Video
ಬಾಲಿವುಡ್ ನಟ ಸಂಜಯ್ ದತ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಬಂದಿದ್ದಾರೆ.
ಈ ಸಿನಿಮಾದ ಬಗ್ಗೆ ಕನ್ನಡಿಗರು ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಿಂದಿಯಲ್ಲಿ ಸಿನಿಮಾದ ಕ್ರೇಜ್ ಬಹಳ ಜೋರಾಗಿದೆ. ಸಂಜಯ್ ದತ್ ಈ ಸಿನಿಮಾದಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಂಜಯ್ ದತ್ ಎಲ್ಲಿಯೇ ಹೋದರೂ, 'ಕೆಜಿಎಫ್ 2' ಸಿನಿಮಾದ ಬಗ್ಗೆ ಪ್ರಶ್ನೆಗಳು ಬರುತ್ತಿವೆ. ಇತ್ತೀಚಿಗಷ್ಟೆ ಗೆಳೆಯರೊಬ್ಬರ ಖಾಸಗಿ ಕಾರ್ಯಕ್ರಮದಲ್ಲಿ ಸಂಜಯ್ ದತ್ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದ ಜೊತೆಗೆ ಮಾತನಾಡುತ್ತಿದ್ದರು.

ಈ ವೇಳೆಯೂ ''ಕೆಜಿಎಫ್ 2' ಸಿನಿಮಾ ಬರುತ್ತಿದೆ. ಆ ಸಿನಿಮಾ ಹೇಗಿದೆ..?'' ಎನ್ನುವ ಪ್ರಶ್ನೆ ಬಂತು. ಆಗ ಸಂಜಯ್ ದತ್ ತುಂಬ ಚೆನ್ನಾಗಿದೆ ಎಂದು ಹೇಳಿದರು. ಇದು ಸಿನಿಮಾದ ಕಾರ್ಯಕ್ರಮ ಅಲ್ಲದೆ ಇದ್ದ ಕಾರಣ ಇದಕ್ಕಿಂತ ಹೆಚ್ಚು ಅವರು ಹೇಳಲಿಲ್ಲ.

'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಚಿತ್ರೀಕರಣದಲ್ಲಿ ಈಗಾಗಲೇ ಸಂಜಯ್ ದತ್ ಭಾಗಿಯಾಗಿದ್ದಾರೆ. ಯಶ್ ಸಿನಿಮಾದ ನಾಯಕನಾಗಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ 2020 ರಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ.


Click it and Unblock the Notifications











