ಸಂಜಯ್ ದತ್ ಕೊಟ್ಟಿದ್ದ 100 ಕೋಟಿ ಮೌಲ್ಯದ ಆಸ್ತಿ ಹಿಂದಿರುಗಿಸಿದ ಪತ್ನಿ
ನಟ ಸಂಜಯ್ ದತ್ ತಮ್ಮ ಮೂರನೇ ಪತ್ನಿ ಮಾನ್ಯತಾ ಗೆ 100 ಕೋಟಿ ಮೌಲ್ಯದ ನಾಲ್ಕು ಐಶಾರಾಮಿ ಫ್ಲ್ಯಾಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ಅದನ್ನು ಸಂಜಯ್ ದತ್ ಗೆ ಮರಳಿಸಿದ್ದಾರೆ ಮಾನ್ಯತಾ.
Recommended Video
ಕಳೆದ ವರ್ಷಾಂತ್ಯದಲ್ಲಿ ನಟ ಸಂಜಯ್ ದತ್, ಮುಂಬೈನ ಬಾಂದ್ರಾ ಏರಿಯಾದಲ್ಲಿ ಐಶಾರಾಮಿ ಪೆಂಟ್‌ಹೌಸ್‌ನಲ್ಲಿ ಹೊಂದಿದ್ದ ನಾಲ್ಕು ಐಶಾರಾಮಿ ಫ್ಲ್ಯಾಟ್‌ಗಳನ್ನು ಪತ್ನಿ ಮಾನ್ಯತಾಗೆ ಉಡುಗೊರೆಯಾಗಿ (ಗಿಫ್ಟ್ ಡೀಡ್) ಕೊಟ್ಟಿದ್ದರು.
ಆದರೆ ಒಂದೇ ವಾರದಲ್ಲಿ ಮಾನ್ಯತಾ ಆ ನಾಲ್ಕು ಫ್ಲ್ಯಾಟ್‌ಗಳನ್ನು ಸಂಜಯ್ ದತ್ ಗೆ ಮರಳಿ ನೀಡಿದ್ದಾರೆ. ಈ 'ವ್ಯವಹಾರ'ದ ದಾಖಲೆಗಳು ಮಾಧ್ಯಮಗಳಿಗೆ ಲಭ್ಯವಾಗಿವೆ.

ಪಾಲಿ ಹಿಲ್ಸ್‌ನ 'ಇಂಪೀರಿಯಲ್ ಹೈಟ್ಸ್' ಹೆಸರಿನ ಐಶಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ಕು ಅಪಾರ್ಟ್‌ಮೆಂಟ್ ಅನ್ನು ಸಂಜಯ್ ದತ್ ಹೊಂದಿದ್ದರು. ಇದೇ ಫ್ಲ್ಯಾಟ್‌ಗಳನ್ನು ಮಾನ್ಯತಾ ಹೆಸರಿಗೆ ಗಿಫ್ಟ್ ಡೀಡ್ ಮಾಡಿದ್ದರು ಸಂಜಯ್ ದತ್. ಆದರೆ ಮಾನ್ಯತಾ ಅದನ್ನು ಏಕೆ ಸಂಜಯ್ ದತ್ ಗೆ ಮರಳಿಸಿದ್ದಾರೆ ಎಂಬ ಕಾರಣ ತಿಳಿಯದಾಗಿದೆ.
ಮಾನ್ಯತಾ, ಸಂಜಯ್ ದತ್ ರ ಮೂರನೇ ಪತ್ನಿ ಆಗಿದ್ದಾರೆ. ಈ ಮೊದಲು ರಿಚಾ ಶರ್ಮಾ ಜೊತೆಗೆ ವಿವಾಹವಾಗಿದ್ದರು, ಆದರೆ ರಿಚಾ ಕ್ಯಾನ್ಸರ್‌ಗೆ ತುತ್ತಾಗಿ ಅಸುನೀಗಿದರು. ಆ ನಂತರ ಮಾಡೆಲ್ ರಿಯಾ ಪಿಳ್ಳೈ ಜೊತೆಗೆ ವಿವಾಹವಾದರು ಅವರೊಟ್ಟಿಗೆ ವಿಚ್ಛೇಧನ ಪಡೆದು ಮಾನ್ಯತಾ ಜೊತೆ ವಿವಾಹವಾದರು.
ಸಂಜಯ್ ದತ್ ಗೆ ಮಾರಕ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆದರೆ ಕ್ಯಾನ್ಸರ್ ವಿರುದ್ಧ ಹೋರಾಡಿದ ಸಂಜಯ್ ದತ್ ಅದರಿಂದ ಗುಣಮುಖರಾಗಿ ಚಿತ್ರೀಕರಣದಲ್ಲಿ ತೊಡಗಿಕೊಂಡರು. ಸಂಜಯ್ ದತ್ ನಟಿಸಿರುವ ಕನ್ನಡ ಸಿನಿಮಾ ಕೆಜಿಎಫ್ 2 ಜುಲೈ 16 ಕ್ಕೆ ಬಿಡುಗಡೆ ಆಗಲಿದೆ.


Click it and Unblock the Notifications











