For Quick Alerts
  ALLOW NOTIFICATIONS  
  For Daily Alerts

  ಸಂಜಯ್ ದತ್ ಕೊಟ್ಟಿದ್ದ 100 ಕೋಟಿ ಮೌಲ್ಯದ ಆಸ್ತಿ ಹಿಂದಿರುಗಿಸಿದ ಪತ್ನಿ

  |

  ನಟ ಸಂಜಯ್ ದತ್ ತಮ್ಮ ಮೂರನೇ ಪತ್ನಿ ಮಾನ್ಯತಾ ಗೆ 100 ಕೋಟಿ ಮೌಲ್ಯದ ನಾಲ್ಕು ಐಶಾರಾಮಿ ಫ್ಲ್ಯಾಟ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ಅದನ್ನು ಸಂಜಯ್ ದತ್ ಗೆ ಮರಳಿಸಿದ್ದಾರೆ ಮಾನ್ಯತಾ.

  ಸಂಜಯ್ ದತ್ ದಾಂಪತ್ಯದಲ್ಲಿ ಮತ್ತೆ ಬಿರುಕು ಮೂಡಿದ್ಯಾ..? | Sanjay Dutt | Manyata Sanjay Dutt

  ಕಳೆದ ವರ್ಷಾಂತ್ಯದಲ್ಲಿ ನಟ ಸಂಜಯ್ ದತ್, ಮುಂಬೈನ ಬಾಂದ್ರಾ ಏರಿಯಾದಲ್ಲಿ ಐಶಾರಾಮಿ ಪೆಂಟ್‌ಹೌಸ್‌ನಲ್ಲಿ ಹೊಂದಿದ್ದ ನಾಲ್ಕು ಐಶಾರಾಮಿ ಫ್ಲ್ಯಾಟ್‌ಗಳನ್ನು ಪತ್ನಿ ಮಾನ್ಯತಾಗೆ ಉಡುಗೊರೆಯಾಗಿ (ಗಿಫ್ಟ್‌ ಡೀಡ್) ಕೊಟ್ಟಿದ್ದರು.

  ಆದರೆ ಒಂದೇ ವಾರದಲ್ಲಿ ಮಾನ್ಯತಾ ಆ ನಾಲ್ಕು ಫ್ಲ್ಯಾಟ್‌ಗಳನ್ನು ಸಂಜಯ್ ದತ್ ಗೆ ಮರಳಿ ನೀಡಿದ್ದಾರೆ. ಈ 'ವ್ಯವಹಾರ'ದ ದಾಖಲೆಗಳು ಮಾಧ್ಯಮಗಳಿಗೆ ಲಭ್ಯವಾಗಿವೆ.

  ಪಾಲಿ ಹಿಲ್ಸ್‌ನ 'ಇಂಪೀರಿಯಲ್ ಹೈಟ್ಸ್' ಹೆಸರಿನ ಐಶಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ಕು ಅಪಾರ್ಟ್‌ಮೆಂಟ್ ಅನ್ನು ಸಂಜಯ್ ದತ್ ಹೊಂದಿದ್ದರು. ಇದೇ ಫ್ಲ್ಯಾಟ್‌ಗಳನ್ನು ಮಾನ್ಯತಾ ಹೆಸರಿಗೆ ಗಿಫ್ಟ್ ಡೀಡ್ ಮಾಡಿದ್ದರು ಸಂಜಯ್ ದತ್. ಆದರೆ ಮಾನ್ಯತಾ ಅದನ್ನು ಏಕೆ ಸಂಜಯ್ ದತ್ ಗೆ ಮರಳಿಸಿದ್ದಾರೆ ಎಂಬ ಕಾರಣ ತಿಳಿಯದಾಗಿದೆ.

  ಮಾನ್ಯತಾ, ಸಂಜಯ್ ದತ್ ರ ಮೂರನೇ ಪತ್ನಿ ಆಗಿದ್ದಾರೆ. ಈ ಮೊದಲು ರಿಚಾ ಶರ್ಮಾ ಜೊತೆಗೆ ವಿವಾಹವಾಗಿದ್ದರು, ಆದರೆ ರಿಚಾ ಕ್ಯಾನ್ಸರ್‌ಗೆ ತುತ್ತಾಗಿ ಅಸುನೀಗಿದರು. ಆ ನಂತರ ಮಾಡೆಲ್ ರಿಯಾ ಪಿಳ್ಳೈ ಜೊತೆಗೆ ವಿವಾಹವಾದರು ಅವರೊಟ್ಟಿಗೆ ವಿಚ್ಛೇಧನ ಪಡೆದು ಮಾನ್ಯತಾ ಜೊತೆ ವಿವಾಹವಾದರು.

  ಸಂಜಯ್ ದತ್ ಗೆ ಮಾರಕ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆದರೆ ಕ್ಯಾನ್ಸರ್ ವಿರುದ್ಧ ಹೋರಾಡಿದ ಸಂಜಯ್ ದತ್ ಅದರಿಂದ ಗುಣಮುಖರಾಗಿ ಚಿತ್ರೀಕರಣದಲ್ಲಿ ತೊಡಗಿಕೊಂಡರು. ಸಂಜಯ್ ದತ್ ನಟಿಸಿರುವ ಕನ್ನಡ ಸಿನಿಮಾ ಕೆಜಿಎಫ್ 2 ಜುಲೈ 16 ಕ್ಕೆ ಬಿಡುಗಡೆ ಆಗಲಿದೆ.

  English summary
  Actor Sanjay Dutt giffted 100 crore rs valued four flats as gift within a week Manyata returns the property to Sanajay Dutt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X