ಕಂಠಪೂರ್ತಿ ಕುಡಿದು ರಾತ್ರಿ ಶ್ರೀದೇವಿ ಇದ್ದ ಕೊಠಡಿಗೆ ನುಗ್ಗಿದ್ದರು ಸಂಜಯ್ ದತ್

By Avani Malnad

ಬಾಲಿವುಡ್‌ನ ಅತ್ಯಂತ ಯಶಸ್ವಿ ಮತ್ತು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ನಟಿಯರಲ್ಲಿ ಶ್ರೀದೇವಿ ಒಬ್ಬರು. ಅಪ್ರತಿಮ ಸೌಂದರ್ಯ ಮತ್ತು ಪ್ರತಭೆ ಎರಡನ್ನೂ ಹೊಂದಿದ್ದ ಶ್ರೀದೇವಿ ನಾಲ್ಕು ದಶಕಗಳಲ್ಲಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೇ ಯಶಸ್ಸನ್ನೂ ಪಡೆದಿದ್ದರು. ಅವರ ಅಕಾಲಿಕ ಸಾವು ಈಗಲೂ ಅಭಿಮಾನಿಗಳಲ್ಲಿನ ನೋವನ್ನು ಶಮನ ಮಾಡಿಲ್ಲ.

Recommended Video

ಶಿವಣ್ಣನ ಅಭಿಮಾನಿಗಳು ನಂಗೆ ಏನ್ ಮಾಡ್ತಾರೋ ಅನ್ನೋ ಭಯ ಆಗಿತ್ತು | Vijay Raghavendra | Filmibeat Kannada

ಶ್ರೀದೇವಿ ಅವರ ಅಭಿಮಾನಿಗಳಲ್ಲಿ ನಟ ಸಂಜಯ್ ದತ್ ಕೂಡ ಒಬ್ಬರು. ಆದರೆ ಸಂಜಯ್ ದತ್ ವ್ಯಕ್ತಿತ್ವ ಮತ್ತು ವರ್ತನೆಗಳು ವಿವಾದದ ಕೇಂದ್ರಬಿಂದುವಾಗಿದ್ದವು. ಅದರಲ್ಲಿಯೂ ಆರಂಭದ ದಿನಗಳಲ್ಲಿ ಸಂಜಯ್ ದತ್ ವಿರುದ್ಧ ಅನೇಕ ಆರೋಪಗಳು ಕೇಳಿಬರುತ್ತಿದ್ದವು.

ಇಂತಹ ಸಂಜಯ್ ದತ್, ಶ್ರೀದೇವಿ ಅವರ ಮೊದಲ ಭೇಟಿಯ ಸಂದರ್ಭದಲ್ಲಿಯೇ ಅನುಚಿತವಾಗಿ ವರ್ತಿಸಿದ್ದರು. ಕಂಠಪೂರ್ತಿ ಕುಡಿದು ತಮ್ಮ ನೆಚ್ಚಿನ ನಟಿಯ ಹೋಟೆಲ್ ಕೊಠಡಿಗೆ ನುಗ್ಗಲು ಪ್ರಯತ್ನಿಸಿದ್ದರು ಎನ್ನುವುದು ಗೊತ್ತೇ? ಮುಂದೆ ಓದಿ...

ಹಿಮ್ಮತ್ ವಾಲಾ ಚಿತ್ರೀಕರಣ

ಹಿಮ್ಮತ್ ವಾಲಾ ಚಿತ್ರೀಕರಣ

ಈ ಘಟನೆ 1983ರಲ್ಲಿ 'ಹಿಮ್ಮತ್ ವಾಲಾ' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆದಿತ್ತು. ತೆಲುಗಿನ ರೀಮೇಕ್ ಚಿತ್ರವಾಗಿದ್ದ ಇದನ್ನು ಕೆ. ರಾಘವೇಂದ್ರ ರಾವ್ ನಿರ್ದೇಶಿಸಿದ್ದರು. ಜೀತೇಂದ್ರ, ಅಮ್ಜದ್ ಖಾನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಕುಡಿದು ಬಾಗಿಲು ಬಡಿದಿದ್ದ ದತ್

ಕುಡಿದು ಬಾಗಿಲು ಬಡಿದಿದ್ದ ದತ್

ಶ್ರೀದೇವಿ ತಾವು ಇರುವ ನಗರದಲ್ಲಿಯೇ ಶೂಟಿಂಗ್ ಮಾಡುತ್ತಿದ್ದಾರೆ ಎನ್ನುವುದು ಸಂಜಯ್ ದತ್ ಅವರಿಗೆ ಗೊತ್ತಾಗಿತ್ತು. ಅವರನ್ನು ಭೇಟಿಯಾಗುವ ಸಲುವಾಗಿ ಅವರು ಉಳಿದುಕೊಂಡಿದ್ದ ಹೋಟೆಲ್‌ಗೆ ತೆರಳಿದ್ದರು. ಅವರಿದ್ದ ಕೊಠಡಿಯ ಬಾಗಿನ್ನು ದಡ ದಡನೆಯ ಬಡಿಯತೊಡಗಿದ್ದರು. ತಾನೇನು ಮಾಡುತ್ತಿದ್ದೇನೆ ಎನ್ನುವುದು ಅವರಿಗೇ ಅರಿವಿರಲಿಲ್ಲ. ಏಕೆಂದರೆ ಅವರು ವಿಪರೀತ ಕುಡಿದಿದ್ದರು. ಶ್ರೀದೇವಿ ಬಾಗಿಲು ತೆರೆದಾಗ ಸಂಜಯ್ ದತ್ ಒಳಗೆ ನುಗ್ಗಲು ಪ್ರಯತ್ನಿಸಿದ್ದರು. ಸಂಜಯ್ ದತ್ ಸ್ಥಿತಿ ಕಂಡು ಬೆದರಿದ ಶ್ರೀದೇವಿ ಹೇಗೋ ಕಷ್ಟಪಟ್ಟು ಬಾಗಿಲು ಹಾಕಿ ಅವರು ಒಳಗೆ ಬರದಂತೆ ನೋಡಿಕೊಂಡಿದ್ದರು.

ದತ್ ಕಂಡರೆ ಹೆದರುತ್ತಿದ್ದ ಶ್ರೀದೇವಿ

ದತ್ ಕಂಡರೆ ಹೆದರುತ್ತಿದ್ದ ಶ್ರೀದೇವಿ

ಆಸಕ್ತಿಕರ ಸಂಗತಿಯೆಂದರೆ ಇದನ್ನು ಸಂಜಯ್ ದತ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕುಡಿದ ಅಮಲಿನಲ್ಲಿದ್ದ ತಾವು ಶ್ರೀದೇವಿ ಅವರೊಂದಿಗೆ ಹೇಗೆ ವರ್ತಿಸಿದ್ದೆ ಎನ್ನುವುದೂ ನೆನಪಿಸಿಕೊಳ್ಳುವುದಿಲ್ಲ ಎಂದಿದ್ದರು. ಈ ಘಟನೆ ಶ್ರೀದೇವಿ ಅವರ ಮನಸಿನಲ್ಲಿ ಗಾಢ ಪರಿಣಾಮ ಬೀರಿತ್ತು. ಸಂಜಯ್ ದತ್ ಜತೆ ಮುಂದೆ ಸಿನಿಮಾ ಮಾಡಲೂ ಅವರು ಹೆದರುತ್ತಿದ್ದರಂತೆ.

ಜತೆಯಾದ ದತ್-ಶ್ರೀದೇವಿ

ಜತೆಯಾದ ದತ್-ಶ್ರೀದೇವಿ

ಕ್ರಮೇಣ ಸಮಯ ಎಲ್ಲವನ್ನೂ ತಿಳಿಗೊಳಿಸಿತು. ಹತ್ತು ವರ್ಷದ ಬಳಿಕ ಸಂಜಯ್ ದತ್ ಮತ್ತು ಶ್ರೀದೇವಿ 1993ರಲ್ಲಿ 'ಗುಮ್ರಾ' ಚಿತ್ರದಲ್ಲಿ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದರು. ಮಹೇಶ್ ಭಟ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀದೇವಿ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಡುಗಳೂ ಹಿಟ್ ಆಗಿದ್ದವು. ಆದರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಸಂಚಲನ ಮೂಡಿಸುವಲ್ಲಿ ವಿಫಲವಾಯಿತು.

More from Filmibeat

English summary
Bollywood actor Sanjay Dutt once tried to enter enter actress Sridevi's hotel room in a drunk state during Himmatwala shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X