ಬರ್ತ್‌ಡೇ ದಿನ ಗರಂ ಆದ ಬಾಬಾ, ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗಳನ್ನು ತಳ್ಳಿದ ಸಂಜಯ್ ದತ್..!

ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸೋದು ಕಾಮನ್ನು. ಇದನ್ನು ಅತಿಯಾದ ಅಭಿಮಾನ ಎನ್ನಬೇಕೋ? ಅಥವಾ ಹುಚ್ಚಾಟ ಎನ್ನಬೇಕೋ ಗೊತ್ತಿಲ್ಲ. ಒಟ್ನಲ್ಲಿ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ತಾರೆಯರು ಪ್ರತಿದಿನ ನರಳುವಂತಾಗಿದೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಸಂಜಯ್ ದತ್ ತಮ್ಮ ಅಭಿಮಾನಿಗಳ ಮೇಲೆ ಕಿಡಿ ಕಾರಿದ್ದಾರೆ. ಸುತ್ತುವರೆದ ತಮ್ಮ ಫ್ಯಾನ್ಸ್‌ನ ತಳ್ಳಿ ಮುಂದೆ ಸಾಗಿದ್ದಾರೆ.

ಹೌದು, ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ, ಕಡೆಗೆ ಜೈಲಿನ ರುಚಿಯನ್ನು ಕಂಡು ಬಂದ ಸಂಜಯ್ ದತ್, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿಯೂ ಕೂಡ ಗೆದ್ದು ಬಂದವರು. ಇಂಥಾ ಸಂಜಯ್ ದತ್ ಸದ್ಯಕ್ಕೆ ಉತ್ತರ-ದಕ್ಷಿಣ ಎನ್ನದೇ ಎಲ್ಲ ಭಾಷೆಯಲ್ಲಿಯೂ ಮಿಂಚುತ್ತಿದ್ದಾರೆ. ಭಾಷೆಯ ಭೇದ ಭಾವ ಇಲ್ಲದೇ ಭಾರತದೆಲ್ಲೆಡೆ ಅಪಾರವಾದ ಅಭಿಮಾನಿಗಳನ್ನೂ ಕೂಡ ಬಾಲಿವುಡ್‌ನ ಈ ಬಾಬಾ ಸಂಪಾದಿಸಿದ್ದಾರೆ. ಆದರೆ, ನಿನ್ನೆ.. ಈ ಅಭಿಮಾನ ಸಂಜಯ್ ದತ್‌ ಗೆ ಕಿರಿಕಿರಿಯನ್ನುಂಟು ಮಾಡಿದೆ.

sanjay-dutt-pushes-fans-at-restaurant-who-were-trying-to-take-a-selfie-with-him-video-goes-viral

ಹೌದು, ನಿನ್ನೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಸಂಜಯ್ ದತ್, ತಮ್ಮ ಸ್ನೇಹಿತರಿಗಾಗಿ ಮುಂಬೈನ ಬಾಂದ್ರಾದಲ್ಲಿರುವ ಜಪಾನೀಸ್ ಪಾಯಿಂಟ್‌ ರೆಸ್ಟೋರೆಂಟ್‌ನಲ್ಲಿ ಪಾರ್ಟಿಯೊಂದನ್ನು ಹಮ್ಮಿಕೊಂಡಿದ್ದರು. ಆದರೆ ಅದೇಗೋ ಈ ವಿಷಯ ತಿಳಿದ ಇವರ ಅಭಿಮಾನಿಗಳು ಅದಾಗಲೇ ಬೀಡು ಬಿಟ್ಟಿದ್ದ ಪಾಪರಾಜಿಗಳ ಜೊತೆ ಸೇರಿ ಹೊಟೇಲ್‌ನ ಮುಂದೆ ಬಿಡಾರವನ್ನು ಹೂಡಿದ್ದರು. ಸಂಜಯ್ ದತ್ ಆಚೆ ಬರುತ್ತಿದ್ದಂತೆಯೇ ಸೆಲ್ಫಿಗೆ ಮುಗಿ ಬಿದ್ದರು. ಆರಂಭದಲ್ಲಿ ಶಾಂತ ಚಿತ್ತದಿಂದನೇ ಸಂಜಯ್ ದತ್ ಸೆಲ್ಫಿ ತೆಗೆಸಿಕೊಳ್ಳಲು ನಿಂತರು. ಆದರೆ.. ಆ ನಂತರ ನೂಕಾಟ ತಳ್ಳಾಟದಿಂದ ಸಂಯಮ ಕಳೆದುಕೊಂಡ ಸಂಜಯ್ ದತ್ ಅಭಿಮಾನಿಗಳನ್ನು ತಳ್ಳಿ ತಮ್ಮ ಕಾರ್‌ನತ್ತ ಸಾಗಿದ್ದಾರೆ. ಸದ್ಯ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ವಿಡಿಯೋಗೆ ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಅನೇಕರು ಸಂಜಯ್ ದತ್ ಅವರನ್ನು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಸಂಜಯ್ ದತ್ ವಿರುದ್ಧ ಕಿಡಿ ಕಾರಿದ್ಧಾರೆ. ಸೆಲೆಬ್ರೆಟಿಗಳಿಗೂ ಖಾಸಗಿ ಬದುಕಿರುತ್ತೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಸಂಜಯ್ ದತ್ ಮಧ್ಯ ಸೇವಿಸಿದ್ದರು ಅನಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದವರು ಸಂಜಯ್ ದತ್ ಸೆಲ್ಪಿ ತೆಗೆಸಿಕೊಳ್ಳಬೇಕಿತ್ತು ಎಂದರೆ, ಮತ್ತೂ ಕೆಲವರು ದಕ್ಷಿಣ ಮತ್ತು ಉತ್ತರ ಭಾರತದ ಕಲಾವಿದರ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ ಚರ್ಚೆಯನ್ನೂ ಮಾಡುತ್ತಿದ್ದಾರೆ. ವಾದ-ಪ್ರತಿವಾದವನ್ನು ಮಾಡುತ್ತಿದ್ಧಾರೆ.

ಅಂದ್ಹಾಗೇ ಸೆಲ್ಫಿ ಕೇಳಲು ಬಂದ ಅಭಿಮಾನಿಗಳನ್ನು ಸಂಜಯ್ ದತ್ ಇದೇ ಮೊದಲ ಬಾರಿಯೇನು ಥಳಿಸಿಲ್ಲ. ಈ ಹಿಂದೆ ಎರಡ್ಮೂರು ಬಾರಿ ವಿಮಾನ ನಿಲ್ಧಾಣದಲ್ಲಿ, ಸೆಲ್ಫಿ ಕೇಳಲು ಬಂದ ಅಭಿಮಾನಿಗಳನ್ನೂ ಸಂಜಯ್ ದತ್ ಇದೇ ತರ ತಳ್ಳಿ ಹೋಗಿದ್ದಾರೆ. ಸಾಮಾಜಿಕ ಜಾಲತಾಣದ ಬಳಕೆದಾರರ ಆಕ್ರೋಶಕ್ಕೆ ಆಗಲೂ ಕೂಡ ಕಾರಣರಾಗಿದ್ಧಾರೆ. ಹೀಗಾಗಿ ಅಭಿಮಾನದ ಅರ್ಥ ಮತ್ತು ಬೆಲೆ ಗೊತ್ತಿರದ ಸಂಜಯ್ ದತ್ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗು ಅವಶ್ಯಕತೆಯಾದರೂ ಏನಿದೆ ಎನ್ನುವ ಪ್ರಶ್ನೆಯನ್ನೂ ಕೂಡ ಈ ವಿಡಿಯೋ ವೈರಲ್ ಆದ ಬೆನ್ನಲ್ಲಿ ಅನೇಕರು ಮಾಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X