ಜೈಲಿನಲ್ಲಿ ಕುಂತ್ಕೊಂಡೆ 'ಖಲ್‌ನಾಯಕ್'ಗೆ ಸ್ಕೆಚ್ ಹಾಕಿದ ಸಂಜಯ್ ದತ್ ; ಹಿಸ್ಟರಿ ರಿಪೀಟ್ ಆಗುತ್ತಾ? ಮತ್ತೊಂದು 'ಆಗ್' ಆಗುತ್ತಾ?

ಕೆಲ ಸಿನಿಮಾಗಳು ಕೇವಲ ಸಿನಿಮಾ ಆಗಿರುವುದಿಲ್ಲ. ಬದಲಿಗೆ ಆಯಾ ಕಾಲದ ನೆನಪುಗಳಾಗಿರುತ್ತಾವೆ. ಬಾಕ್ಸಾಫೀಸ್‌ನಲ್ಲಿ ಇತಿಹಾಸ ಬರೆಯುವದರ ಜೊತೆ ಈ ಚಿತ್ರಗಳು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿರುತ್ತಾವೆ. ಇಂತಹ ಸಿನಿಮಾಗಳನ್ನು ಮತ್ತೆ ಮತ್ತೆ ನೋಡಬೇಕು, ಆ ಚಿತ್ರದ ಜೊತೆಗಿರುವ ನೆನಪುಗಳನ್ನು ನೆನಪು ಮಾಡಬೇಕೆ ಹೊರತು, ಆ ನೆನಪುಗಳನ್ನು ಅಳಿಸಿ ಹಾಕುವ ಪ್ರಯತ್ನ ಮಾಡಬಾರದು. ಸೀಕ್ವೆಲ್.. ಪ್ರೀಕ್ವೆಲ್.. ಹೆಸರಿನಲ್ಲಿ ಮರು ಸೃಷ್ಟಿಸುವ ಸಾಹಸವನ್ನು ಮಾಡಬಾರದು.

ಹೀಗೆ ಆದಾಗ ಏನಾಗುತ್ತೆ ಎನ್ನುವುದಕ್ಕೆ ರಾಮ್ ಗೋಪಾಲ್ ವರ್ಮಾ ಅವರ ''ಆಗ್'' ಉದಾಹರಣೆ ಕಣ್ಮುಂದೆಯೇ ಇದೆ. ಆದರೂ ಹಳೆಯ ಕ್ಲಾಸಿಕ್ ಚಿತ್ರಗಳ ಮೇಲೆ ಕೈಯಾಡಿಸುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಇದಕ್ಕೆ ಸದ್ಯದ ಉದಾಹರಣೆಯೇ ''ಖಲ್‌ನಾಯಕ್ ರಿಟರ್ನ್ಸ್''.

Sanjay Dutt Resurrects Ballu in Khalnayak Returns The Sequel Conceived Behind Bars

ಹೌದು, ''ಖಲ್‌ನಾಯಕ್''.. ಸಂಜಯ್ ದತ್ ವೃತ್ತಿ ಬದುಕಿನ ಮೈಲಿಗಲ್ಲು. 1993ರಲ್ಲಿ ಬಿಡುಗಡೆಯಾದ ಈ ಚಿತ್ರ ಮಾಡಿದ್ದ ಸದ್ದು ಅಷ್ಟಿಷ್ಟಲ್ಲ. ''ಚೋಲಿ ಕೆ ಪೀಛೆ ಕ್ಯಾ ಹೈ'' ಹಾಡಿನ ವಿವಾದ ಇರಲಿ ಅಥವಾ ''ಖಲ್‌ನಾಯಕ್‌'' ಮತ್ತು ''ಖಲ್‌ನಾಯಕಿ'' ಶೀರ್ಷಿಕೆಗಾಗಿ ಸುಭಾಶ್ ಘೈ ಮತ್ತು ಸಾವನ್ ಕುಮಾರ್ ನಡುವೆ ನಡೆದ ಕಾನೂನು ಸಮರ ಇರಲಿ, ಆ ಕಾಲದಲ್ಲಿ ವಿಪರೀತ ಸದ್ದು ಮಾಡಿದ್ದ ಸಿನಿಮಾ ಇದು. ಇನ್ನು ಸಂಜಯ್ ದತ್ ಮೊದಲ ಬಾರಿ ಬಂಧನಕ್ಕೊಳಗಾಗಿದ್ದು ಕೂಡ ಇದೇ ಚಿತ್ರದ ಬಿಡುಗಡೆಯ ಸಮಯದಲ್ಲಿ.

ಇಂಥಾ ''ಖಲ್‌ನಾಯಕ್'' ಚಿತ್ರದ ಎರಡನೇ ಭಾಗವನ್ನ ಈಗ ಸಂಜಯ್ ದತ್ ಘೋಷಿಸಿದ್ದಾರೆ. ತಮ್ಮ ಚಿತ್ರಕ್ಕೆ "ಖಲ್‌ನಾಯಕ್ ರಿಟರ್ನ್ಸ್'' ಎಂಬ ಶೀರ್ಷಿಕೆಯನ್ನು ಕೂಡ ಫಿಕ್ಸ್ ಮಾಡಿದ್ದಾರೆ. ಇಷ್ಟೇ ಅಲ್ಲ ನಿರ್ಮಾಪಕ

ಅಕ್ಷ ಕಂಬೋಜ್ ಅವರ ಜೊತೆ ಸೇರಿ ಸುಭಾಷ್ ಘೈ ಒಡೆತನದ ''ಮುಕ್ತಾ ಆರ್ಟ್ಸ್‌'' ಸಂಸ್ಥೆಯಿಂದ ಎರಡನೇ ಭಾಗದ ಹಕ್ಕುಗಳನ್ನು ಕೂಡ ಖರೀದಿ ಮಾಡಿದ್ಧಾರೆ. ತ್ರೀ ಡೈಮೆನ್ಷನ್ ಮೋಷನ್ ಪಿಕ್ಚರ್ಸ್‌ ಎಂಬ ಬ್ಯಾನರ್ ಅಡಿ ತಾವೇ ಚಿತ್ರದ ನಿರ್ಮಾಣಕ್ಕೂ ಮುಂದಾಗಿದ್ದಾರೆ.

ಸದ್ಯ ''ಖಲ್‌ನಾಯಕ್ ರಿಟರ್ನ್ಸ್'' ಚಿತ್ರದ ಘೋಷಣೆಯ ಪ್ರಯುಕ್ತ, ಚಿಕ್ಕದಾದ ಟೀಸರ್ ನ ಸಂಜಯ್ ದತ್ ಅನಾವರಣ ಮಾಡಿದ್ದಾರೆ. ''ಖಲ್‌ನಾಯಕ್'' ಅಂತಹ ಚಿತ್ರವನ್ನು ತಮಗೆ ನೀಡಿದ್ದಕ್ಕೆ ನಿರ್ಮಾಪಕ ಮತ್ತು ನಿರ್ದೇಶಕ ಸುಭಾಷ್ ಘೈ ಅವರಿಗೆ ಧನ್ಯವಾದ ಕೂಡ ಹೇಳಿದ್ದಾರೆ. ಸುಭಾಷ್ ಘೈ ಅವರ ಸಹಕಾರ-ಸಲಹೆ ಇಲ್ಲದೇ ಈ ಸೀಕ್ವೆಲ್ ಸಾಧ್ಯ ಇಲ್ಲ ಅವರ ಮಾರ್ಗದರ್ಶನ ಖಂಡಿತ ಇದ್ದೇ ಇರುತ್ತೆ ಎಂದು ಕೂಡ ಹೇಳಿದ್ದಾರೆ.

sanjay-dutt-resurrects-ballu-in-khalnayak-returns-the-sequel-conceived-behind-bars

ಇನ್ನು ಖುದ್ದು ಸಂಜಯ್ ದತ್ ಹೇಳಿದಂತೆ ''ಖಲ್‌ನಾಯಕ್ ರಿಟರ್ನ್ಸ್‌'' ಚಿತ್ರದ ಕಥೆಗೆ ಪ್ರೇರಣೆಯೇ ಜೈಲಿನ ಕತ್ತಲೆ ಕೋಣೆಗಳು. ಜೈಲು ಹಕ್ಕಿಯಾದ ಸಮಯದಲ್ಲಿ ಸಂಜಯ್ ದತ್‌ ಅವರಿಗೆ ಹೊಳೆದ ಕಥೆ ಇದು. 1993ರಲ್ಲಿ ಜೈಲು ಸೇರಿದಾಗ''ಖಲ್‌ನಾಯಕ್'' ಚಿತ್ರ ನೋಡುವ ಆಸಕ್ತಿ ಯಾರಲ್ಲೆಲ್ಲಾ ಇದೆ ಎಂದು ಸಂಜಯ್ ದತ್ ತಮ್ಮ ಸಹ ಕೈದಿಗಳಿಗೆ ಕೇಳಿದ್ದರು. ಆಗ 4,000 ಕೈದಿಗಳು ನೋಡುವುದಾಗಿ ಹೇಳಿದ್ದರು. ಈ ಸಮಯದಲ್ಲಿ ಎಲ್ಲರಿಗೆ ಚಿತ್ರದ ಕುರಿತು ಒಂದು ಪುಟ ಬರೆಯಲು ಹೇಳಿದ್ದರು ಸಂಜಯ್ ದತ್. ಹೀಗೆ ಶುರುವಾದ ''ಖಲ್‌ನಾಯಕ್ ರಿಟರ್ನ್ಸ್'' ಈಗ ಘೋಷಣೆಯ ಹಂತಕ್ಕೆ ಬಂದು ನಿಂತಿದೆ. ಟೀಸರ್ ಬಿಡುಗಡೆಯಾಗಿದೆ.

ಆದರೆ ಇದೇ ಸಮಯದಲ್ಲಿ ಹಲವರಲ್ಲಿ ಆತಂಕ ಮನೆ ಮಾಡಿದೆ. ''ಖಲ್‌ನಾಯಕ್'' ಸಂಜಯ್ ದತ್ ಅವರಿಗೆ ಈಗ ಬೇಕಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಯಾಕೆಂದರೆ ಆರಂಭದಲ್ಲಿಯೇ ಹೇಳಿದಂತೆ ''ಖಲ್‌ನಾಯಕ್'' ಕಲ್ಟ್ ಸ್ಥಾನಮಾನ ಪಡೆದ ಸಿನಿಮಾ.

ಇನ್ನು ಇದು ಸೀಕ್ವೆಲ್ಲಾ..? ಬೇರೆಯದ್ದೇ ಕಥೆ ಹೊಂದಿರುವ ಸಿನಿಮಾನಾ..? ಫ್ರಾಂಚೈಸಿನಾ..? ಅಥವಾ 93ರ ಕಥೆಯನ್ನೇ ಮತ್ತೆ ರಿಮೇಕ್ ಮಾಡುವ ಪ್ರಯತ್ನನಾ..? ಎಂಬ ಇತ್ಯಾದಿ ಹಲವು ಪ್ರಶ್ನೆಗಳು ಹಲವರಲ್ಲಿವೆ. ಆದರೆ, ಸಂಜಯ್ ದತ್ ಈ ಯಾವ ಪ್ರಶ್ನೆಗಳಿಗೆ ಉತ್ತರವನ್ನು ನೀಡಿಲ್ಲ.

ಹೀಗಾಗಿ ''ಖಲ್‌ನಾಯಕ್'' ಚಿತ್ರವನ್ನು ಸಂಜಯ್ ದತ್ ಸರಿಯಾದ ರೂಪದಲ್ಲಿ ಕಾರ್ಯರೂಪಕ್ಕೆ ತರುತ್ತಾರಾ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ. ಟೀಸರ್ ಗೆ ಮೆಚ್ಚುಗೆ ಸಿಕ್ಕರೂ ಒಂದು ವರ್ಗ ವಿರೋಧ ವ್ಯಕ್ತಪಡಿಸುತ್ತಿದೆ. ''ಖಲ್ ನಾಯಕ್ ರಿಟರ್ನ್ಸ್‌'' ಮತ್ತೊಂದು ''ಆಗ್‌'' ಆಗದಿರಲಿ ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ನಿಜಕ್ಕೂ ಈ ''ಖಲ್‌ನಾಯಕ್'' ಯಾರು..? ಉತ್ತರ ಶೀಘ್ರದಲ್ಲೇ ಸಿಗುವ ನಿರೀಕ್ಷೆ ಇದೆ.

English summary
From the barracks to the big screen: Sanjay Dutt reveals how he conceptualized the Khalnayak sequel while behind bars. Get the exclusive details on Ballu’s return and why this is Dutt's most personal project yet.
Read more about: sanjay dutt sequel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X