Sanjay Dutt: ಡ್ರಗ್ಸ್ ತೆಗೆದುಕೊಂಡಿದ್ದಕ್ಕೆ ಕಾರಣ ಬಿಚ್ಚಿಟ್ಟ 'ಅಧೀರ'

ನಟ ಸಂಜಯ್ ದತ್ ವರ್ಣರಂಜಿತ ಬದುಕು ಬದುಕಿದ್ದ ವ್ಯಕ್ತಿ. ಸೂಪರ್ ಸ್ಟಾರ್ ಆಗಿ ಹೆಸರು ಮಾಡಿದ ವ್ಯಕ್ತಿ ಜೈಲಿಗೆ ಹೋಗಿ, ವೃತ್ತಿಯಲ್ಲಿ ಪಾತಾಳ ನೋಡಿ ನಂತರ ಮತ್ತೆ ಚಿಗುರಿ ಮೇಲೆದ್ದು ಬಂದಿದ್ದಾರೆ. ಅವರ ಜೀವನವೇ ಒಂದು ಸಿನಿಮಾ. ಅಂದಹಾಗೆ ಅವರ ಜೀವನದ ಬಗ್ಗೆ ಈಗಾಗಲೇ ಒಂದು ಸಿನಿಮಾ ಆಗಿದೆ ಸಹ.

ಸಂಜಯ್ ದತ್ ಜೀವನದ ಬಗ್ಗೆ ನಿರ್ದೇಶಕ ರಾಜ್‌ ಕುಮಾರ್ ಹಿರಾನಿ 'ಸಂಜು' ಹೆಸರಿನ ಸಿನಿಮಾ ಮಾಡಿದ್ದಾರೆ. ಸಿನಿಮಾದಲ್ಲಿ ಸಂಜಯ್ ದತ್ ಪಾತ್ರವನ್ನು ರಣ್ಬೀರ್ ಸಿಂಗ್ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಸಂಜಯ್ ದತ್‌ ಜೀವನವನ್ನು ಕಮರ್ಶಿಯಲ್ ಚೌಕಟ್ಟಿನಲ್ಲಿಯೇ ಕಟ್ಟಿಕೊಡಲಾಗಿದೆ.

ಸಿನಿಮಾದಲ್ಲಿ ಸಂಜಯ್ ದತ್‌ರ ಡ್ರಗ್ಸ್ ಚಟ, ಎಕೆ 47 ಗನ್ ಇಟ್ಟುಕೊಂಡಿದ್ದು, ವೃತ್ತಿಯಲ್ಲಿ ಆದ ಏರಿಳಿತಗಳ ಬಗ್ಗೆಯೂ ತೋರಿಸಲಾಗಿದೆ. ಸಿನಿಮಾದ ಪ್ರಕಾರ ಸಂಜಯ್ ದತ್ ಮೊದಲ ಬಾರಿಗೆ ಡ್ರಗ್ಸ್ ತೆಗೆದುಕೊಂಡಿದ್ದು, ಅಪ್ಪ ಬೈದಿದ್ದಕ್ಕೆ, ಎರಡನೇ ಬಾರಿ ಅಮ್ಮನಿಗೆ ಹುಷಾರಿಲ್ಲ ಎಂದು ತಿಳಿದು ಬೇಸರವಾದಾಗ.

Sanjay Dutt Revealed Why He Use To Take Drugs

ಆದರೆ ಇತ್ತೀಚೆಗೆ ಸಂಜಯ್ ದತ್ ಯೂಟ್ಯೂಬ್ ಚಾನೆಲ್‌ ಒಂದಕ್ಕೆ ಸಂದರ್ಶನ ನೀಡಿದ್ದು, ಸಂದರ್ಶನದಲ್ಲಿ ನಾನೇಕೆ ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ''ಹುಡುಗಿಯರ ಮುಂದೆ ಸ್ಟೈಲ್ ಆಗಿ ಕಾಣುತ್ತದೆಂದು, ಕೂಲ್ ಆಗಿ ಕಾಣುತ್ತದೆಂದು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ'' ಎಂದು ಮುಚ್ಚು ಮರೆ ಇಲ್ಲದೆ ಹೇಳಿಕೊಂಡಿದ್ದಾರೆ.

''ಯುವಕನಾಗಿದ್ದಾನ ನಾನು ಬಹಳ ನಾಚಿಕೆ ಸ್ವಭಾವದವನಾಗಿದ್ದೆ. ಹುಡುಗಿಯರ ವಿಚಾರದಲ್ಲಂತೂ ಬಹಳ ನಾಚಿಕೆ ಸ್ವಭಾವ ನನ್ನದು. ಡ್ರಗ್ಸ್ ತೆಗೆದುಕೊಂಡರೆ ಅವರೊಟ್ಟಿಗೆ ಮಾತನಾಡಲು ಅಂಜಿಕೆ ಎನಿಸುತ್ತಿರಲಿಲ್ಲ. ಹಾಗಾಗಿ ನಾನು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ'' ಎಂದು ಸಂಜಯ್ ದತ್ ಹೇಳಿದ್ದಾರೆ.

''ನಾನು ಮಾದಕ ವಸ್ತು ಪುನರ್ವಸತಿ ಕೇಂದ್ರಕ್ಕೆ ಹೋಗಿ ಬಂದ ಬಳಿಕ ನನ್ನನ್ನು ಜನ 'ಚರ್ಸಿ' (ಸದಾ ನಶೆ ಮಾಡುವವನು) ಎಂದು ಕರೆಯಲಾರಂಭಿಸಿದರು. ಮುಂಬೈನ ರಸ್ತೆಗಳಲ್ಲಿ ಜನರೂ ಹಾಗೆ ಕರೆಯಲು ಆರಂಭಿಸಿದರು. ನನಗೆ ಅದು ಸರಿ ಬರಲಿಲ್ಲ. ಆಗ ನಾನು ನಿಶ್ಚಯ ಮಾಡಿ ಬಾಡಿ ಬಿಲ್ಡಿಂಗ್ ಪ್ರಾರಂಭಿಸಿದೆ. ಜನ ನಂತರ 'ಚರ್ಸಿ' ಎನ್ನುವುದು ಬಿಟ್ಟು ಅಬ್ಬಾ ಎಂಥಹಾ ಬಾಡಿ ಇವನದ್ದು ಎನ್ನಲು ಆರಂಭಿಸಿದರು'' ಎಂದಿದ್ದಾರೆ ನಟ ಸಂಜಯ್ ದತ್.

''ಸತತ ಹತ್ತು ವರ್ಷಗಳ ಕಾಲ ನಾನು ಕೋಣೆ, ಬಾತ್‌ರೂಂ ಬಿಟ್ಟು ಹೊರಗೆ ಬರಲು ಮನಸ್ಸಾಗುತ್ತಿರಲಿಲ್ಲ. ಚಿತ್ರೀಕರಣಗಳ ಮೇಲೆ ಆಸಕ್ತಿಯೇ ಹೊರಟು ಹೋಗಿತ್ತು. ನನ್ನ ಜೀವನ ಇಷ್ಟೆ ಎನಿಸಿಬಿಟ್ಟಿತ್ತು. ಆದರೆ ಹೇಗೆ ಎಲ್ಲವೂ ಬದಲಾಯ್ತು. ಜನ ನನ್ನನ್ನು ಆಡಿಕೊಳ್ಳಲು ಪ್ರಾರಂಭಿಸಿದಾಗಲೇ ನಿಶ್ಚಯಿಸಿದೆ, ನಾನು ಏನನ್ನಾದರು ಮಾಡಬೇಕೆಂದು'' ಎಂದು ಹಳೆಯ ನೆನಪುಗಳಿಗೆ ಜಾರಿದ್ದಾರೆ ಸಂಜಯ್.

'ಕೆಜಿಎಫ್ 2' ಸಿನಿಮಾದಲ್ಲಿ ಸಂಜಯ್ ದತ್, ಅಧೀರನ ಪಾತ್ರದಲ್ಲಿ ನಟಿಸಿದ್ದಾರೆ. ಪಾತ್ರ ಸಖತ್ ಹಿಟ್ ಆಗಿದೆ. ಅಕ್ಷಯ್ ಕುಮಾರ್ ಜೊತೆಗೆ 'ಪೃಥ್ವಿರಾಜ್' ಹಾಗೂ ರಣ್ಬೀರ್ ಕಪೂರ್ ಜೊತೆಗೆ 'ಶಮ್‌ಶೇರಾ' ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ 'ದಿ ಗುಡ್ ಮಹಾರಾಜ' ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

More from Filmibeat

English summary
Sanjay Dutt revealed why he use to take drugs. He said he thought it will look cool to take drugs in front of girls.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X