ಸಾಕು ನಿಲ್ಲಿಸರಯ್ಯ ; 'ಧುರಂಧರ್ 2' ಗೆದ್ದ ಬೆನ್ನಲ್ಲೇ ಸಿಡಿದೆದ್ದ ಸಂಜಯ್ ದತ್
ಸೆಲೆಬ್ರಿಟಿಗಳ ಖಾಸಗಿ ಬದುಕು, ಮನರಂಜನೆಯ ಸರಕು ಆಗಿ ಬದಲಾಗಿದ್ದು ಇಂದು ನಿನ್ನೆಯಲ್ಲ. ಅನೇಕ ವರ್ಷದ ಹಿಂದೆಯೇ .. ಬಣ್ಣದ ಪ್ರಪಂಚಲ್ಲಿರುವ ಬಣ್ಣ .. ಬಣ್ಣದ .. ಜನ ಹೋದಲ್ಲಿ .. ಬಂದಲ್ಲಿ .. ಕ್ಯಾಮರಾಗಳನ್ನ ಕರೆಸಿಕೊಳ್ಳುವ ಮೂಲಕ ತಮ್ಮ ಕೈಯಾರೆ ತಮ್ಮ ಖಾಸಗಿತನಕ್ಕೆ ಕೊಳ್ಳಿ ಇಟ್ಟಿದ್ದಾರೆ. ಆದರೆ ಅದರ ತೀವೃತೆ ಈಗೀಗ ಕೆಲವರ ಅನುಭವಕ್ಕೆ ಬರುತ್ತಿದೆ. ಉದಾಹರಣೆಗೆ ಸಂಜಯ್ ದತ್.
ಹೌದು, ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ, ಕಡೆಗೆ ಜೈಲಿನ ರುಚಿಯನ್ನು ಕಂಡು ಬಂದ ಸಂಜಯ್ ದತ್, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿಯೂ ಕೂಡ ಗೆದ್ದು ಬಂದವರು.

ಇಂಥಾ ಸಂಜಯ್ ದತ್ ಸದ್ಯ "ಧುರಂದರ್" ಮತ್ತು "ಧುರಂಧರ್ 2" ಚಿತ್ರದ ಗೆಲುವನ್ನು ಎಂಜಾಯ್ ಮಾಡುತ್ತಿದ್ದಾರೆ. ಭಾರತದೆಲ್ಲೆಡೆ ಮನೆ ಮಾತಾಗಿದ್ದಾರೆ.
ಇವತ್ತು ಕೇವಲ ಅಕ್ಷಯ್ ಖನ್ನಾ ಅವರ ರೆಹಮಾನ್ ಡಕಾಯತ್ ಮತ್ತು ರಾಕೇಶ್ ಬೇಡಿ ಅವರ ಜಮೀಲ್ ಜಮಾಲಿ ಪಾತ್ರಗಳ ಕುರಿತು ಮಾತ್ರ ಜನ ಮಾತನಾಡುತ್ತಿಲ್ಲ. ಸಂಜಯ್ ದತ್ ಅವರ ಎಸ್ ಪಿ ಚೌಧರಿ ಅಸ್ಲಂ ಪಾತ್ರದ ಕುರಿತು ಕೂಡ ಮಾತನಾಡುತ್ತಿದ್ದಾರೆ. ಸಂಜಯ್ ದತ್ ಗೆ ಸಲಾಂ ಹೊಡೆಯುತ್ತಿದ್ದಾರೆ.
ಸಹಜವಾಗಿಯೇ ತಮ್ಮ ಪಾತ್ರಕ್ಕೆ ಮತ್ತು ಚಿತ್ರಕ್ಕೆ ಸಿಕ್ತಿರುವ ಪ್ರೀತಿಯಿಂದ ಸಂಜಯ್ ದತ್ ಅವರ ಹೃದಯ ತುಂಬಿ ಬಂದಿದೆ. ಹೀಗಾಗಿಯೇ ತಮ್ಮ ಪತ್ನಿ ಮಾನ್ಯತಾ ಮತ್ತು ಮಕ್ಕಳಾದ ಶಹ್ರಾನ್ ಮತ್ತು ಇಕ್ರಾ ಜೊತೆ ಈ ಸಕ್ಸಸ್ ನ ಸೆಲೆಬ್ರೇಟ್ ಮಾಡಲು ಮನೆಯ ಹೊರ ಬಂದಿದ್ದಾರೆ. ಇದೇ ಸಮಯದಲ್ಲಿ ಕಿರಿಕಿರಿಗೊಳಗಾಗಿ ಕೆಂಡ ಕಾರಿದ್ದಾರೆ.
ಯಾಕೆಂದರೆ ಆಗಲೇ ಹೇಳಿದಂತೆ ಊಟಕ್ಕೆಂದು ರೆಸ್ಟೋರೆಂಟ್ ಗೆ ಸಂಜಯ್ ದತ್ ಹೋದಾಗ ಪಾಪರಾಜಿಗಳು ದತ್ ಮತ್ತು ಕುಟುಂಬವನ್ನು ಸುತ್ತುವರೆದಿದ್ದಾರೆ. ಬೇಡ ಅಂದರೂ ಕೇಳದೇ ಫೋಟೋ ಕ್ಲಿಕಿಸಿದ್ದಾರೆ. ವಿಡಿಯೋ ಮಾಡಿದ್ದಾರೆ. ಪಾಪರಾಜಿಗಳ ಈ ವರ್ತನೆಯಿಂದ ನಿಗಿ ನಿಗಿ ಕೆಂಡದಂತಾದ ಸಂಜಯ್ ದತ್ ಸಾಕು ನಿಲ್ಲಿಸರಯ್ಯ ಎಂದು ಕೂಗಿದ್ದಾರೆ.

ಸಂಜಯ್ ದತ್ ಅವರ ಈ ಕೋಪ ತಾಪ ನೋಡಿ ಅಲ್ಲಿದ್ದ ಪಾಪರಾಜಿಗಳು ಸುಮ್ಮನಾದರಾ..? ಅಂದರೆ ಅದು ಇಲ್ಲ. ಬದಲಿಗೆ ಊಟ ಮುಗಿಸಿಕೊಂಡು ಸಂಜಯ್ ದತ್ ಹೊರಗಡೆ ಬರುವವರೆಗೆ ಕಾದು ಹೊರ ಬರುತ್ತಿದ್ದಂತೆಯೇ ಮತ್ತೆ ಬಾಬಾ.. ಬಾಬಾ..ಎಂದು ಕೂಗಿದ್ದಾರೆ. ಫೋಟೊಗೆ ಫೋಸ್ ಕೊಡುವಂತೆ ಹೇಳಿದ್ದಾರೆ.
ಆದರೆ ಈ ಬಾರಿ ಸಂಜಯ್ ದತ್ ತಾಳ್ಮೆ ಕಳೆದುಕೊಳ್ಳಲಿಲ್ಲ. ಬದಲಿಗೆ ಆಯ್ತಲ್ವಾ ಎಲ್ಲ, ಎರಡು ನಿಮಿಷ ನಿಮ್ಮ ಕ್ಯಾಮರಾಗಳನ್ನೆಲ್ಲ ಬಂದ್ ಮಾಡಿ ಎಂದಿದ್ದಾರೆ. ಸದ್ಯ ಸಂಜಯ್ ದತ್ ಅವರ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸಹಜವಾಗಿಯೇ ಪಾಪರಾಜಿಗಳ ವಿರುದ್ದ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ವೈಯಕ್ತಿಕ ಬದುಕು ಮತ್ತು ಸ್ವಾತಂತ್ಯ್ರದ ಕುರಿತು ಚರ್ಚೆಗಳಾಗುತ್ತಿವೆ.
ಇನ್ನುಳಿದಂತೆ ಸದ್ಯಕ್ಕೆ ಉತ್ತರ-ದಕ್ಷಿಣ ಎನ್ನದೇ ಎಲ್ಲ ಭಾಷೆಯಲ್ಲಿಯೂ ಸಂಜಯ್ ದತ್ ಮಿಂಚ್ತಿದ್ದಾರೆ. ಭಾಷೆಯ ಭೇದ ಭಾವ ಇಲ್ಲದೇ ಭಾರತದೆಲ್ಲೆಡೆ ಅಪಾರವಾದ ಅಭಿಮಾನಿಗಳನ್ನೂ ಕೂಡ ಬಾಲಿವುಡ್‌ನ ಈ ಬಾಬಾ ಸಂಪಾದಿಸಿದ್ದಾರೆ. ಸದ್ಯ ಇವರ "ಆಖ್ರಿ ಸವಾಲ್".. ''ರಾಜಾ ಶಿವಾಜಿ''.. ''ಬಾಪ್'' ..ಕನ್ನಡದ ''ಕೆಡಿ - ದಿ ಡೆವಿಲ್'' .. ಹೀಗೆ ಹಲವು ಸಿನಿಮಾಗಳು ಇನ್ನು ಬಿಡುಗಡೆಯಾಗಬೇಕಿವೆ.


Click it and Unblock the Notifications











