ಸಂಜಯ್ ದತ್ ಈ ಫೋಟೋ ನೋಡಿ ಮರುಗಿದ ಅಭಿಮಾನಿಗಳು: ಆರೋಗ್ಯದ ಬಗ್ಗೆ ಹೆಚ್ಚಿದ ಚಿಂತೆ

ಬಾಲಿವುಡ್ ನಟ ಸಂಜಯ್ ದತ್ ಕ್ಯಾನ್ಸರ್ ಚಿಕಿತ್ಸೆಯ ನಡುವೆಯೂ ಇತ್ತೀಚಿಗೆ ಪತ್ನಿ ಮಾನ್ಯತಾ ದತ್ ಜೊತೆ ದುಬೈಗೆ ಪ್ರಯಾಣ ಬೆಳೆಸಿದ್ದರು. ಸಂಜಯ್ ದತ್ ಚಿಕಿತ್ಸೆಯ ನಡುವೆಯೂ ಸಿನಿಮಾ ಕೆಲಸದಲ್ಲಿಯೂ ತೊಡಗಿಕೊಂಡಿದ್ದಾರೆ. ಈ ನಡುವೆ ಸಣ್ಣ ಬ್ರೇಕ್ ಪಡೆದು ಮಕ್ಕಳಿಗಾಗಿ ದುಬೈಗೆ ಹಾರಿದ್ದರು. ಇದೀಗ ದುಬೈಯಿಂದ ವಾಪಸ್ ಆಗಿರುವ ಸಂಜಯ್ ದತ್ ಮತ್ತೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲವು ದಿನಗಳು ಮಕ್ಕಳ ಜೊತೆ ಕಾಲಕಳೆದ ಸಂಜಯ್ ದತ್ ಇದೀಗ ಮುಂಬೈ ಆಸ್ಪತ್ರೆಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಸಂಜಯ್ ದತ್ ಆಸ್ಪತ್ರೆಯಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೊರಗಿ ಹೋಗಿರುವ ಸಂಜು ಬಾಬಾನನ್ನು ನೋಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮರುಕ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದಲ್ಲಿ ಖಡಕ್ ಡೈಲಾಗ್ ಗಳನ್ನು ಹೊಡೆಯುತ್ತ, ಎದುರಾಳಿಗಳನ್ನು ಹೊಡೆದುರುಳಿಸುತ್ತಿದ್ದ ಸಂಜಯ್ ದತ್ ಈಗ ದುರ್ಬಲರಾಗಿ ನಿಂತಿರುವ ಫೋಟೋ ಅಭಿಮಾನಿಗಳ ಮನಕ್ಕೆ ಬೆಂಕಿ ಇಟ್ಟಂತೆ ಆಗಿದೆ. ಮುಂದೆ ಓದಿ...

ತೀರ ತೆಳ್ಳಗಾಗಿರುವ ಸಂಜಯ್ ದತ್

ತೀರ ತೆಳ್ಳಗಾಗಿರುವ ಸಂಜಯ್ ದತ್

ಸಂಜಯ್ ದತ್ ದುಬೈಯಿಂದ ವಾಪಸ್ ಆದ ಬಳಿಕ ಆಸ್ಪತ್ರೆಗೆ ತೆರಳಿರುವ ಫೋಟೋ ಇದಾಗಿದೆ. ಈ ಫೋಟೋದಲ್ಲಿ ಸಂಜಯ್ ದಂತ್ ತುಂಬಾ ತೆಳ್ಳಗಾಗಿದ್ದಾರೆ. ಕಟ್ಟುಮಸ್ತಾದ ಖಡಕ್ ದೇಹವನ್ನು ಹೊಂದಿದ್ದ ಸಂಜಯ್ ದತ್ ನನ್ನು ಈ ಸ್ಥಿತಿಯಲ್ಲಿ ನೋಡುತ್ತಿದ್ದ ಅಭಿಮಾನಿಗಳಿಗೆ ಕರಳುಹಿಂಡುವಂತಿದೆ. ಒಮ್ಮೆಗೆ ದುರ್ಬಲ, ಅಸಹಾಯಕ ಸ್ಥಿತಿಯಲ್ಲಿ ನಿಂತಿರುವ ಸಂಜು ಬಾಬಾನ ಫೋಟೋ ನಿಜಕ್ಕೂ ಕಣ್ಣೀರುತರಿಸುತ್ತೆ.

ಸಂಜು ಬಾಬಾಗಾಗಿ ನೆಟ್ಟಿಗರ ಪ್ರಾರ್ಥನೆ

ಸಂಜು ಬಾಬಾಗಾಗಿ ನೆಟ್ಟಿಗರ ಪ್ರಾರ್ಥನೆ

ಸಂಜಯ್ ದತ್ ನೋಡಿ ಅಭಿಮಾನಿಗಳು, ಬೇಗ ಗುಣಮುಖರಾಗಿ ಸಂಜಯ್ ದತ್, ನೀವು ಶೀಘ್ರದಲ್ಲೇ ಗುಣಮುಖರಾಗುತ್ತೀರಿ ಎನ್ನುವ ನಂಬಿಕೆ ಇದೆ, ಗುಣಮುಖರಾದ ಫೋಟೋವನ್ನು ನೋಡಲು ಬಯಸುತ್ತೇವೆ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡುತ್ತಿದ್ದಾರೆ. ಸಂಜಯ್ ದತ್ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು ಮತ್ತು ಸಿನಿಮಾರಂಗದ ಗಣ್ಯರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.

ತಿಂಗಳು ಬಳಿಕ ಮಕ್ಕಳನ್ನು ನೋಡಿ ಸಂತಸ ಪಟ್ಟ ದತ್

ತಿಂಗಳು ಬಳಿಕ ಮಕ್ಕಳನ್ನು ನೋಡಿ ಸಂತಸ ಪಟ್ಟ ದತ್

ಸಂಜಯ್ ದತ್ ದುಬೈ ತೆರಳುತ್ತಿದಂತೆ ಅಪ್ಪನನ್ನು ನೋಡಿ ಮಕ್ಕಳು ತುಂಬಾ ಸಂತೋಷ ಪಟ್ಟಿದ್ದಾರೆ. ಕ್ಯಾನ್ಸರ್ ಇರುವ ವಿಚಾರ ಬಹಿರಂಗವಾದ ಬಳಿಕ ಮೊದಲ ಬಾರಿಗೆ ಮಕ್ಕಳು ಅಪ್ಪನನ್ನು ನೋಡಿದ್ದಾರೆ. ಸದ್ಯ ಸಂಜಯ್ ದತ್, ಪತ್ನಿ ಮತ್ತು ಮಕ್ಕಳ ಜೊತೆ ದುಬೈನಲ್ಲಿ ಕೆಲವು ದಿನಗಳು ಸಮಯ ಕಳೆದಿದ್ದಾರೆ. ಇತ್ತೀಚಿಗೆ ಪತ್ನಿ ಮಾನ್ಯತಾ ದತ್ ಮಕ್ಕಳ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

Recommended Video

ಅತ್ತಿಗೆ ಸೀಮಂತ ಮುಗಿಸಿದ ದೊಡ್ಡ ಮನವಿಯೊಂದನ್ನು ಮಾಡಿಕೊಂಡ Dhruva Sarja | Filmibeat Kannada
ಚಿಕಿತ್ಸೆಯ ಜೊತೆಗೆ ಸಿನಿಮಾ ಚಿತ್ರೀಕರಣ

ಚಿಕಿತ್ಸೆಯ ಜೊತೆಗೆ ಸಿನಿಮಾ ಚಿತ್ರೀಕರಣ

ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಸದ್ಯ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲ ಹಂತದ ಚಿಕಿತ್ಸೆ ಪೂರ್ಣಗೊಳಿಸಿರುವ ಸಂಜಯ್ ದತ್ ಇದೀಗ ಎರಡನೇ ಹಂತದ ಚಿಕಿತ್ಸೆ ಪ್ರಾರಂಭಿಸಿದ್ದಾರೆ. ಚಿಕಿತ್ಸೆ ಜೊತೆಗೆ ಚಿತ್ರೀಕಣದಲ್ಲಿಯೂ ಭಾಗಿಯಾಗಿದ್ದಾರೆ. 'ಶಂಶೇರಾ' ಸಿನಿಮಾದ ಪ್ರಮುಖ ಪಾತ್ರದಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣಕ್ಕೆ ಈಗಾಗಲೇ ದತ್ ಹಾಜರಾಗಿದ್ದಾರೆ. ಇದಲ್ಲದೆ ಸಾಕಷ್ಟು ಸಿನಿಮಾಗಳನ್ನು ಸಂಜಯ್ ದತ್ ಪೂರ್ಣಗೊಳಿಸಬೇಕಿದೆ.

More from Filmibeat

English summary
Sanjay Dutt Looks so weak in recent photo of his Hospital visits. Fan worried about his health.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X