ಐಶ್ವರ್ಯಾ ರೈ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿದ್ದ ಸಂಜಯ್ ದತ್ ಸಹೋದರಿಯರು

By Avani Malnad

ಸೌಂದರ್ಯಕ್ಕೆ ಮತ್ತೊಂದು ರೂಪಕ ಎಂಬಂತೆ ಐಶ್ವರ್ಯಾ ರೈ ಹೆಸರು ಚಾಲ್ತಿಯಲ್ಲಿದೆ. ಕರಾವಳಿ ಮೂಲದ ಮಾಜಿ ವಿಶ್ವಸುಂದರಿ ಹೆಣ್ಣುಮಗುವಿನ ತಾಯಿಯಾಗಿದ್ದರೂ ಅವರ ವರ್ಚಸ್ಸು ಕೊಂಚವೂ ಕುಂದಿಲ್ಲ. ಚಿತ್ರರಂಗಕ್ಕೆ ಕಾಲಿರಿಸುವ ಮುನ್ನವೇ ಐಶ್ವರ್ಯಾ ರೈ ಕೀರ್ತಿ ಜಗತ್ತಿನೆಲ್ಲೆಡೆ ಪಸರಿಸಿತ್ತು. ಇಂತಹ ಸುಂದರಿ ಚಿತ್ರರಂಗಕ್ಕೆ ಬರಬಾರದು ಎಂದು ಸಂಜಯ್ ದತ್ ಬಯಸಿದ್ದರಂತೆ.

Recommended Video

ಈ ಪ್ರಶ್ನೆಗೆ ಉತ್ತರಿಸಿ ಸುಸ್ತಾಗಿದ್ದಾರೆ ಸಂಜು ಬಾಬಾ | SANJAY DUTT | KGF2 | ONEINDIA KANNADA

ಸಂಜಯ್ ದತ್ ಚಿಕ್ಕಂದಿನಲ್ಲಿ ಹುಡುಗಾಟಿಕೆಯ ಸ್ವಭಾವ ಹೊಂದಿದ್ದವರು. ಅವರನ್ನು ನಿಯಂತ್ರಿಸುವುದು ಪೋಷಕರಿಂದಲೂ ಸಾಧ್ಯವಾಗಿರಲಿಲ್ಲ. ಐಶ್ವರ್ಯಾ ರೈ ಅವರನ್ನು ಸಂಜಯ್ ದತ್ ಮೊದಲು ನೋಡಿದ್ದು ತಂಪು ಪಾನೀಯವೊಂದರ ಜಾಹೀರಾತಿನಲ್ಲಿ. ಎಷ್ಟು ಸುಂದರವಾಗಿದ್ದಾಳೆ, ಯಾರೀಕೆ? ಎಂದು ಸಂಜಯ್ ದತ್ ಕೇಳಿದ್ದರಂತೆ. ಅವರ ಭಂಡತನದ ಅರಿವಿದ್ದ ಸಹೋದರಿಯರು ಸಂಜಯ್ ದತ್‌ಗೆ ಎಚ್ಚರಿಕೆ ನೀಡಿದ್ದರಂತೆ. ಮುಂದೆ ಓದಿ...

ಆಕೆಯ ತಂಟೆಗೆ ಹೋಗಬೇಡ

ಆಕೆಯ ತಂಟೆಗೆ ಹೋಗಬೇಡ

'ಐಶ್ವರ್ಯಾ ರೈ ಅವರ ಫೋಟೊ ನೋಡಿ ಅವರ ಸೌಂದರ್ಯದ ಬಗ್ಗೆ ಇನ್ನಷ್ಟು ಯೋಚಿಸುವ ಮುನ್ನವೇ ನನ್ನ ಸಹೋದರಿಯರು ನನಗೆ ಎಚ್ಚರಿಕೆ ನೀಡಿದರು. ಆಕೆಯನ್ನು ಪುಸಲಾಯಿಸಲು ಹೋಗಬೇಡ. ಆಕೆಯ ನಂಬರ್ ತೆಗೆದುಕೊಳ್ಳಬೇಡ. ಆಕೆಗೆ ಹೂವು ಕಳಿಸಬೇಡ' ಎಂದೆಲ್ಲ ಸಲಹೆಗಳನ್ನು ಕೊಟ್ಟಿದ್ದರು ಎಂದು ಸಂಜಯ್ ದತ್ ಸಂದರ್ಶನವೊಂದರಲ್ಲಿ ಹೇಳಿದ್ದರು.

ಕಾಳೆಯಲು ಕಾಯುತ್ತಿರುತ್ತಾರೆ

ಕಾಳೆಯಲು ಕಾಯುತ್ತಿರುತ್ತಾರೆ

'ಚಿತ್ರರಂಗಕ್ಕೆ ಬಂದರೆ ಐಶ್ವರ್ಯಾರ ಈಗಿನ ಮುಖದಲ್ಲಿನ ಸೌಂದರ್ಯ ಮಾಯವಾಗುತ್ತದೆ. ಏಕೆಂದರೆ ಆಕೆ ಈ ಸಿನಿಮಾ ಜಗತ್ತನ್ನು ನಿಭಾಯಿಸುವುದು ಸುಲಭವಲ್ಲ. ಇದು ಸ್ಪರ್ಧಾತ್ಮಕ. ನಾನು ಅದಕ್ಕಿಂತಲೂ ಚೆನ್ನಾಗಿ ಕಾಣಿಸಬೇಕು. ನಾನು ಅಲ್ಲಿ ಜಾಗ ಪಡೆಯುತ್ತಿದ್ದೆ ಎನ್ನುವಂತೆ ಕಾಯುತ್ತಿರುತ್ತಾರೆ. ಇಲ್ಲಿ ಹೇಗೆಂದರೆ ನೀವು ಎರಡು ಹೆಜ್ಜೆ ಇರಿಸಿದರೆ ಐದು ಹೆಜ್ಜೆ ಹಿಂದೆ ಎಳೆಯಲು ಐನೂರು ಜನ ಪ್ರಯತ್ನಿಸುತ್ತಾರೆ. ಆಗ ನೀವು ಕಠಿಣರಾಗುತ್ತೀರಿ. ಅಲ್ಲಿಂದ ನಿಮ್ಮ ಸೌಂದರ್ಯದ ಗುಣಗಳೆಲ್ಲ ಹೊರಟುಹೋಗುತ್ತದೆ ಎಂದು ಹೇಳಿದ್ದರು.

ಗಾಡಿ ಓಡಿಸುತ್ತಾರೆ

ಗಾಡಿ ಓಡಿಸುತ್ತಾರೆ

'ಆಕೆ ರಸ್ತೆಯ ಮೇಲೆ ಬಂದು ನಿಂತರೆ ಎಲ್ಲರೂ ಬ್ರೇಕ್ ಹಾಕಿ ಆಕೆಯನ್ನು ಉಳಿಸಲು ಮುಂದಾಗುತ್ತಾರೆ. ಆದರೆ ನಾನು ಹಾಗೆಯೇ ಮಾಡಿದರೆ ಅವರು ನನ್ನ ಮೇಲೆಯೇ ಗಾಡಿ ಓಡಿಸುತ್ತಾರೆ' ಎಂದು ಸಂಜಯ್ ದತ್, ಚಿತ್ರರಂಗ ಯಾವ ರೀತಿ ನಡೆದುಕೊಳ್ಳುತ್ತದೆ ಎಂಬುದನ್ನು ಹೇಳಿದ್ದರು.

More from Filmibeat

English summary
Bollywood actor Sanjay Dutt once revealed that his sisters warned him to not woo Aishwarya Rai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X