21 ವರ್ಷದ ನಂತರ ಒಂದಾದ ಸಂಜು-ಮಾಧುರಿ ಜೋಡಿ
ಬಾಲಿವುಡ್ ನಟ ಸಂಜಯ್ ದತ್ 'ಕಲಾಂಕ್' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಅಭಿಷೇಕ್ ವರ್ಮ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು 21ವರ್ಷಗಳ ನಂತರ ಸಂಜಯ್ ದತ್ ಹಾಗೂ ಮಾಧುರಿ ದೀಕ್ಷಿತ್ ಒಟ್ಟಿಗೆ ಅಭಿನಯ ಮಾಡುತ್ತಿದ್ದಾರೆ.
'ಕಲಾಂಕ್' ಸಿನಿಮಾದಲ್ಲಿ ವರುಣ್ ಧಾವನ್ ಹಾಗೂ ಆಲಿಯಾ ಭಟ್ ಕೂಡ ಅಭಿನಯ ಮಾಡುತ್ತಿದ್ದು ಆದಿತ್ಯ ರಾಯ್ ಕಪೂರ್ ಮತ್ತು ಸೋನಾಕ್ಷಿ ಸೆನ್ಹಾ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಡಿಕೊಳ್ಳಲಿದ್ದಾರೆ.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ನಡೆಯುವ ಕಥೆಯನ್ನು ತೆರೆ ಮೇಲೆ ತರುವ ಪ್ರಯತ್ನಕ್ಕೆ ಧರ್ಮ ಪ್ರೊಡಕ್ಷನ್ಸ್ ಮುಂದಾಗಿದ್ದು ಚಿತ್ರೀಕರಣಕ್ಕಾಗಿ ಅದ್ಧೂರಿ ಸೆಟ್ ಹಾಕಲಾಗಿದೆ. ಮಾಧುರಿ ದೀಕ್ಷಿತ್ ನಿರ್ವಹಿಸುತ್ತಿರುವ ಪಾತ್ರವನ್ನು ಶ್ರೀದೇವಿ ಮಾಡಬೇಕಿತ್ತಂತೆ ಶ್ರೀದೇವಿ ನಿಧನದ ನಂತ್ರ ಮಾಧುರಿ ಈ ಪಾತ್ರಕ್ಕೆ ಜೀವ ತುಂಬುತಿದ್ದಾರೆ.

ಇಂದಿನಿಂದ ಶುರುವಾಗಿರುವ 'ಕಲಾಂಕ್' ಸಿನಿಮಾ ಮುಂದಿನ ವರ್ಷ ಏರ್ಪಿಲ್ 19 ರಂದು ಬಿಡುಗಡೆ ಮಾಡಲು ಚಿತ್ರತಂಡ ಈಗಾಗಲೇ ತಯಾರಿ ಮಾಡಿಕೊಂಡಿದೆ. ಸಾಕಷ್ಟು ದಿನಗಳ ನಂತರ ಮತ್ತೆ ಬಾಲಿವುಡ್ ಅಂಗಳದಲ್ಲಿ ಸ್ವಾತಂತ್ರ್ಯ ಪೂರ್ವ ಭಾರತ ಕಥೆ ನೋಡುವ ಅವಕಾಶ ಸಿಗುತ್ತಿದೆ.


Click it and Unblock the Notifications











