Don't Miss!
- News
ಸಲ್ಮಾನ್ ಖಾನ್ ನಂತರ ಸ್ವರಾ ಭಾಸ್ಕರ್ಗೆ ಜೀವ ಬೆದರಿಕೆ
- Sports
IND vs ENG 5ನೇ ಟೆಸ್ಟ್: ಬುಮ್ರಾ ನಾಯಕನಲ್ಲ; ಅಚ್ಚರಿ ಮೂಡಿಸಿದ ರಾಹುಲ್ ದ್ರಾವಿಡ್ ಹೇಳಿಕೆ!
- Finance
ಜೂ.29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Lifestyle
ಗರ್ಲ್ಸ್ ಪುರುಷರ ಈ ಸೀಕ್ರೆಟ್ ತಿಳಿದುಕೊಂಡ್ರೆ ರಿಲೇಷನ್ಶಿಪ್ನಲ್ಲಿ ಸಮಸ್ಯೆನೇ ಬರಲ್ಲ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Education
IWST Recruitment 2022 : 13 ಪ್ರಾಜೆಕ್ಟ್ ಫೆಲೋ ಮತ್ತು ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ದಕ್ಷಿಣದ ಸಿನಿಮಾಗಳ ಮುಂದೆ ಬಾಲಿವುಡ್ ಸೋಲುತ್ತಿರುವುದಕ್ಕೆ ಕಾರಣ ನೀಡಿದ 'ಅಧೀರ'
ದಕ್ಷಿಣ ಭಾರತದ ಸಿನಿಮಾಗಳು ಕಮಾಲ್ ಮಾಡುತ್ತಿವೆ. ಭಾರತೀಯ ಚಿತ್ರರಂಗದ ಮೇಲೆ ಬಾಲಿವುಡ್ ಸಾಧಿಸಿದ್ದ ಏಕಸ್ವಾಮ್ಯವನ್ನು ಮುರಿದಿರುವುದಲ್ಲದೆ, ಬಾಲಿವುಡ್ ಪ್ರಾಬಲ್ಯ ಇದ್ದ ಪ್ರದೇಶಗಳಲ್ಲಿಯೇ ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಸಿನಿಮಾಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿವೆ.
'ಬಾಹುಬಲಿ'ಯಿಂದ ಆರಂಭವಾದ ಬಾಲಿವುಡ್ ಮೇಲೆ ದಕ್ಷಿಣ ಭಾರತ ಸಿನಿಮಾಗಳ ದಂಡಯಾತ್ರೆ, 'ಪುಷ್ಪ', 'RRR' ಇದೀಗ 'ಕೆಜಿಎಫ್ 2' ಮೂಲಕ ಮುಂದೆ ಮುಂದೆ ಸಾಗುತ್ತಲೇ ಇದೆ. 'ಕೆಜಿಎಫ್ 2' ಬಿಡುಗಡೆ ಬಳಿಕವಂತೂ ಬಾಲಿವುಡ್ ದಂಗಾಗಿಬಿಟ್ಟಿದೆ.
ಶಾರುಖ್
ಖಾನ್
ಹೊಸ
ಸಿನಿಮಾ
'ಡಂಕಿ',
ರಾಜ್ಕುಮಾರ್
ಹಿರಾನಿ
ಸಾರಥ್ಯ!
ಹಿಂದಿ ಭಾಷಿಕ ಪ್ರದೇಶದಲ್ಲಿ 'ಕೆಜಿಎಫ್ 2' ಕೇವಲ ನಾಲ್ಕು ದಿನದಲ್ಲಿ 200 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿ, ಹಿಂದಿ ಸಿನಿಮಾಗಳ ದಾಖಲೆಗಳನ್ನು ಪುಡಿ-ಪುಡಿ ಮಾಡಿಬಿಟ್ಟಿದೆ. ದಕ್ಷಿಣ ಭಾರತ ಸಿನಿಮಾಗಳ ದಾಳಿಯಿಂದ ಕಂಗೆಟ್ಟಿರುವ ಬಾಲಿವುಡ್ಡಿಗರು, ತಾವು ಮಾಡಿರುವ ತಪ್ಪಿನ ವಿಶ್ಲೇಷಣೆಗೆ ಇಳಿದಿದ್ದಾರೆ. ಇದೀಗ 'ಕೆಜಿಎಫ್ 2' ಸಿನಿಮಾದಲ್ಲಿ ಅಧೀರನ ಪಾತ್ರದಲ್ಲಿ ನಟಿಸಿರುವ ಸಂಜಯ್ ದತ್, ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತ ಸಿನಿಮಾಗಳ ಮುಂದೆ ಸೋಲುತ್ತಿರುವುದಕ್ಕೆ ಕಾರಣವೊಂದನ್ನು ಹೆಕ್ಕಿ ನೀಡಿದ್ದಾರೆ.

ಬಾಲಿವುಡ್ ಮಾಡಿರುವ ತಪ್ಪಿನ ಬಗ್ಗೆ ಸಂಜಯ್ ದತ್ ಮಾತು
ಬಾಲಿವುಡ್ ಸಿನಿಮಾ ರಂಗ ಮಾಡಿದ ತಪ್ಪಿನ ಬಗ್ಗೆ ಮಾತನಾಡಿರುವ ಸಂಜಯ್ ದತ್, ''ಬಾಲಿವುಡ್ ಸಿನಿಮಾ ರಂಗ ಹೀರೋಯಿಸಮ್ ಸಿನಿಮಾಗಳನ್ನು ಮರೆತುಬಿಟ್ಟಿದೆ. ಆದರೆ ದಕ್ಷಿಣ ಭಾರತ ಸಿನಿಮಾಗಳು ಹೀರೋಯಿಸಮ್ ಸಿನಿಮಾಗಳನ್ನು ಮರೆತಿಲ್ಲ. ಅವುಗಳ ಮೂಲಕವೇ ಕತೆ ಹೇಳುತ್ತಿದೆ. ಲಾರ್ಜರ್ ದ್ಯಾನ್ ಲೈಫ್ ಮಾದರಿಯ ಸಿನಿಮಾಗಳನ್ನು ಗುಣಮಟ್ಟದ ಜೊತೆಗೆ ನೀಡುತ್ತಿವೆ'' ಎಂದಿದ್ದಾರೆ.

ನಮ್ಮ ಪ್ರೇಕ್ಷಕರನ್ನು ನಾವು ಮರೆತಿದ್ದೇವೆ: ಸಂಜಯ್ ದತ್
''ಜೀವನದ ಪ್ರತಿಫಲನದಂಥಹಾ ಸಿನಿಮಾ, ರೊಮ್ಯಾಂಟಿಕ್ ಸಿನಿಮಾಗಳು ಒಳ್ಳೆಯವಲ್ಲ ಎಂದು ನಾನು ಹೇಳುತ್ತಿಲ್ಲ ಆದರೆ ಅದರ ಜೊತೆಗೆ ಹೀರೋಯಿಸಮ್ ಸಿನಿಮಾಗಳು ಸಹ ಬೇಕು. ನಾವು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ರಾಜಸ್ಥಾನದ ದೊಡ್ಡ ಸಂಖ್ಯೆಯ ನಮ್ಮ ಆಡಿಯನ್ಸ್ಗಳನ್ನು ಮರೆತೇ ಬಿಟ್ಟಿದ್ದೇವೆ. ಕೇವಲ ಕೆಲವೇ ವರ್ಗಕ್ಕೆ ನಾವು ಸಿನಿಮಾಗಳನ್ನು ಮಾಡುತ್ತಿದ್ದೇವೆ. ಬಾಲಿವುಡ್ ಮತ್ತೆ ತನ್ನ ಹಿಂದಿನ ವೈಭಕ್ಕೆ ಮರಳುತ್ತದೆನ್ನುವ ಅಭಿಲಾಶೆ ಇದೆ'' ಎಂದಿದ್ದಾರೆ ಸಂಜಯ್ ದತ್.

ರಾಜಮೌಳಿಯ ಉದಾಹರಣೆ ನೀಡಿದ ಸಂಜಯ್ ದತ್
ರಾಜಮೌಳಿಯ ಉದಾಹರಣೆ ನೀಡಿರುವ ಸಂಜಯ್ ದತ್, ''ನೋಡಿ ರಾಜಮೌಳಿ ತನ್ನ ಯೋಜನೆಗೆ, ಯೋಚನೆಗೆ ಸರಿ ಹೊಂದುವ ನಿರ್ಮಾಪಕರನ್ನು ತಾವೇ ಆಯ್ಕೆ ಮಾಡುತ್ತಾರೆ. ನಮ್ಮಲ್ಲಿ ಅಂಥಹಾ ನಿರ್ಮಾಪಕರು ಹಲವರಿದ್ದಾರೆ. ಸುಭಾಷ್ ಘಾಯ್, ಯಶ್ ಚೋಪ್ರಾ, ಗುಲ್ಶನ್ ರಾಯ್, ಯಶ್ ಜೋಹರ್ ಇನ್ನೂ ಹಲವು ನಿರ್ಮಾಪಕರು ಎಂತೆಂಥಾ ಒಳ್ಳೆಯ ಸಿನಿಮಾ ಮಾಡಿದ್ದಾರೆ ಗಮನಿಸಿ. ದಕ್ಷಿಣ ಭಾರತದಲ್ಲಿ ಅವರು ಲಿಖಿತ ಚಿತ್ರಕತೆಯೊಂದಿಗೆ ಸಿನಿಮಾ ಮಾಡುತ್ತಾರೆ. ಕತೆಯನ್ನು ಹಾಳೆಯ ಮೇಲೆ ಬರೆಯುತ್ತಾರೆ. ಆದರೆ ನಮ್ಮಲ್ಲಿ ಸಿನಿಮಾ ಬಿಡುಗಡೆ ಆದಮೇಲೆ ಎಷ್ಟು ರಿಕವರಿ ಆಯಿತೆಂಬ ಲೆಕ್ಕ ಮಾತ್ರ ಹಾಳೆಯ ಮೇಲಿರುತ್ತದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಸಂಜಯ್.

ಅಧೀರ ಹಾಗೂ ಕಾಂಚಾಗೂ ಇರುವ ವ್ಯತ್ಯಾಸವೇನು?
ಅದೇ ಸಂದರ್ಶನದಲ್ಲಿ 'ಅಧೀರ' ಪಾತ್ರಕ್ಕೂ 'ಕಾಂಚಾ' ಪಾತ್ರಕ್ಕೂ ಇರುವ ವ್ಯತ್ಯಾಸದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸಂಜಯ್ ದತ್, ''ಇಬ್ಬರ ಗುರಿ ಒಂದೇ, ಕಾಂಚಾಗೆ ಮಾಂಡ್ವಾ ಬೇಕಿರುತ್ತದೆ, ಅಧೀರನಿಗೆ ಕೆಜಿಎಫ್. ಇಬ್ಬರೂ ಸಹ ತಮ್ಮ ಗುರಿಯೂ ಅಚಲ. ಆದರೆ ಇಬ್ಬರ ಲುಕ್ ಹಾಗೂ ಫೀಲ್ ಮಾತ್ರವೇ ಭಿನ್ನ. ಅಧೀರ ಹಾಗೂ ಕಾಂಚಾ ಗುರಿ ಒಂದೇ ಆದರು ವ್ಯಕ್ತಿತ್ವದಲ್ಲಿ ಹಾಗೂ ವೇಷ ಭೂಷಣಗಳಲ್ಲಿ ಬದಲಾವಣೆ ಇದೆ ಎಂದಿದ್ದಾರೆ.

ಚಿಂತೆ ವ್ಯಕ್ತಪಡಿಸಿರುವ ಸಲ್ಮಾನ್ ಖಾನ್
ಬಾಲಿವುಡ್ ಪ್ರದೇಶದಲ್ಲಿ ದಕ್ಷಿಣದ ಸಿನಿಮಾಗಳು ಒಳ್ಳೆಯ ಪ್ರದರ್ಶನ ಮಾಡುತ್ತಿರುವ ಬಗ್ಗೆ ಸಲ್ಮಾನ್ ಖಾನ್ ಸಹ ಚಿಂತೆಗೀಡಾಗಿದ್ದು, ''ದಕ್ಷಿಣದ ಸಿನಿಮಾಗಳು ಇಲ್ಲಿ ಚೆನ್ನಾಗಿ ಪ್ರದರ್ಶನ ಕಾಣುತ್ತವೆ, ಆದರೆ ನಮ್ಮ ಸಿನಿಮಾಗಳು ಅವರ ಭಾಗದಲ್ಲಿ ಏಕೆ ಓಡುವುದಿಲ್ಲ?'' ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ನಾವೂ ಸಹ ಹೀರೋಯಿಸಮ್ ಸಿನಿಮಾಗಳನ್ನು ಮಾಡುವುದನ್ನು ಹೆಚ್ಚು ಮಾಡಬೇಕು, ಹಿರೋಯಿಸಮ್ ಸಿನಿಮಾಗಳು, ದಕ್ಷಿಣದ ಸಿನಿಮಾಗಳು ಹಿರೋಯಿಸಮ್ ಸಿನಿಮಾಗಳ ಮೂಲಕವೇ ದೊಡ್ಡ ಯಶಸ್ಸನ್ನು ಗಳಿಸುತ್ತಿವೆ'' ಎಂದಿದ್ದಾರೆ.