ಅಲ್ಲು ಅರ್ಜುನ್ ನೋ ಎಂದ್ರು.. ಸಂಜಯ್ ದತ್ ಯೆಸ್ ಎಂದೇಬಿಟ್ರು!

'ಪಠಾಣ್‌' ಸಕ್ಸಸ್ ಬೆನ್ನಲ್ಲೇ ಶಾರುಕ್ ಖಾನ್ ನಟನೆಯ 'ಜವಾನ್' ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅಟ್ಲಿ ನಿರ್ದೇಶನದ ಈ ಚಿತ್ರದಲ್ಲಿ ಸೌತ್‌ ಸ್ಟಾರ್ಸ್ ಕೂಡ ನಟಿಸ್ತಿದ್ದಾರೆ. ವಿಜಯ್ ಸೇತುಪತಿ, ದಳಪತಿ ವಿಜಯ್, ನಯನತಾರಾ, ಪ್ರಿಯಾಮಣಿ ಚಿತ್ರದ ತಾರಾಗಣದಲ್ಲಿದ್ದಾರೆ. ಈಗ ಸಂಜಯ್ ದತ್ ಕೂಡ ತಂಡವನ್ನು ಸೇರಿಕೊಳ್ಳುತ್ತಿದ್ದಾರೆ. ಶಾರುಕ್ ಜೊತೆ ಸಂಜು ಬಾಬಾ ತೆರೆ ಹಂಚಿಕೊಳ್ಳಲಿದ್ದಾರೆ.

ಸ್ಟಾರ್‌ ಕಾಸ್ಟ್‌ನಿಂದಲೂ 'ಜವಾನ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. 200 ಕೋಟಿ ಬಜೆಟ್‌ನಲ್ಲಿ ಸ್ವತಃ ಕಿಂಗ್ ಖಾನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ಸಿನಿಮಾ ಏಕಕಾಲಕ್ಕೆ ತೆರೆಗೆ ಬರ್ತಿದೆ. ಇತ್ತೀಚಿಗೆ ಸಾಲು ಸಾಲಾಗಿ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಸಂಜಯ್ ದತ್ ನಟಿಸ್ತಿದ್ದಾರೆ. KGF ನಂತರ KD, ಲಿಯೋ ಹೀಗೆ ಸಂಜು ಬಾಬಾ ನಟಿಸುತ್ತಿರುವ ಸೌತ್ ಸಿನಿಮಾಗಳ ಲಿಸ್ಟ್ ಬೆಳೀತಿದೆ.

sanjay-dutt-to-make-a-special-appearance-in-shahrukh-khan-s-jawan

ಕೆಲ ದಿನಗಳ ಹಿಂದೆ 'ಜವಾನ್' ಚಿತ್ರದಲ್ಲಿ ಸಣ್ಣ ಪಾತ್ರ ಮಾಡಲು ತೆಲುಗಿನ ಅಲ್ಲು ಅರ್ಜುನ್‌ನ ಚಿತ್ರತಂಡ ಸಂಪರ್ಕಿಸಿತ್ತು ಎನ್ನಲಾಗಿತ್ತು. 'ಪುಷ್ಪ'-2 ಸಿನಿಮಾದಲ್ಲಿ ಬ್ಯುಸಿ ಇರುವ ಅರ್ಜುನ್ ನಟಿಸೋಕೆ ನೋ ಎಂದಿದ್ದರು ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಈಗ ಸಂಜಯ್ ದತ್ 'ಜವಾನ್' ಚಿತ್ರದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮುಂದಿನ ತಿಂಗಳು ಮುಂಬೈ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯಲಿದೆ. ಇದೇ ಮೊದಲ ಬಾರಿಗೆ ಕಿಂಗ್ ಖಾನ್ ಹಾಗೂ ಶಾರುಕ್ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

sanjay-dutt-to-make-a-special-appearance-in-shahrukh-khan-s-jawan

ಈ ಹಿಂದೆ ಶಾರುಕ್ ನಟನೆಯ 'ಓಂ ಶಾಂತಿ ಓಂ' ಹಾಗೂ 'ರಾ ವನ್‌' ಸಿನಿಮಾಗಳ ಹಾಡುಗಳ ಸಣ್ಣ ಝಲಕ್‌ನಲ್ಲಿ ಸಂಜು ಬಾಬು ದರ್ಶನ ಕೊಟ್ಟಿದ್ದರು. ಇನ್ನು 'ಜವಾನ್' ಚಿತ್ರದಲ್ಲಿ ಕನ್ನಡದಿಂದ ಶಿವರಾಜ್‌ಕುಮಾರ್ ನಟಿಸ್ತಾರೆ ಎನ್ನಲಾಗುತ್ತಿದೆ. ದೀಪಿಕಾ ಪಡುಕೋಣೆ, ದಳಪತಿ ವಿಜಯ್ ಗೆಸ್ಟ್ ಅಪಿಯರೆನ್ಸ್ ಮಾಡೋದು ಪಕ್ಕಾ ಆಗಿದೆ. ಅನಿರುದ್‌ ರವಿಚಂದರ್ ಸಂಗೀತ, ಜಿ. ಕೆ ವಿಷ್ಣು ಛಾಯಾಗ್ರಹಣ 'ಜವಾನ್' ಚಿತ್ರಕ್ಕಿದೆ.

ಬಾಲಿವುಡ್‌ ಜೊತೆಗೆ ದಕ್ಷಿಣದ ಕಲಾವಿದರು, ತಂತ್ರಜ್ಞರು ದೊಡ್ಡಮಟ್ಟದಲ್ಲಿ ಒಟ್ಟಿಗೆ ಸೇರಿ ಮಾಡುತ್ತಿರುವ ಅದ್ಧೂರಿ ಸಿನಿಮಾ ಇದು. ಸಂಜಯ್ ದತ್ ಎಂಟ್ರಿಯಿಂದ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಗರಿಗೆದರಿದೆ. ಜೂನ್ 2ಕ್ಕೆ ಚಿತ್ರವನ್ನು ಘೋಷಣೆ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಿಸಿದೆ. ಅದಕ್ಕೆ ತಕ್ಕಂತೆ ಭರದಿಂದ ಚಿತ್ರೀಕರಣ ನಡೀತಿದೆ. ಜೊತೆ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ವರ್ಕ್ ಕೂಡ ಸಾಗಿದೆ.

More from Filmibeat

English summary
Sanjay Dutt To Make A Special Appearance In ShahRukh Khan's Jawan. Allu Arjun rejected the film because of his busy schedule. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X