For Quick Alerts
  ALLOW NOTIFICATIONS  
  For Daily Alerts

  ರಾಖಿಭಾಯ್‌ಗಿಂತಲೂ ಡೇಂಜರಸ್ ಕೊರೊನಾ: ವ್ಯಾಕ್ಸಿನ್ ಪಡೆದ ಅಧೀರ!

  |

  ಕೆಜಿಎಫ್ 2 ನ ಅಜಾನುಬಾಹು ಅಧೀರ ತನ್ನ ನೋಟದಿಂದಲೇ ಎದುರು ನಿಂತವರ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ. ಆದರೆ ಆತನಿಗೂ ಕೊರೊನಾ ಕಂಡರೆ ಭಯ. ಹಾಗಾಗಿ ಅಧೀರ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿದ್ದಾನೆ.

  ಹೌದು, ಕೆಜಿಎಫ್‌2 ಅಧೀರ ಪಾತ್ರಧಾರಿ ಸಂಜಯ್ ದತ್ ಅವರು ಕೊರೊನಾ ವ್ಯಾಕ್ಸಿನ್‌ನ ಮೊದಲ ಡೋಸೇಜ್ ಅನ್ನು ಇಂದು ಮುಂಬೈನಲ್ಲಿ ಪಡೆದುಕೊಂಡಿದ್ದಾರೆ.

  ಬಾಲಿವುಡ್‌ನ ಹಲವು ಹಿರಿಯ ನಟರು ಕೋವಿಡ್ ವ್ಯಾಕ್ಸಿನ್ ಪಡೆಯುತ್ತಿದ್ದಾರೆ. ಇದೀಗ ಸಂಜಯ್ ದತ್ ಸಹ ವ್ಯಾಕ್ಸಿನ್ ಪಡೆದಿದ್ದು, ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ವ್ಯಾಕ್ಸಿನ್‌ನ ಮೊದಲ ಡೋಸ್‌ ಪಡೆದ ಸಂಜಯ್

  ವ್ಯಾಕ್ಸಿನ್‌ನ ಮೊದಲ ಡೋಸ್‌ ಪಡೆದ ಸಂಜಯ್

  ಮುಂಬೈನ ಬಿಕೆಸಿ ವ್ಯಾಕ್ಸಿನ್ ಕೇಂದ್ರದಲ್ಲಿ ಸಂಜಯ್ ದತ್ ಅವರು ವ್ಯಾಕ್ಸಿನ್ ಪಡೆದಿದ್ದಾರೆ. ತಾವು ವ್ಯಾಕ್ಸಿನ್ ಪಡೆದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಂಜಯ್ ದತ್, ಕೊರೊನಾ ವಿರದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ.

  ವೈದ್ಯ ಧಿರೆಗೆ ಧನ್ಯವಾದ ಹೇಳಿದ ಸಂಜಯ್

  ವೈದ್ಯ ಧಿರೆಗೆ ಧನ್ಯವಾದ ಹೇಳಿದ ಸಂಜಯ್

  'ಇಂದು ಬಿಕೆಸಿ ಕೊರೊನಾ ವ್ಯಾಕ್ಸಿನ್ ಕೇಂದ್ರದಲ್ಲಿ ಮೊದಲ ಡೋಸೇಜ್ ಅನ್ನು ಪಡೆದುಕೊಂಡೆ. ವೈದ್ಯ ಧಿರೆ ಹಾಗೂ ಎಲ್ಲ ವೈದ್ಯಕೀಯ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಅವರು ಮಾಡುತ್ತಿರುವ ಅದ್ಭುತ ಕಾರ್ಯದ ಬಗ್ಗೆ ನನಗೆ ಪ್ರೀತಿ ಮತ್ತು ಗೌರವ ಇದೆ' ಎಂದಿದ್ದಾರೆ ಸಂಜಯ್ ದತ್.

  ಕ್ಯಾನ್ಸರ್ ಗೆದ್ದು ವರ್ಷವಾಗಿಲ್ಲ ಸಂಜಯ್ ದತ್

  ಕ್ಯಾನ್ಸರ್ ಗೆದ್ದು ವರ್ಷವಾಗಿಲ್ಲ ಸಂಜಯ್ ದತ್

  ಕಳೆದ ವರ್ಷವಷ್ಟೆ ಸಂಜಯ್ ದತ್‌ಗೆ ಶ್ವಾಸಕೋಶದ ಕ್ಯಾನ್ಸರ್ ಆಗಿತ್ತು. ಸಂಜಯ್ ದತ್ ಬದುಕುವುದೇ ಅನುಮಾನ ಎಂಬ ರೀತಿಯಲ್ಲಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಸಂಜಯ್ ದತ್ ಕ್ಯಾನ್ಸರ್ ನಿಂದ ಗುಣಮುಖರಾದರು. ಜೊತೆಗೆ ಕೆಜಿಎಫ್ 2 ಸೇರಿದಂತೆ ತಾವು ಒಪ್ಪಿಕೊಂಡಿದ್ದ ಎಲ್ಲ ಸಿನಿಮಾಗಳ ಚಿತ್ರೀಕರಣ ಮುಗಿಸಿದರು.

  Asha Bhat ರಾಬರ್ಟ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು ಹೇಗೆ?? | Filmibeat Kannada
  ಜುಲೈ 16 ರಂದು ಸಿನಿಮಾ ಬಿಡುಗಡೆ

  ಜುಲೈ 16 ರಂದು ಸಿನಿಮಾ ಬಿಡುಗಡೆ

  ಕೆಜಿಎಫ್ 2 ರಲ್ಲಿ ಅಧೀರ ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಸಂಜಯ್ ದತ್. ಸಿನಿಮಾ ಜುಲೈ 16 ರಂದು ಬಿಡುಗಡೆ ಆಗಲಿದೆ. ಇದರ ನಂತರ ರಣಬೀರ್ ಕಪೂರ್ ಜೊತೆ ನಟಿಸಿರುವ 'ಶಂಶೇರಾ' ಸಿನಿಮಾ ಬಿಡುಗಡೆ ಆಗಲಿದೆ ನಂತರ 'ಪೃಥ್ವಿರಾಜ್' ಸಿನಿಮಾದ ಸರದಿ.

  English summary
  Actor Sanjay Dutt receives first shot of COVID 19 vaccine in Mumbai BKC vaccine center.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X