ಕಣ್ಣಿಲ್ಲದ ವ್ಯಕ್ತಿ ಪಾತ್ರದಲ್ಲಿ 'ಅಧೀರ' ಸಂಜಯ್ ದತ್
ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ಅಧೀರನಾಗಿರುವ ಸಂಜಯ್ ದತ್ ಈಗ ಕಣ್ಣಿಲ್ಲದ ವ್ಯಕ್ತಿಯಾಗುತ್ತಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಲಿರುವ ಐತಿಹಾಸಿಕ ಚಿತ್ರದಲ್ಲಿ ಕುರುಡನ ಪಾತ್ರ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.
ಹೌದು, ಅಕ್ಷಯ್ ಕುಮಾರ್ ನಟಿಸುತ್ತಿರುವ ಐತಿಹಾಸಿಕ 'ಪೃಥ್ವಿರಾಜ್' ಚಿತ್ರದಲ್ಲಿ ಸಂಜಯ್ ದತ್ ಕುರುಡನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಈಗ ಬಿಟೌನ್ ನಲ್ಲಿ ಚರ್ಚೆಯಾಗ್ತಿದೆ.
ಈ ಹಿಂದೆಯೇ 'ಪೃಥ್ವಿರಾಜ್' ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಖಚಿತ ಮಾಡಿದ್ದ ಸಂಜಯ್ ದತ್ ತಮ್ಮ ಪಾತ್ರದ ಬಗ್ಗೆ ಬಿಟ್ಟುಕೊಟ್ಟಿರಲಿಲ್ಲ. ಇದೀಗ, ಸಂಜಯ್ ಪಾತ್ರ ಬಹಿರಂಗವಾಗಿದ್ದು, ಅಕ್ಷಯ್ ಕುಮಾರ್ ಗೆ ಅಂಕಲ್ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ.

ಚಿತ್ರದಲ್ಲಿ ಇದು ಬಹುಮುಖ್ಯ ಪಾತ್ರಗಳಲ್ಲಿ ಒಂದಾಗಿದ್ದು, ಕಥೆಗೆ ಶಕ್ತಿ ತುಂಬಲಿದೆಯಂತೆ. ಭಾವನಾತ್ಮಕವಾಗಿಯೂ ಈ ಪಾತ್ರ ಚಿತ್ರಕ್ಕೆ ಸಾಥ್ ನೀಡಲಿದೆ ಎಂದು ಹೇಳಲಾಗುತ್ತಿದೆ.
ಅಂದ್ಹಾಗೆ, ಈ ಚಿತ್ರವನ್ನು ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನ ಮಾಡುತ್ತಿದ್ದಾರೆ. ರಜಪೂತ ರಾಜ ಪೃಥ್ವಿರಾಜ್ ಚೌಹಣ್ ಅವರ ಜೀವನ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಅಕ್ಷಯ್ ಕುಮಾರ್ ಅವರು ಪೃಥ್ವಿರಾಜ್ ಆಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











