For Quick Alerts
  ALLOW NOTIFICATIONS  
  For Daily Alerts

  ನನ್ನ ಜೀವನದ ಬೆಳಕು ನೀನು; ಪತ್ನಿಗೆ 'ಅಧೀರ' ಸಂಜಯ್ ದತ್ ಹೃದಯಸ್ಪರ್ಶಿ ಪತ್ರ

  |

  ಬಾಲಿವುಡ್‌ನ ಖ್ಯಾತ ನಟ ಸಂಜಯ್ ದತ್ ತನ್ನ ಪತ್ನಿ ಮಾನ್ಯತಾ ದತ್ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಪತ್ನಿ ಮಾನ್ಯತಾ ಅಂದರೆ ಸಂಜಯ್ ದತ್ ಅವರಿಗೆ ಅಪಾರ ಪ್ರೀತಿ. ಪತ್ನಿ ಬಗ್ಗೆ ಆಗಾಗ ಹೇಳುತ್ತಿರುತ್ತಾರೆ. ಪತ್ನಿ ಮಾನ್ಯತಾ ತನ್ನ ತಾಯಿ ಎಂದೇ ಸಂಜಯ್ ದತ್ ಯಾವಾಗಲು ಕರೆಯುತ್ತಾರೆ.

  ಇಂದು (ಜುಲೈ 22) ಪ್ರೀತಿಯ ಪತ್ನಿ ಮಾನ್ಯತಾ ಅವರ ಹುಟ್ಟುಹಬ್ಬ. ಹುಟ್ಟುಹಬ್ಬದ ದಿನ ಪತ್ನಿಯ ಜೊತೆ ಇರುವ ಸುಂದರವನ್ನು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಪತ್ನಿ ಬಗ್ಗೆ ಹೃದಯಸ್ಪರ್ಶಿ ಸಾಲುಗಳನ್ನು ಬರೆದಿದ್ದಾರೆ. ಕುಟುಂಬದ ಬೆನ್ನೆಲುಬು, ತನ್ನ ಜೀವನದ ಬೆಳಕು ಅಂತೆಲ್ಲ ಮಾನ್ಯತಾ ಅವರನ್ನು ಹಾಡಿ ಹೊಗಳಿದ್ದಾರೆ.

  ಪತ್ನಿ ಬಗ್ಗೆ ಸಂಜಯ್ ದತ್ ಹೇಳಿರುವ ಸಾಲುಗಳು, "ನಮ್ಮ ಕುಟುಂಬದ ಬೆನ್ನೆಲುಬು ನೀನು. ನನ್ನ ಜೀವನದ ಬೆಳಕು. ನಿನ್ನ ಬಗ್ಗೆ ಹೇಳಲು ಪದಗಳೇ ಸಿಗುತ್ತಿಲ್ಲ. ನಿನಗೆ ಎಲ್ಲವೂ ಚೆನ್ನಾಗಿ ತಿಳಿದಿದೆ. ಯಾವಾಗಲು ಜೊತೆಯಿರುವುದಕ್ಕೆ ಮತ್ತು ನೀವು ನೀವಾಗಿರುವುದಕ್ಕೆ ಧನ್ಯವಾದಗಳು. ಹುಟ್ಟುಹಬ್ಬದ ಶುಭಾಶಯಗಳು ಅಮ್ಮ" ಎಂದು ಬರೆದುಕೊಂಡಿದ್ದಾರೆ.

  ಸಂಜಯ್ ದತ್ ಸಾಲುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿ ಗಣ್ಯರು ಸಹ ಹಾರ್ಟ್ ಇಮೋಜಿ ಕಳುಹಿಸುತ್ತಿದ್ದಾರೆ. ಸಂಜಯ್ ದತ್ ಮತ್ತು ಮಾನ್ಯತಾ ದತ್ ಇಬ್ಬರು 2008ರಲ್ಲಿ ಮದುವೆಯಾದರು. ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಶಹ್ರಾನ್ ಮತ್ತು ಇಕ್ರಾ ಎಂದು ಮಕ್ಕಳಿಗೆ ಹೆಸರಿಟ್ಟಿದ್ದಾರೆ.

  ಸಂಜಯ್ ದತ್ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಚಿಕಿತ್ಸೆ ಬಳಿಕ ಸದ್ಯ ಚೇತರಿಸಿಕೊಂಡಿದ್ದಾರೆ. ಸಂಜಯ್ ದತ್ ಕಷ್ಟದ ಸಮಯದಲ್ಲಿ ಪತ್ನಿ ಮಾನ್ಯತಾ ದತ್ ಜೊತೆಯಲ್ಲೇ ನಿಂತಿದ್ದರು. ಜೈಲಿಗೆ ಹೋದ ಸಮಯದಿಂದ ಕ್ಯಾನ್ಸರ್ ಗೆದ್ದು ಬರುವವರೆಗೂ ಮಾನ್ಯತಾ ಪತಿ ಸಂಜಯ್ ದತ್ ಜೊತೆಯಲ್ಲೇ ಇದ್ದು ಧೈರ್ಯ ತುಂಬಿದ್ದರು.

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸಂಜಯ್ ದತ್ ಕೊನೆಯದಾಗಿ ಸಡಕ್-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಲಿಯಾ ಭಟ್ ಮತ್ತು ಆದಿತ್ಯ ರಾಯ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದಲ್ಲಿ ಸಂಜಯ್ ದತ್ ಬಣ್ಣ ಹಚ್ಚಿದ್ದಾರೆ. ಅಧೀರ ಪಾತ್ರದಲ್ಲಿ ಮಿಂಚಿರುವ ಸಂಜಯ್ ದತ್ ನೋಡಲು ಕನ್ನಡ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

  ದುನಿಯಾ ಸಿನಿಮಾದ ಕಥೆಯಂತೆ ನಿಜಜೀವನದಲ್ಲಿಯೂ ಆಯ್ತು

  ಅಜಯ್ ದೇವಗನ್ ಅವರ ಭುಜ್: ದಿ ಪ್ರೈಡ್ ಆಫ್ ಇಂಡಿಯಾ, ಶಂಶೇರಾ ಸಿನಿಮಾಗಳು ಸಹ ಬಿಡುಗಡೆಗೆ ಸಿದ್ಧವಾಗಿವೆ. ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾದಲ್ಲೂ ಸಂಜಯ್ ದತ್ ನಟಿಸುತ್ತಿದ್ದಾರೆ.

  English summary
  Actor Sanjay Dutt writes sweet birthday note for his wife Manyata Dutt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X