For Quick Alerts
  ALLOW NOTIFICATIONS  
  For Daily Alerts

  ಕ್ಯಾನ್ಸರ್ ಪೀಡಿತ ಸಂಜಯ್ ದತ್ ತಂಗಿಗೆ ಬರೆದರು ಭಾವುಕ ಸಾಲು

  |

  ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿರುವ ಸಂಜಯ್ ದತ್, ಇದೀಗ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುತ್ತಿದ್ದು, ಐದು ವರ್ಷದ ವೀಸಾ ಅನ್ನು ಪಡೆದುಕೊಂಡಿದ್ದಾರೆ.

  ಶ್ವಾಸಕೋಶದ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದು, ಗಂಭೀರ ಸ್ವರೂಪಕ್ಕೆ ಈಗಾಗಲೇ ತಿರುಗಿದೆ ಎನ್ನಲಾಗುತ್ತಿದೆ. ಸಂಜಯ್ ದತ್ ಕ್ಯಾನ್ಸರ್ ಗೆದ್ದು ಬರುವ ವಿಶ್ವಾಸವ್ಯಕ್ತಪಡಿಸಿದ್ದಾರೆ.

  ಪ್ರತೀ ವರ್ಷದಂತೆ ಈ ಬಾರಿ ಅದ್ದೂರಿ ಗಣೇಶೋತ್ಸವ ಇಲ್ಲ: ಸಂಜಯ್ ದತ್ಪ್ರತೀ ವರ್ಷದಂತೆ ಈ ಬಾರಿ ಅದ್ದೂರಿ ಗಣೇಶೋತ್ಸವ ಇಲ್ಲ: ಸಂಜಯ್ ದತ್

  ತೀವ್ರ ಬಾಧೆಯಲ್ಲಿರುವ ಸಂಜಯ್ ದತ್ ತಮ್ಮ ಸಹೋದರಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದು, ಆಕೆಗಾಗಿ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಸಂಜಯ್ ದತ್ ಹೀಗೆ ಭಾವುಕವಾಗಿ ಪೋಸ್ಟ್ ಮಾಡುವುದು ಬಹು ಅಪರೂಪ ಹಾಗಾಗಿಯೇ ಇದೀಗ ವೈರಲ್ ಆಗಿದೆ.

  ಸಂಜಯ್ ದತ್ ಸಹೋದರಿ ಹುಟ್ಟುಹಬ್ಬ

  ಸಂಜಯ್ ದತ್ ಸಹೋದರಿ ಹುಟ್ಟುಹಬ್ಬ

  ಸಂಜಯ್ ದತ್ ಸಹೋದರಿ ಪ್ರಿಯಾ ದತ್ ಹುಟ್ಟುಹಬ್ಬ ಇಂದು (ಆಗಸ್ಟ್ 28). ಸಾಮಾಜಿಕ ಜಾಲತಾಣದಲ್ಲಿ ಸಹೋದರಿಯೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿರುವ ಸಂಜಯ್ ದತ್ ಕೆಲವು ಭಾವುಕ ಸಾಲುಗಳನ್ನು ಬರೆದಿದ್ದಾರೆ.

  'ಎಲ್ಲಾ ಸಮಯದಲ್ಲಿಯೂ ನೆರವಾಗಿದ್ದಕ್ಕೆ ಧನ್ಯವಾದ'

  'ಎಲ್ಲಾ ಸಮಯದಲ್ಲಿಯೂ ನೆರವಾಗಿದ್ದಕ್ಕೆ ಧನ್ಯವಾದ'

  'ಎಲ್ಲಾ ಸಮಯದಲ್ಲೂ ನನ್ನ ಜೀವನದಲ್ಲಿ ಇದ್ದಿದ್ದಕ್ಕೆ ನಿನಗೆ ಧನ್ಯವಾದಗಳು. ಜಗತ್ತಿನ ಸಂತೋಶವೆಲ್ಲಾ ನಿನಗೆ ಸಿಗಲಿ. ಹುಟ್ಟುಹಬ್ಬದ ಶುಭಾಶಯಗಳು ಪ್ರಿಯಾ ದತ್' ಎಂದು ಸಂಜಯ್ ದತ್ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.

  ಸಂಜಯ್ ದತ್ ಮಾಡಿದ್ದ ಸಹಾಯ ನೆನಪಿಸಿಕೊಂಡ ಇರ್ಫಾನ್ ಖಾನ್ ಪುತ್ರಸಂಜಯ್ ದತ್ ಮಾಡಿದ್ದ ಸಹಾಯ ನೆನಪಿಸಿಕೊಂಡ ಇರ್ಫಾನ್ ಖಾನ್ ಪುತ್ರ

  ವೀಸಾ ಪಡೆದುಕೊಂಡ ಸಂಜಯ್ ದತ್

  ವೀಸಾ ಪಡೆದುಕೊಂಡ ಸಂಜಯ್ ದತ್

  ಕ್ಯಾನ್ಸರ್‌ ಚಿಕಿತ್ಸೆಗೆ ಸಂಜಯ್ ದತ್ ಅಮೆರಿಕಕ್ಕೆ ತೆರಳಬೇಕಿತ್ತು. ಆದರೆ ಅವರ ಮೇಲೆ ಈ ಹಿಂದೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣ ದಾಖಲಾಗಿ ಶಿಕ್ಷೆ ಆಗಿದ್ದ ಕಾರಣ ಅವರಿಗೆ ವೀಸಾ ದೊರಕದು ಎನ್ನಲಾಗಿತ್ತು. ಆದರೆ ಇದೀಗ ಸಂಜಯ್ ದತ್‌ಗೆ ಐದು ವರ್ಷಗಳ ಅವಧಿಯ ವೀಸಾ ದೊರೆತಿದೆ.

  ಕೆಜಿಎಫ್ 2 ಕತೆ ಏನು?

  ಕೆಜಿಎಫ್ 2 ಕತೆ ಏನು?

  ಸಂಜಯ್ ದತ್‌ ಕೆಲವೇ ದಿನಗಳಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ. ಕನ್ನಡದ ಕೆಜಿಎಫ್ 2 ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಸಂಜಯ್ ದತ್ ನಟಿಸಬೇಕಿದೆ. ಆದರೆ ಈ ಎಲ್ಲಾ ಸಿನಿಮಾಗಳ ಕತೆ ಏನಾಗಲಿದೆ. ಸಿನಿಮಾಗಳನ್ನು ಸಂಜಯ್ ಮುಗಿಸಿಕೊಡುತ್ತಾರೆಯೇ ತಿಳಿದುಬಂದಿಲ್ಲ.

  ಕ್ಯಾನ್ಸರ್ ಪೀಡಿತ ಸಂಜಯ್ ದತ್‌ಗೆ ಆತ್ಯಾಪ್ತ ಗೆಳೆಯನ ಭಾವುಕ ಪತ್ರಕ್ಯಾನ್ಸರ್ ಪೀಡಿತ ಸಂಜಯ್ ದತ್‌ಗೆ ಆತ್ಯಾಪ್ತ ಗೆಳೆಯನ ಭಾವುಕ ಪತ್ರ

  English summary
  Actor Sanjay Dutt suffering from cancer. He wrote some emotional lines for his sister on her birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X