ನಿರಾಸೆ ಮೂಡಿಸಿದ ಸಲ್ಮಾನ್ ಖಾನ್-ಸಂಜಯ್ ಲೀಲಾ ಬನ್ಸಾಲಿ

ಸಲ್ಮಾನ್ ಖಾನ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಸಿನಿಮಾ ಮಾಡಲಿ ಎಂದು ಅಭಿಮಾನಿಗಳು ಒತ್ತಾಯ ಮಾಡ್ತಿದ್ರು. ಈ ಬೇಡಿಕೆಯನ್ನ ಪರಿಗಣಿಸಿದ ಈ ಜೋಡಿ 'ಇನ್ಶಲ್ಲಾ' ಎಂಬ ಪ್ರಾಜೆಕ್ಟ್ ಘೋಷಣೆ ಮಾಡಿದ್ರು.

ಸುಮಾರು 20 ವರ್ಷದ ಬಳಿಕ ಸಲ್ಮಾನ್ ಖಾನ್ ಮತ್ತು ಬನ್ಸಾಲಿ ಮತ್ತೆ ಒಂದಾದ್ದನ್ನ ಕಂಡು ಬಾಲಿವುಡ್ ಸಂಭ್ರಮಿಸಿತ್ತು. ಎಲ್ಲ ಅಂದುಕೊಂಡಂತೆ ಆದರೆ 2020ರ ಈದ್ ಹಬ್ಬಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ಈ ಮಧ್ಯೆ ಸಲ್ಮಾನ್ ಖಾನ್ ನಿರಾಸೆ ಮೂಡಿಸಿದ್ದಾರೆ.

''ಸಂಜಯ್ ಲೀಲಾ ಬನ್ಸಾಲಿ ಜೊತೆಗಿನ ಚಿತ್ರ ಮತ್ತಷ್ಟು ತಡವಾಗಬಹುದು. ಸದ್ಯದ ಪರಿಸ್ಥಿತಿಯಲ್ಲಿ 2020ರ ಈದ್ ಹಬ್ಬಕ್ಕೆ ಈ ಚಿತ್ರವನ್ನ ನೀರಿಕ್ಷೆ ಮಾಡುವುದು ಬೇಡ'' ಎಂದು ಸಲ್ಮಾನ್ ಖಾನ್ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ.

Sanjay Leela Bhansali And Salman Khan Project Delayed

ಆದ್ರೆ, ಯಾಕೆ ದಿಢೀರ್ ಅಂತ ಈ ನಿರ್ಧಾರ ಮಾಡಿದ್ರು ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇನ್ನುಳಿದಂತೆ ಸಲ್ಮಾನ್ ಖಾನ್ ಅವರ ಉಳಿದ ಪ್ರಾಜೆಕ್ಟ್ ಗಳು ಮುಂದುವರಿಯಲಿದೆ.

ಅಂದ್ಹಾಗೆ, ಬನ್ಸಾಲಿ ಮತ್ತು ಸಲ್ಮಾನ್ ಜೋಡಿಯ ಈ ಚಿತ್ರದಲ್ಲಿ ಆಲಿಯಾ ಭಟ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಜೊತೆಯಲ್ಲಿ ಆಲಿಯಾಗೆ ಮೊದಲ ಸಿನಿಮಾ ಇದು. ಹೀಗಾಗಿ, ಈ ಜೋಡಿಯ ಮೇಲೆ ಹೆಚ್ಚು ನಿರೀಕ್ಷೆ ಇದೆ.

ಉಳಿದಂತೆ ಸಲ್ಮಾನ್ ಅಭಿನಯದ 'ಭಾರತ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಬಿಸಿನೆಸ್ ಕಂಡಿದೆ. ಈಗ 'ದಬಾಂಗ್-3 ಚಿತ್ರದ ಚಿತ್ರೀಕರಣ ಮುಗಿದಿದೆ. ಡಿಸೆಂಬರ್ 20ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ. ಮತ್ತೊಂದೆಡೆ ಆಲಿಯಾ ಕೂಡ ಸಾಲು ಸಾಲು ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಿದ್ದು, ಬ್ರಹ್ಮಾಸ್ತ್ರ, ಸಡಕ್, ಆರ್.ಆರ್.ಆರ್ ಚಿತ್ರದಲ್ಲಿ ನಾಯಕಿಯಾಗಿದ್ದಾರೆ.

More from Filmibeat

English summary
Bollywood actor salman khan tweeted ''The film with Sanjay Leela Bhansali is pushed but I will still see you all on Eid, 2020. Insha-Allah''.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X