For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಪಡುಕೋಣೆ ಜೊತೆ ಸಿನಿಮಾ ಮಾಡಲು ಸಂಜಯ್ ಲೀಲಾ ಬನ್ಸಾಲಿ ನಿರಾಕರಿಸಲು ಕಾರಣವೇನು?

  |

  ಬಾಲಿವುಡ್ ಸೂಪರ್ ಹಿಟ್ ಕಾಂಬಿನೇಷನ್‌ಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಾಂಬಿನೇಷನ್ ಕೂಡ ಒಂದು. ಈ ಜೋಡಿ ರಾಮ್ ಲೀಲಾ, ಬಾಜಿರಾವ್ ಮಸ್ತಾನಿ, ಪದ್ಮಾವತ್ ಮೂರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

  ಅದ್ಭುತ ಸಿನಿಮಾಗಳನ್ನು ನೀಡಿರುವ ಈ ಜೋಡಿ ನಡುವೆ ವೈಮನಸ್ಸು ಮೂಡಿಸಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಇತ್ತೀಚಿಗೆ ಇಬ್ಬರ ನಡುವಿನ ಮುನಿಸು ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಆದರೆ ಈ ವಿಚಾರವನ್ನು ಸಂಜಯ್ ಲೀಲಾ ಬನ್ಸಾಲಿ ಮತ್ತು ದೀಪಿಕಾ ಪಡುಕೋಣೆ ಇಬ್ಬರು ತಳ್ಳಿಹಾಕಿದ್ದರು. ಆದರೀಗ ಈ ಸೂಪರ್ ಹಿಟ್ ಜೋಡಿ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಮುಂದೆ ಓದಿ...

  ಮಹಾರಾಷ್ಟ್ರದಲ್ಲಿ ಕರ್ಫ್ಯೂ: ಮುಂಬೈ ಬಿಟ್ಟು ಬೆಂಗಳೂರಿಗೆ ಬಂದ ದೀಪಿಕಾ ಪಡುಕೋಣೆ ದಂಪತಿಮಹಾರಾಷ್ಟ್ರದಲ್ಲಿ ಕರ್ಫ್ಯೂ: ಮುಂಬೈ ಬಿಟ್ಟು ಬೆಂಗಳೂರಿಗೆ ಬಂದ ದೀಪಿಕಾ ಪಡುಕೋಣೆ ದಂಪತಿ

  ದ್ರೌಪದಿ ಸಿನಿಮಾ ನಿರಾಕಸಿದ ಸಂಜಯ್

  ದ್ರೌಪದಿ ಸಿನಿಮಾ ನಿರಾಕಸಿದ ಸಂಜಯ್

  ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿರುವ ದ್ರೌಪದಿ ಸಿನಿಮಾಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದರೆ ಉತ್ತಮ ಎಂದು ಸಿನಿಮಾತಂಡ ಭಾವಿಸಿತ್ತು. ಅಲ್ಲದೆ ದೀಪಿಕಾಗೂ ಬನ್ಸಾಲಿ ನಿರ್ದೇಶನ ಮಾಡಬೇಕು ಎನ್ನುವ ಆಸೆಯಿದೆಯಂತೆ. ಆದರೆ ದೀಪಿಕಾ ಅವರ ದ್ರೌಪದಿ ಸಿನಿಮಾ ಮಾಡಲು ಸಂಜಯ್ ಲೀಲಾ ಬನ್ಸಾಲಿ ನಿರಾಕರಿಸಿದ್ದಾರೆ. ಈ ವಿಚಾರ ಈಗ ದೀಪಿಕಾಗೆ ಶಾಕ್ ನೀಡಿದೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

  ಗಂಗೂಬಾಯಿ ಸಿನಿಮಾದಲ್ಲಿ ಬನ್ಸಾಲಿ ಬ್ಯುಸಿ

  ಗಂಗೂಬಾಯಿ ಸಿನಿಮಾದಲ್ಲಿ ಬನ್ಸಾಲಿ ಬ್ಯುಸಿ

  ಸಂಜಯ್ ಲೀಲಾ ಬನ್ಸಾಲಿ ಸದ್ಯ ಅಲಿಯಾ ಭಟ್ ನಾಯಕಿಯಾಗಿ ನಟಿಸುತ್ತಿರುವ ಗಂಗೂಬಾಯ್ ಕಾತಿಯಾವಾಡಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಬೈಜು ಬಾವ್ರಾ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಎರಡು ಸಿನಿಮಾಗಳಲ್ಲಿ ಬ್ಯುಸಿರುವುದಾಗಿ ಕಾರಣ ನೀಡಿ ಸಂಜಯ್ ಲೀಲಾ ಬನ್ಸಾಲಿ, ದೀಪಿಕಾ ಸಿನಿಮಾವನ್ನು ನಿರ್ದೇಶನ ಮಾಡಲು ನಿರಾಕರಿಸಿದ್ದಾರೆ.

  ಇಬ್ಬರ ಮುನಿಸಿಗೆ ಕಾರಣವೇಣು?

  ಇಬ್ಬರ ಮುನಿಸಿಗೆ ಕಾರಣವೇಣು?

  ಸಂಜಯ್ ಲೀಲಾ ಬನ್ಸಾಲಿ ಮತ್ತು ದೀಪಿಕಾ ನಡುವೆ ಉತ್ತಮ ಬಾಂಧವ್ಯವಿತ್ತು. ದೀಪಿಕಾಗೆ, ಬನ್ಸಾಲಿ ಗುರುವಿನ ಹಾಗೆ ಇದ್ದರು. ಆದರೀಗ ಇಬ್ಬರ ನಡುವೆ ವೈಮಸ್ಸು ಮೂಡಿದೆ. ಇವರ ಮುನಿಸಿಗೆ ಕಾರಣವಾಗಿದ್ದು, ಗಂಗೂಬಾಯಿ ಸಿನಿಮಾ ಎನ್ನಲಾಗುತ್ತಿದೆ. ಚಿತ್ರದಲ್ಲಿ ದೀಪಿಕಾಗೆ ವಿಶೇಷ ಹಾಡು ನೀಡಿದ್ದರಂತೆ. ಆದರೆ ದೀಪಿಕಾ ಈ ಹಾಡಿನಲ್ಲಿ ಕಾಣಿಸಿಕೊಳ್ಳಲು ನಿರಾಕರಿಸಿದ್ದಾರೆ. ಇದು ಬನ್ಸಾಲಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಚಾರ ಈಗ ಇಬ್ಬರ ನಡುವಿನ ಶೀತಲ ಸಮರಕ್ಕೆ ಕಾರಣವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  'ಇಂದಿರಾನಗರದ ಗೂಂಡಾ ನಾನೇ' ಎಂದು ದ್ರಾವಿಡ್‌ಗೆ ಸೆಡ್ಡು ಹೊಡೆದ ಖ್ಯಾತ ನಟಿ'ಇಂದಿರಾನಗರದ ಗೂಂಡಾ ನಾನೇ' ಎಂದು ದ್ರಾವಿಡ್‌ಗೆ ಸೆಡ್ಡು ಹೊಡೆದ ಖ್ಯಾತ ನಟಿ

  Aunty Preethse ಸಿನಿಮಾ ಮಾಡೋಕೆ ಮುನಿರತ್ನಗೆ ಖುಷ್ಬು ಹಾಕಿದ ಷರತ್ತುಗಳೇನು? | Filmibeat Kannada
  ಬನ್ಸಾಲಿ ಕನಸಿನ ಸಿನಿಮಾದಲ್ಲಿ ಇರ್ತಾರಾ ದೀಪಿಕಾ?

  ಬನ್ಸಾಲಿ ಕನಸಿನ ಸಿನಿಮಾದಲ್ಲಿ ಇರ್ತಾರಾ ದೀಪಿಕಾ?

  ಆದರೆ ಇನ್ನು ಕೆಲವರ ಪ್ರಕಾರ ಸಂಜಯ್ ಲೀಲಾ ಬನ್ಸಾಲಿ ಅವರ ಕನಸಿನ ಬಹುನಿರೀಕ್ಷೆಯ ಬೈಜು ಬಾವ್ರಾ ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎಂದು ಕಾದು ನೋಡಬೇಕು. ಆದರೆ ಚಿತ್ರಾಭಿಮಾನಿಗಳು ದೀಪಿಕಾ ಮತ್ತು ಸಂಜಯ್ ನೀಲಾ ಬನ್ಸಾಲಿ ಕಾಂಬಿನೇಷನ್‌ನ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

  English summary
  Director Sanjay Leela Bhansali refuses to direct Deepika Padukone's Draupadi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X