ಮುಂಬೈ 'ಪಿಒಕೆ' ಎಂದು ಕಂಗನಾ ಹೇಳಿದರೂ ಬಾಲಿವುಡ್ ಯಾಕೆ ಮೌನ ವಹಿಸಿದೆ?: ಸಂಜಯ್ ರಾವತ್

ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಶಿವಸೇನೆ ನಡುವಿನ ಕಿತ್ತಾಟ ಇನ್ನೂ ಮುಂದುವರೆದಿದೆ. ಮುಂಬೈ ನಗರ 'ಪಾಕ್ ಆಕ್ರಮಿತ ಕಾಶ್ಮೀರ'ದಂತೆ ಕಾಣುತ್ತಿದೆ ಎಂದು ಹೇಳಿದ್ದ ಕಂಗನಾ ರಣಾವತ್ ವಿರುದ್ಧ ಶಿವಸೇನೆ ಕೆಂಡಕಾರುತ್ತಿದೆ. ಇದೀಗ ಶಿವಸೇನೆ ಮುಖ್ಯಸ್ಥ ಸಂಜಯ್ ರಾವತ್ ಇಡೀ ಬಾಲಿವುಡ್ ಮೌನವನ್ನು ಪ್ರಶ್ನಿಸಿದ್ದಾರೆ.

ಕಂಗನಾ ಹೇಳಿಕೆ ಬಗ್ಗೆ ಮಾತನಾಡುತ್ತ, ಅರ್ಧದಷ್ಟು ಬಾಲಿವುಡ್ ಮುಂಬೈ ರಕ್ಷಣೆಗೆ ಬರಬೇಕಿತ್ತು. ಆದರೆ ಮೌನ ವಹಿಸಿದ್ದಾರೆ. ಬಾಲಿವುಡ್ ಮೌನವನ್ನು ದ್ರೌಪದಿಯ ವಸ್ತ್ರಾಭರಣ ಸಮಯದಲ್ಲಿ ಪಾಂಡವರು ವಹಿಸಿದ ಮೌನಕ್ಕೆ ಹೋಲಿಸಿದ್ದಾರೆ. ಅಲ್ಲದೆ ಮುಂಬೈ ಹಣ ಸಂಪಾದನೆಗೆ ಮಾತ್ರನಾ ಎಂದು ಪ್ರಶ್ನಿಸಿದ್ದಾರೆ. ಇದು ಮುಂಬೈಗೆ ಮಾನಹಾನಿ ಮಾಡುವ ಪಿತೂರಿ ಎಂದು ಕಿಡಿಕಾರಿದ್ದಾರೆ.

ವಿಶೇಷವಾಗಿ ಅಕ್ಷಯ್ ಕುಮಾರ್ ಹೆಸರನ್ನು ಉಲ್ಲೇಖಿಸಿರುವ ಸಂಜಯ್ ರಾವತ್, ಈ ಬಗ್ಗೆ ನಟ ಅಕ್ಷಯ್ ಕುಮಾರ್ ಮಾಡನಾಡಲೇ ಬೇಕಿತ್ತು ಎಂದು ಹೇಳಿದ್ದಾರೆ. ಸಿಎಂ ಉದ್ಧವ್ ಠಾಕ್ರೆಯನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡ ಕಂಗನಾರನ್ನು ಅನೇಕರು ಬೆಂಬಲಿಸಿದರು. ಆದರೆ ಮುಂಬೈನ ಸ್ಥಳಿಯರು ಮೌನವಾಗಿರುವುದು ಅವಮಾನ ಎಂದು ಹೇಳಿದ್ದಾರೆ.

Sanjay Raut Questions To Silence Of Bollywood Over Kangana Ranaut Comment

ಕಂಗನಾ ರಣಾವತ್ ಮತ್ತು ಶಿವಸೇನೆ ನಡುವಿನ ಕಿತ್ತಾಟದಲ್ಲಿ ಕಂಗನಾ ಬಂಗಲೆಯನ್ನು ಒಡೆದು ಹಾಕಲಾಗಿದೆ. ಕಂಗನಾ ಮೇಲಿನ ಸೇಡಿಗೆ ಹೀಗೆ ಮಾಡಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆ ನಿರ್ಧಾರವನ್ನು ಖಂಡಿಸುತ್ತಿದ್ದಾರೆ. ಕಂಗನಾ ಹಾನಿ ಮಾಡಿದ ಕಚೇರಿಯಲ್ಲಿಯೇ ಕೆಲಸ ಮಾಡುತ್ತೀನಿ ಎಂದು ಸವಾಲ್ ಹಾಕಿದ್ದಾರೆ.

ಸದ್ಯ ಮುಂಬೈನಲ್ಲಿರುವ ಕಂಗನಾ ಇಂದು ರಾಜ್ಯಪಾಲರನ್ನು ಭೇಟಿಯಾಗಿ 14ರಂದು ಮತ್ತೆ ಹಿಮಾಚಲ ಪ್ರದೇಶಕ್ಕೆ ವಾಪಸ್ ಆಗುವ ಸಾಧ್ಯತೆ ಇದೆ. ಇಂದು ರಾಜ್ಯಪಾಲರ ಬಳಿ ಕಂಗನಾ, ಶಿವಸೇನೆಯಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸುವ ಸಾದ್ಯತೆ ಇದೆ.

Recommended Video

ಪತ್ನಿ Revathi ಕಾಲೆಳೆದ Nikhil Kumaraswamy | Oneindia Kannada

More from Filmibeat

English summary
Sanjay Raut questions to silence of bollywood over Kangana Ranaut comment. He says is Mumbai important only for money.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X