ನೈಟ್ ಕ್ಲಬ್‌ನಲ್ಲಿ ಯುವತಿ ನನ್ನ ಖಾಸಗಿ ಅಂಗಕ್ಕೆ ಕೈ ಹಾಕಿದ್ದಳು ಎಂದ ಕನ್ನಡ ಚಿತ್ರದಲ್ಲಿ ನಟಿಸಿದ್ದ ನಟಿ...!
ಸ್ಟಾರ್ ಗಳು ತಮ್ಮ ಹಳೆಯ ನೆನಪುಗಳನ್ನು ಒಂದಿಲ್ಲೊಂದು ಸಂದರ್ಭಗಳಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಹೀರಾಮಂಡಿ ವೆಬ್ ಸರಣಿಯ ಮೂಲಕ ಅನೇಕರ ಮನಸನ್ನ ಗೆದ್ದ ಸಂಜೀದಾ ಶೇಖ್ ತಮ್ಮ ಬದುಕಿನ ಕಹಿ ಅನುಭವವೊಂದನ್ನ ಹಂಚಿಕೊಂಡಿದ್ದಾರೆ. ಕೇವಲ ಹುಡುಗರು ಮಾತ್ರ ಅಲ್ಲ ಅಸಭ್ಯವಾಗಿ ವರ್ತಿಸುವುದರಲ್ಲಿ ಹುಡುಗಿಯರೂ ಕಡಿಮೆ ಇಲ್ಲ ಎಂದಿದ್ದಾರೆ.
ಹೌದು, ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ನೈಟ್ ಕ್ಲಬ್ ಅನುಭವವನ್ನ ಸಂಜೀದಾ ಶೇಖ್ ಹಂಚಿಕೊಂಡಿದ್ದಾರೆ. ನಾನು ಒಂದು ನೈಟ್ ಕ್ಲಬ್ನಲ್ಲಿದ್ದೆ. ಹಲವರು ಈ ಪಾರ್ಟಿಯಲ್ಲಿ ಇದ್ದರು. ಎಲ್ಲರಂತೆ ನಾನು ಕೂಡ ಪಾರ್ಟಿಯನ್ನ ಎಂಜಾಯ್ ಮಾಡುತ್ತಿದ್ದೆ. ಆದರೆ.. ಇದೇ ಸಮಯದಲ್ಲಿ ನನಗೆ ಏನಾಯಿತು ಎಂಬುದೇ ತಿಳಿಯಲಿಲ್ಲ. ಯಾಕೆಂದರೆ ನನ್ನ ಬಳಿ ಬಂದ ಯುವತಿಯೊಬ್ಬಳು ನನ್ನ ಸ್ತನಗಳನ್ನು ಜೋರಾಗಿ ಮುಟ್ಟಿ ಮುಂದಕ್ಕೆ ಸಾಗಿದಳು ಎಂದಿದ್ದಾರೆ ಸಂಜೀದಾ ಶೇಖ್.

ಆಕೆ ಯುವತಿಯಾಗಿದ್ದ ಕಾರಣ ಅವತ್ತು ನಾನು ಸುಮ್ಮನಾದೆ. ಆದರೆ ಆಕೆ ಈ ತರಹದ ಕೆಲಸ ಮಾಡಬಹುದು ಅನ್ನುವ ಕಲ್ಪನೆ ನನಗೆ ಇರಲಿಲ್ಲ ಎಂದಿರುವ ಸಂಜೀದಾ ಶೇಖ್, ಗಂಡಸರು ಕೆಟ್ಟದಾಗಿ ವರ್ತಿಸುತ್ತಾರೆ ಎಂಬುದನ್ನು ನಾವು ಕೇಳಿದ್ದೇವೆ. ಆದರೆ ಈ ವಿಚಾರದಲ್ಲಿ ಹುಡುಗಿಯರೂ ಕೂಡ ಕಡಿಮೆ ಏನಿಲ್ಲ ಎಂದಿದ್ದಾರೆ.
ಇನ್ನೂ ತಪ್ಪು ಯಾರು ಮಾಡಿದರೂ ಕೂಡ ಅದು ತಪ್ಪೇ ಎಂದಿರುವ ಸಂಜೀದಾ, ನೀವು ತಪ್ಪು ಹಾದಿಯಲ್ಲಿ ಹೋಗಿದ್ದರೆ ಅದರಲ್ಲಿ ಗಂಡು-ಹೆಣ್ಣು ಎಂಬ ಭೇದ ಇಲ್ಲ ಎಂದಿದ್ದಾರೆ. ಖಾಸಗಿ ಭಾಗ ಟಚ್ ಮಾಡುವುದು ತಪ್ಪು. ಅದು ಯಾರೇ ಆಗಲಿ. ನಮ್ಮ ಖಾಸಗೀತನಕ್ಕೂ ಧಕ್ಕೆಯಾಗಬಾರದು. ನಿಮ್ಮ ಜೊತೆ ಮಹಿಳೆ ತಪ್ಪಾಗಿ ನಡೆದುಕೊಂಡಿದ್ದರೆ ಪ್ರಶ್ನೆಯನ್ನ ಮಾಡಿ ಎಂದು ಕೂಡ ಸಂಜೀದಾ ಶೇಖ್ ಹೇಳಿದ್ದಾರೆ.

ಅಂದ್ಹಾಗೇ ಇವತ್ತು ಹೀರಾಮಂಡಿ ವೆಬ್ ಸರಣಿ ಮೂಲಕ ದೇಶವ್ಯಾಪಿ ಮಿಂಚ್ತಿರುವ ಸಂಜೀದಾ, ಹಿಂದೊಮ್ಮೆ..ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ಕನ್ನಡ ಚಿತ್ರದಲ್ಲಿ ನಟಿಸಿದ್ದರು ಅನ್ನುವುದು ಬಹುತೇಕರಿಗೆ ಗೊತ್ತಿರದ ವಿಚಾರ. 2006ರಲ್ಲಿ ರವಿ ಗರಣಿ ನಿರ್ದೇಶಿಸಿದ್ದ, ಶಿವಧ್ವಜ್ ನಾಯಕರಾಗಿ ಅಭಿನಯಿಸಿದ್ದ ಶುಭಂ ಚಿತ್ರದಲ್ಲಿ ಸಂಜೀದಾ ನಾಯಕಿಯ ಪಾತ್ರವನ್ನ ನಿರ್ವಹಿಸಿದ್ದರು.
ಆದರೆ ಅಂದುಕೊಂಡ ಫಲಿತಾಂಶ ಸಂಜೀದಾಗೆ ಸಿಗಲಿಲ್ಲ. ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ ಬಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಕೂಡ ಕಾಣಿಸಿಕೊಂಡರು ಸಂಜೀದಾ ಶೇಖ್ ಅದೃಷ್ಟ ಖುಲಾಯಿಸರಲಿಲ್ಲ. ಹೀಗಾಗಿ ಕಿರುತೆರೆಯತ್ತ ಮುಖ ಮಾಡಿದ್ದ ಸಂಜೀದಾ ಶೇಖ್ ಇಲ್ಲಿಯವರೆಗೆ ಹತ್ತಾರು ಧಾರಾವಾಹಿಯಲ್ಲಿ ಆಕ್ಟ್ ಮಾಡಿದ್ದಾರೆ. ಆದರೆ ಈ ಧಾರಾವಾಹಿಗಳಿಂದ ಜನಪ್ರಿಯತೆಯನ್ನ ಹೀರಾ ಮಂಡಿ ವೆಬ್ ಸರಣಿ ಸಂಜೀದಾಗೆ ಸದ್ಯಕ್ಕೆ ತಂದು ಕೊಟ್ಟಿದೆ.

ಒಟ್ನಲ್ಲಿ ಹೆಚ್ಚು ಕಡಿಮೆ ಎರಡು ದಶಕದಿಂದ ಚಿತ್ರರಂಗದಲ್ಲಿ ಒಂದು ದೊಡ್ಡ ಸಕ್ಸಸ್‌ಗಾಗಿ ಸರ್ಕಸ್ ಮಾಡ್ತಾನೇ ಬಂದ ಸಂಜೀದಾಗೆ ಕೊನೆಗೂ ಬೇಕಿದ್ದ ಗೆಲುವು ಹೀರಾಮಂಡಿ ಮೂಲಕ ಸಿಕ್ಕಿದೆ. ಅವಕಾಶದ ಹೆಬ್ಬಾಗಿಲು ಕೂಡ ತೆರೆದಿದೆ. ಮುಂದೆ ಸಿಗಲಿರುವ ಸುವರ್ಣ ಅವಕಾಶಗಳನ್ನ ಸಂಜೀದಾ ಹೇಗೆ ಬಳಸಿಕೊಳ್ಳುತ್ತಾರೆ ಅನ್ನುವುದನ್ನ ಈಗ ಕಾದು ನೋಡಬೇಕಿದೆ.


Click it and Unblock the Notifications











