'ಸಂಜು' ನಾಗಾಲೋಟವನ್ನ ಹಿಡಿದು ನಿಲ್ಲಿಸುವ ತಾಕತ್ತು ಯಾರಿಗೂ ಇಲ್ಲ ಬಿಡಿ.!

By Harshitha

''ಸಂಜು' ಒಂದು ಸಿನಿಮಾನಾ.? ಸಂಜಯ್ ದತ್ ಗೆ ಒಳ್ಳೆಯ ಇಮೇಜ್ ಕೊಡಲು ಈ ಸಿನಿಮಾ ಮಾಡಲಾಗಿದೆ ಅಷ್ಟೇ.! ಅಷ್ಟಕ್ಕೂ, ಬಯೋಪಿಕ್ ಮಾಡುವ ವ್ಯಕ್ತಿತ್ವ ಸಂಜಯ್ ದತ್ ರದ್ದು ಅಲ್ಲವೇ ಅಲ್ಲ'' ಅಂತ ಎಷ್ಟೋ ಜನ 'ಸಂಜು' ಚಿತ್ರದ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಮಾಡಿದರು. ಆದರೇನು ಬಂತು ಪ್ರಯೋಜನ.? ದಿನೇ ದಿನೇ 'ಸಂಜು' ಚಿತ್ರವನ್ನ ನೋಡುವವರ ಸಂಖ್ಯೆ ಮಾತ್ರ ಕಮ್ಮಿ ಆಗಿಲ್ಲ.

ವಾರದಿಂದ ವಾರಕ್ಕೆ 'ಸಂಜು' ಕಲೆಕ್ಷನ್ ಜಾಸ್ತಿ ಆಗುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ 'ಸಂಜು' ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡುತ್ತಿದೆ.

ಸಂಜಯ್ ದತ್ ಆಗಿ ರಣ್ಬೀರ್ ಕಪೂರ್ ಪಾತ್ರ ನಿರ್ವಹಿಸಿರುವ ರೀತಿ ಅನೇಕರಿಗೆ ಖುಷಿ ಕೊಟ್ಟಿದೆ. ಜೊತೆಗೆ ಸಿನಿಮಾದಲ್ಲಿರುವ ಅಪ್ಪ-ಮಗನ ಅನ್ಯೋನ್ಯ ಬಂಧ ಕೂಡ ಫ್ಯಾಮಿಲಿ ಆಡಿಯನ್ಸ್ ನ ಅಟ್ರ್ಯಾಕ್ಟ್ ಮಾಡುತ್ತಿದೆ. ಹೀಗಾಗಿ, 'ಸಂಜು' ನಾಗಾಲೋಟವನ್ನ ಹಿಡಿದು ನಿಲ್ಲಿಸುವ ತಾಕತ್ತು ಯಾರಿಗೂ ಇಲ್ಲ.! ಮುಂದೆ ಓದಿರಿ...

ಒಂದು ವಾರದಲ್ಲಿ ಇನ್ನೂರು ಕೋಟಿ ಕಲೆಕ್ಷನ್

ಒಂದು ವಾರದಲ್ಲಿ ಇನ್ನೂರು ಕೋಟಿ ಕಲೆಕ್ಷನ್

ನೀವು ನಂಬಿದ್ರೂ, ಬಿಟ್ಟರೂ ಇದೇ ಸತ್ಯ. ಒಂದು ವಾರದಲ್ಲಿ 'ಸಂಜು' ಸಿನಿಮಾ ಬರೋಬ್ಬರಿ 200 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ವಾರಾಂತ್ಯದಲ್ಲಿಯೇ 100 ಕೋಟಿ ಕಲೆಕ್ಟ್ ಮಾಡುವಲ್ಲಿ ಯಶಸ್ವಿ ಆದ 'ಸಂಜು' ಒಂದು ವಾರ ಮುಗಿಯುವ ಹೊತ್ತಿಗೆ ಒಟ್ಟಾರೆ 200 ಕೋಟಿ ಗಳಿಸಿದೆ.

ಇಲ್ಲಿಯವರೆಗಿನ ಕಲೆಕ್ಷನ್ ಎಷ್ಟು.?

ಇಲ್ಲಿಯವರೆಗಿನ ಕಲೆಕ್ಷನ್ ಎಷ್ಟು.?

ಸದ್ಯದವರೆಗೂ 'ಸಂಜು' ಚಿತ್ರ 271.08 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಹೀಗೇ ಹೋಗುತ್ತಿದ್ದರೆ, ಇನ್ನೆರಡು ಮೂರು ದಿನಗಳಲ್ಲಿ 'ಸಂಜು' 300 ಕೋಟಿ ಕ್ಲಬ್ ಸೇರುವುದು ಪಕ್ಕಾ.

ರಣ್ಬೀರ್ ಕಪೂರ್ ಗೆ ಅದೃಷ್ಟ ಖುಲಾಯಿಸಿತು.!

ರಣ್ಬೀರ್ ಕಪೂರ್ ಗೆ ಅದೃಷ್ಟ ಖುಲಾಯಿಸಿತು.!

ಸತತ ಸೋಲು ಕಂಡಿದ್ದ ರಣ್ಬೀರ್ ಕಪೂರ್ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟ ಸಿನಿಮಾ 'ಸಂಜು'. ಈ ಚಿತ್ರದಲ್ಲಿ ಸಂಜಯ್ ದತ್ ಪಾತ್ರಕ್ಕೆ ನ್ಯಾಯ ಒದಗಿಸಿರುವ ರಣ್ಬೀರ್ ಕಪೂರ್ ಗೆ ಅದೃಷ್ಟ ಖುಲಾಯಿಸಿದೆ. ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ಹ್ಯಾಟ್ರಿಕ್ ಹಿಟ್

ಹ್ಯಾಟ್ರಿಕ್ ಹಿಟ್

ರಾಜಕುಮಾರ್ ಹಿರಾನಿ ಹಾಗೂ ಸಂಜಯ್ ದತ್ ಕಾಂಬಿನೇಶನ್ ನ ಹ್ಯಾಟ್ರಿಕ್ ಹಿಟ್ ಸಿನಿಮಾ ಇದು. 'ಮುನ್ನಾಭಾಯಿ ಎಂ.ಬಿ.ಬಿ.ಎಸ್' ಹಾಗೂ 'ಲಗೇ ರಹೋ ಮುನ್ನಾಭಾಯಿ' ಚಿತ್ರಗಳಲ್ಲಿ ಸಂಜಯ್ ದತ್ ಹಾಗೂ ರಾಜಕುಮಾರ್ ಹಿರಾನಿ ಕಾಂಬಿನೇಶನ್ ಹಿಟ್ ಆಗಿತ್ತು. ಇದೀಗ ಸಂಜಯ್ ದತ್ ಜೀವನಾಧಾರಿತ ರಾಜಕುಮಾರ್ ಹಿರಾನಿ ನಿರ್ದೇಶನದ 'ಸಂಜು' ಕೂಡ ಬ್ಲಾಕ್ ಬಸ್ಟರ್ ಆಗಿದೆ.

More from Filmibeat

English summary
Ranbir Kapoor starrer 'Sanju' box office collection report: All set to cross 300 crore mark.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X