ಅಮೀರ್ ಚಿತ್ರವನ್ನ ಹಿಂದಿಕ್ಕಿದ 'ಸಂಜು' 7 ದಿನಲ್ಲಿ ಗಳಿಸಿದ್ದೆಷ್ಟು.?
ರಣ್ಬೀರ್ ಕಪೂರ್ ಅಭಿನಯದ 'ಸಂಜು' ಸಿನಿಮಾ ಅಮೀರ್ ಖಾನ್ ಅಭಿನಯಿಸಿದ್ದ '3 ಈಡಿಯೆಟ್ಸ್' ಚಿತ್ರದ ದಾಖಲೆಯನ್ನ ಉಡೀಸ್ ಮಾಡಿದೆ.
ಅಮೀರ್ ಖಾನ್ ಅಭಿನಯದಲ್ಲಿ ರಾಜ್ ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದ '3 ಈಡಿಯೆಟ್ಸ್' ಸಿನಿಮಾ ಮೊದಲ ಏಳು ದಿನದಲ್ಲಿ 202.4 ಕೋಟಿ ಗಳಿಸಿತ್ತು. ಇದೀಗ ಈ ದಾಖಲೆಯನ್ನ ಹಿಂದಿಕ್ಕಿ ಮುನ್ನುಗ್ಗುತ್ತಿರುವ 'ಸಂಜು' ಏಳು ದಿನದಲ್ಲಿ 202.5 ಕೋಟಿ ಬಾಚಿಕೊಂಡಿದೆ.

ಈ ಮೂಲಕ ರಾಜ್ ಕುಮಾರ್ ಹಿರಾನಿ ಚಿತ್ರಗಳು ಬಾಲಿವುಡ್ ನಲ್ಲಿ ಸಾರ್ವಕಾಲಿಕ ದಾಖಲೆಗಳನ್ನ ನಿರ್ಮಿಸುವಲ್ಲಿ ಸದಾ ಮುಂದಿರುತ್ತೆ. ಅದರಲ್ಲೂ ಈ ವರ್ಷದ ಅತಿ ದೊಡ್ಡ ಯಶಸ್ಸು ಕಂಡಿರುವ ಸಂಜು 200 ಕೋಟಿ ಕ್ಲಬ್ ಗೆ ಸೇರಿದ ಚಿತ್ರವಾಗಿದೆ.
ಬಾಲಿವುಡ್ ಖ್ಯಾತ ಚಿತ್ರ ವಿಮರ್ಶಕ ತರುಣ್ ಆದರ್ಶ್ ಅವರ ಬಹಿರಂಗಡಪಸಿರುವ ಪ್ರಕಾರ ಸಂಜು ಸಿನಿಮಾ ಮೊದಲ ಏಳು ದಿನಗಳಲ್ಲಿ ಎಷ್ಟು ಗಳಿಸಿದೆ ಎಂದು ಮುಂದೆ ನೀಡಲಾಗಿದೆ.

ಶುಕ್ರವಾರ - ಮೊದಲ ದಿನ 34.7 ಕೋಟಿ
ಶನಿವಾರ - ಎರಡನೇ ದಿನ 38.6 ಕೋಟಿ
ಭಾನುವಾರ - ಮೂರನೇ ದಿನ 46.7 ಕೋಟಿ
ಸೋಮವಾರ - ನಾಲ್ಕನೇ ದಿನ 25.3 ಕೋಟಿ
ಮಂಗಳವಾರ - ಐದನೇ ದಿನ 22.1 ಕೋಟಿ
ಬುಧವಾರ - ಆರನೇ ದಿನ 18.9 ಕೋಟಿ
ಗುರುವಾರ - ಏಳನೇ ದಿನ 16.1 ಕೋಟಿ
ಸಂಜಯ್ ದತ್ ಬಯೋಪಿಕ್ ಸಿನಿಮಾ ಇದಾಗಿದ್ದು, ರಣ್ಬೀರ್ ಕಪೂರ್, ಪರೇಶ್ ರಾವಲ್, ಮೋನಿಶಾ ಕೊಯಿರಾಲ, ಸೋನಂ ಕಪೂರ್, ಅನುಷ್ಕಾ ಶರ್ಮಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.


Click it and Unblock the Notifications











