ಕಲೆಕ್ಷನ್ ನಲ್ಲಿ ಹೊಸ ದಾಖಲೆ ಬರೆದ 'ಸಂಜು': ಎರಡು ದಿನಕ್ಕೆ ಗಳಿಸಿದ್ದೆಷ್ಟು.?

By Bharath Kumar

ರಣ್ಬೀರ್ ಕಪೂರ್ ಅಭಿನಯದ 'ಸಂಜು' ಸಿನಿಮಾ ಕೊನೆಗೂ ಶುಕ್ರವಾರ ತೆರೆಮೇಲೆ ಬಂದಿದೆ. ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ಬಿಟೌನ್ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.

ರಣ್ಬೀರ್ ಕಪೂರ್ ಅವರ ಅಭಿನಯಕ್ಕೆ ಮನಸೋತಿರುವ ಸಿನಿ ಪ್ರೇಕ್ಷಕರು ಸಂಜಯ್ ದತ್ ಅವರ ಜೀವನ ಕಥೆಯನ್ನ ನೋಡಿ ಯಾವುದು ಸರಿ, ಯಾವುದು ತಪ್ಪು ಎಂದು ಲೆಕ್ಕಾಚಾರ ಹಾಕ್ತಿದ್ದಾರೆ.

ಆದ್ರೆ, ಮತ್ತೊಂದೆಡೆ ಸಂಜು ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸಿದೆ. ಕಲೆಕ್ಷನ್ ನಲ್ಲಿ ಖಾನ್ ಚಿತ್ರಗಳನ್ನ ಹಿಂದಿಕ್ಕಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಹಾಗಿದ್ರೆ, ಸಂಜು ಸಿನಿಮಾ ಮೊದಲ ದಿನ ಗಳಿಸಿದ ಮೊತ್ತವೆಷ್ಟು.? ಮುಂದೆ ಓದಿ.....

'ಸಂಜು' ಫಸ್ಟ್ ಡೇ ಕಲೆಕ್ಷನ್ ಎಷ್ಟು.?

'ಸಂಜು' ಫಸ್ಟ್ ಡೇ ಕಲೆಕ್ಷನ್ ಎಷ್ಟು.?

ರಣ್ಬೀರ್ ಕಪೂರ್ ಅಭಿನಯದ 'ಸಂಜು' ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ನಿರ್ಮಾಣ ಮಾಡಿದೆ. ಫಸ್ಡ್ ಡೇ 34.7 ಕೋಟಿ ಗಳಿಸುವ ಮೂಲಕ ರಣ್ಬೀರ್ ಕಪೂರ್ ಸಿನಿಮಾ ಈ ವರ್ಷದ ಅತಿ ದೊಡ್ಡ ಹಿಟ್ ಸಿನಿಮಾ ಎನಿಸಿಕೊಂಡಿದೆ.

ರಣ್ಬೀರ್ ವೃತ್ತಿ ಜೀವನದ ಬೆಸ್ಟ್

ರಣ್ಬೀರ್ ವೃತ್ತಿ ಜೀವನದ ಬೆಸ್ಟ್

ಇದುವರೆಗೂ ರಣ್ಬೀರ್ ಅಭಿನಯದ ಚಿತ್ರಗಳಲ್ಲಿ 'ಸಂಜು' ಸಿನಿಮಾ ಮೊದಲ ಅತಿ ಹೆಚ್ಚು ಹಣ ಗಳಿಸಿದ ದಾಖಲೆ ಮಾಡಿದೆ. ಇದಕ್ಕು ಮುಂಚೆ 'Besharam' 21 ಕೋಟಿ, 'ಹೇ ಜವಾನಿ ಹೇ ದಿವಾನಿ' 19.4 ಕೋಟಿ ಹಾಗೂ 'ಹೇ ದಿಲ್ ಹೈ ಮುಷ್ಕಿಲ್' ಚಿತ್ರ 13 ಕೋಟಿ ಗಳಿಸಿ ಅತ್ಯುತ್ತಮ ಕೆಲಕ್ಷನ್ ಮಾಡಿದ ಚಿತ್ರಗಳಾಗಿದ್ದವು. ಇದೀಗ, 'ಸಂಜು' ಸಿನಿಮಾ ಈ ಎಲ್ಲ ದಾಖಲೆಗಳನ್ನ ಉಡೀಸ್ ಮಾಡಿದೆ.

'ರೇಸ್' ದಾಖಲೆ ಉಡೀಸ್

'ರೇಸ್' ದಾಖಲೆ ಉಡೀಸ್

ಇತ್ತೀಚಿಗಷ್ಟೆ ತೆರೆಕಂಡಿದ್ದ 'ರೇಸ್ 3' ಸಿನಿಮಾ ಮೊದಲ ದಿನ 29 ಕೋಟಿ ಗಳಿಸಿ ಈ ವರ್ಷದ ದೊಡ್ಡ ಸಿನಿಮಾ ಆಗಿತ್ತು. ಆದ್ರೀಗ, 'ಸಂಜು' ಸಲ್ಮಾನ್ ಅಭಿನಯಿಸಿದ್ದ 'ರೇಸ್' ಚಿತ್ರವನ್ನೇ ಹಿಂದಿಕ್ಕಿದೆ. ಈ ಮೂಲಕ ಈ ವರ್ಷ ಮೊದಲ ದಿನ ಅತಿ ಹೆಚ್ಚು ಹಣ ಗಳಿಸಿದ ಚಿತ್ರಗಳ ಪೈಕಿ 'ಸಂಜು' ಮೊದಲ ಸ್ಥಾನದಲ್ಲಿದೆ.

ಈ ವರ್ಷ ಅತಿ ಹೆಚ್ಚು ಗಳಿಸಿದ್ದ ಚಿತ್ರಗಳು

ಈ ವರ್ಷ ಅತಿ ಹೆಚ್ಚು ಗಳಿಸಿದ್ದ ಚಿತ್ರಗಳು

ಸಲ್ಮಾನ್ ಖಾನ್ 'ರೇಸ್-3' 29 ಕೋಟಿ, ಟೈಗರ್ ಶ್ರಾಫ್ ಅಭಿನಯದ 'ಭಾಗಿ-2' 25 ಕೋಟಿ, ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತ್' 19 ಕೋಟಿ, 'ವೀರ್ ದೆ ವೆಡ್ಡಿಂಗ್' 10 ಕೋಟಿ, 'ಪ್ಯಾಡ್ ಮ್ಯಾನ್' 10 ಕೋಟಿ ಗಳಿಸುವ ಮೂಲಕ ಮೊದಲ ದಿನದ ಕಲೆಕ್ಷನ್ ನಲ್ಲಿ ದಾಖಲೆ ಬರೆದಿತ್ತು. ಇದೀಗ, ಸಂಜು 34 ಕೋಟಿ ಗಳಿಸಿ ಎಲ್ಲವನ್ನ ಹಿಂದಿಕ್ಕಿ ಟಾಪ್ ಗೆ ಹೋಗಿದೆ.

ನೂರು ಕೋಟಿ ಕ್ಲಬ್ ಗೆ 'ಸಂಜು'.!

ನೂರು ಕೋಟಿ ಕ್ಲಬ್ ಗೆ 'ಸಂಜು'.!

ಇನ್ನು ಮೊದಲ ದಿನವೇ ದೊಡ್ಡ ಮೊತ್ತ ಗಳಿಸಿರುವ 'ಸಂಜು' ಎರಡನೇ ದಿನವೂ ತನ್ನ ಯಶಸ್ವಿ ಬೇಟೆಯನ್ನ ಮುಂದುವರಿಸಿದೆ. ಸದ್ಯದ ಮಾಹಿತಿ ಪ್ರಕಾರ ಎರಡನೇ ದಿನವೂ ಸುಮಾರು 30 ಕೋಟಿವರೆಗೂ ಗಳಿಕೆ ಕಂಡಿರಬಹುದು ಎನ್ನಲಾಗಿದೆ. ಆದ್ರೆ, ಖಚಿತ ಮಾಹಿತಿ ಸಿಕ್ಕಿಲ್ಲ. ಒಟ್ನಲ್ಲಿ ಮೊದಲ ಮೂರು ದಿನಗಳಲ್ಲೇ 'ಸಂಜು' ನೂರು ಕೋಟಿ ಕ್ಲಬ್ ಗೆ ಸೇರೋ ಎಲ್ಲ ಲಕ್ಷಣಗಳು ಇದೆ.

More from Filmibeat

English summary
Ranbir Kapoor's Sanju finally hit the screens on Friday (June 29), and is on a roll. The Sanjay Dutt biopic has been directed by Rajkumar Hirani, whose films like PK and 3 Idiots have emerged as blockbusters at the box office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X