ಬಿಡುಗಡೆ ಆಯ್ತು 'ಸಂಜು' ಚಿತ್ರದ ಹೊಸ ಪೋಸ್ಟರ್ : ಸೋನಂ ಪಾತ್ರ ಏನು?
ಈ ವರ್ಷ ಬಾಲಿವುಡ್ ನಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಪೈಕಿ 'ಸಂಜು' ಸಿನಿಮಾದ ಪ್ರಮುಖವಾಗಿದೆ. ನಟ ಸಂಜಯ್ ದತ್ ಜೀವನ ಆಧಾರಿತವಾದ ಈ ಚಿತ್ರದ ಮತ್ತೊಂದು ಪೋಸ್ಟರ್ ಇದೀಗ ಬಿಡುಗಡೆಯಾಗಿದೆ.
ಪೋಸ್ಟರ್ ನಲ್ಲಿ ನಟ ರಣ್ ಬೀರ್ ಕಪೂರ್ ಹಾಗೂ ಸೋನಮ್ ಕಪೂರ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸೋನಮ್ ಕಪೂರ್ ಲುಕ್ ಹೇಗಿರಲಿದೆ ಎಂಬುದು ಈ ಮೂಲಕ ರಿವೀಲ್ ಆಗಿದೆ. ನಿರ್ದೇಶಕ ರಾಜ್ ಕುಮಾರ್ ಇರಾನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
ಚಿತ್ರದ ಈ ಹೊಸ ಪೋಸ್ಟರ್ ಸೋನಮ್ ಕಪೂರ್ ಪಾತ್ರದ ಬಗ್ಗೆ ಚರ್ಚೆ ಶುರು ಮಾಡುವಂತೆ ಮಾಡಿದೆ. ಸೋನಮ್ ಲುಕ್ ನೋಡಿದರೆ ಅವರು ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಅಥವಾ ಟಿನಾ ಮುನಿಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಕಾರಣ ನಿರ್ದೇಶಕ ರಾಜ್ ಕುಮಾರ್ ಇರಾನಿ ಟ್ವಿಟ್ಟರ್ ನಲ್ಲಿ 'ಸಂಜು ಕ್ರೇಜಿ ರೋಮ್ಯಾಟಿಂಕ್ ಲವ್ ಲೈಫ್' ಎಂದು ಬರೆದುಕೊಂಡಿರುವುದು.

ಆದರೆ, ಸೋನಮ್ ಈ ಹಿಂದೆ ಒಂದು ಸಂದರ್ಶನದಲ್ಲಿ ನಾನು ಯಾವ ನಟಿಯ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿಲ್ಲ ಎಂದು ಹೇಳಿದ್ದರು. ಈ ಕಾರಣದಿಂದ ಸೋನಮ್ ಪಾತ್ರದ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಿದೆ. ಇನ್ನು ಈ ಚಿತ್ರದ ಮೂಲಕ 11 ವರ್ಷಗಳ ನಂತರ ರಣ್ ಬೀರ್ ಮತ್ತು ಸೋನಮ್ ಒಂದಾಗಿದ್ದಾರೆ.
ಅಂದಹಾಗೆ, 'ಸಂಜು' ಸಿನಿಮಾದ ಟ್ರೇಲರ್ ಮೇ 30 ಕ್ಕೆ ರಿಲೀಸ್ ಆಗಲಿದ್ದು, ಸಿನಿಮಾ ಜೂನ್ 29ಕ್ಕೆ ಬಿಡುಗಡೆಯಾಗಲಿದೆ.


Click it and Unblock the Notifications











