ಐದನೇ ದಿನಕ್ಕೆ 'ಸಂಜು' ಕಲೆಕ್ಷನ್ ಎಷ್ಟು.?
ಸಂಜಯ್ ದತ್ ಬಯೋಪಿಕ್ ಸಿನಿಮಾ 'ಸಂಜು' ಬಾಕ್ಸ್ ಆಫೀಸ್ ನಲ್ಲಿ ತನ್ನ ಗೆಲುವಿನ ನಾಗಲೋಟವನ್ನ ಮುಂದುವರಿಸಿದೆ. ಮೊ ದಲ ಮೂರು ದಿನದಲ್ಲೇ 100 ಕೋಟಿ ಗಳಿಸಿದ್ದ ಸಂಜು, ಈಗ 200 ಕೋಟಿಯತ್ತ ದಾಪುಗಾಲು ಇಟ್ಟಿದೆ.
ಸದ್ಯ, ಚಿತ್ರ ವಿಶ್ಲೇಶಕ ತರುಣ್ ಆದರ್ಶ್ ಅವರು ಪ್ರಕಾರ ಐದನೇ ಸಿನಿಮಾ ಸಂಜು ಸಿನಿಮಾ 22.1 ಕೋಟಿ ಗಳಿಸಿದೆ. ಈ ಮೂಲಕ ಐದನೇ ದಿನಕ್ಕೆ ಸಂಜು ಒಟ್ಟಿ ಕಲೆಕ್ಷನ್ 167.5 ಕೋಟಿಯಾಗಿದೆ. ಇದೇ ಯಶಸ್ವಿ ಓಟ ಮುಂದುವರೆದರೇ ಕೆಲವೆ ದಿನಗಳಲ್ಲಿ 200 ಕೋಟಿ ಕ್ಲಬ್ ಸೇರಲಿದೆ.
ಮೊದಲ ದಿನ 34.7 ಕೋಟಿ, ಎರಡನೇ ದಿನ 38.6 ಕೋಟಿ, ಮೂರನೇ ದಿನ 46.7 ಕೋಟಿ, ನಾಲ್ಕನೇ ದಿನ 25.3 ಕೋಟಿ ಹಾಗೂ ಐದನೇ ದಿನ 22.1 ಕೋಟಿ ಸಂಜು ಗಳಿಸಿದೆ. ಈ ಮೂಲಕ ಸಂಜು ಸಿನಿಮಾ ಹಲವು ದಾಖಲೆಗಳನ್ನ ತನ್ನ ಹೆಸರಿಗೆ ಬರೆದುಕೊಂಡಿದೆ.
2018ನೇ ವರ್ಷದಲ್ಲಿ ಮೊದಲ ದಿನ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ 'ಸಂಜು'
ಈ ವರ್ಷದಲ್ಲಿ ಮೊದಲ ವಾರಾಂತ್ಯಕ್ಕೆ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ 'ಸಂಜು'
ರಣ್ಬೀರ್ ಕಪೂರ್ ವೃತ್ತಿ ಜೀವನದಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ 'ಸಂಜು'
ನಿರ್ದೇಶಕ ರಾಜ್ ಕುಮಾರ್ ಹಿರಾನಿ ವೃತ್ತಿ ಜೀವನದಲ್ಲಿ ಮೊದಲ ದಿನ ಅತಿ ಹೆಚ್ಚು ಹಣ ಗಳಿಕೆ ಕಂಡ ಸಿನಿಮಾ 'ಸಂಜು'

ಹೀಗೆ, ಸಂಜು ಸಿನಿಮಾ ಹಲವು ವಿಶೇಷ ದಾಖಲೆಗಳನ್ನ ಮಾಡುವ ಮೂಲಕ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಂಜಯ್ ದತ್ ಬಯೋಪಿಕ್ ಸಿನಿಮಾ ಇದಾಗಿದ್ದು, ರಣ್ಬೀರ್ ಕಪೂರ್, ಪರೇಶ್ ರಾವಲ್, ಮೋನಿಶಾ ಕೊಯಿರಾಲ, ಸೋನಂ ಕಪೂರ್, ಅನುಷ್ಕಾ ಶರ್ಮಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.


Click it and Unblock the Notifications











