ಅಬ್ಬಾ...'ಸಂಜು' ಚಿತ್ರದ ಎರಡನೇ ದಿನ ಗಳಿಕೆ ಇಷ್ಟೊಂದಾ.!
ರಣ್ಬೀರ್ ಕಪೂರ್ ಅಭಿನಯದ 'ಸಂಜು' ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಣ್ಬೀರ್ ಕಪೂರ್ ಅವರ ಅಭಿನಯಕ್ಕೆ ಮನಸೋತಿರುವ ಸಿನಿ ಪ್ರೇಕ್ಷಕರು ಸಂಜಯ್ ದತ್ ಅವರ ಜೀವನ ಕಥೆಯನ್ನ ನೋಡಿ ಥ್ರಿಲ್ ಆಗಿದ್ದಾರೆ.
ಇನ್ನು ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಬೇಟೆಯಾಡುತ್ತಿರುವ 'ಸಂಜು' ಎರಡನೇ ದಿನವೂ ರೆಕಾರ್ಡ್ ಕಲೆಕ್ಷನ್ ಮಾಡಿದೆ. ಮೊದಲ ದಿನ 34 ಕೋಟಿ ಗಳಿಸಿದ್ದ ಸಂಜು, ಎರಡನೇ ದಿನ 38 ಕೋಟಿ ಗಳಿಸಿದೆ.
ಮೊದಲ ಎರಡು ದಿನದಲ್ಲೇ 73.3 ಕೋಟಿ ಗಳಿಕೆ ಕಂಡಿರುವ 'ಸಂಜು' ಮೂರನೇ ದಿನ ಭಾನುವಾರ ನೂರು ಕೋಟಿ ಗಳಿಸಿರುವ ಎಲ್ಲಾ ಲಕ್ಷಣಗಳಿವೆ.

ಇದುವರೆಗೂ ರಣ್ಬೀರ್ ಅಭಿನಯದ ಚಿತ್ರಗಳಲ್ಲಿ 'ಸಂಜು' ಸಿನಿಮಾ ಮೊದಲ ಅತಿ ಹೆಚ್ಚು ಹಣ ಗಳಿಸಿದ ದಾಖಲೆ ಮಾಡಿದೆ. ಇದಕ್ಕು ಮುಂಚೆ 'Besharam' 21 ಕೋಟಿ, 'ಹೇ ಜವಾನಿ ಹೇ ದಿವಾನಿ' 19.4 ಕೋಟಿ ಹಾಗೂ 'ಹೇ ದಿಲ್ ಹೈ ಮುಷ್ಕಿಲ್' ಚಿತ್ರ 13 ಕೋಟಿ ಗಳಿಸಿ ಅತ್ಯುತ್ತಮ ಕೆಲಕ್ಷನ್ ಮಾಡಿದ ಚಿತ್ರಗಳಾಗಿದ್ದವು. ಇದೀಗ, 'ಸಂಜು' ಸಿನಿಮಾ ಈ ಎಲ್ಲ ದಾಖಲೆಗಳನ್ನ ಉಡೀಸ್ ಮಾಡಿದೆ.
ಸಲ್ಮಾನ್ ಖಾನ್ 'ರೇಸ್-3' 29 ಕೋಟಿ, ಟೈಗರ್ ಶ್ರಾಫ್ ಅಭಿನಯದ 'ಭಾಗಿ-2' 25 ಕೋಟಿ, ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತ್' 19 ಕೋಟಿ, 'ವೀರ್ ದೆ ವೆಡ್ಡಿಂಗ್' 10 ಕೋಟಿ, 'ಪ್ಯಾಡ್ ಮ್ಯಾನ್' 10 ಕೋಟಿ ಗಳಿಸುವ ಮೂಲಕ ಮೊದಲ ದಿನದ ಕಲೆಕ್ಷನ್ ನಲ್ಲಿ ದಾಖಲೆ ಬರೆದಿತ್ತು. ಇದೀಗ, ಸಂಜು 34 ಕೋಟಿ ಗಳಿಸಿ ಎಲ್ಲವನ್ನ ಹಿಂದಿಕ್ಕಿ ಟಾಪ್ ಗೆ ಹೋಗಿದೆ.


Click it and Unblock the Notifications











