ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡ ರಣ್ಬೀರ್ ಅಭಿನಯದ 'ಸಂಜು'
ಬಾಲಿವುಡ್ ನಟ ಸಂಜಯ್ ದತ್ ಜೀವನ ಚರಿತ್ರೆ ಆಧಾರಿತ ಸಿನಿಮಾ 'ಸಂಜು' ಬಗ್ಗೆ ತೆಗಳುವವರು ಎಷ್ಟು ಮಂದಿ ಇದ್ದಾರೋ, ಹೊಗಳುವವರೂ ಅಷ್ಟೇ ಮಂದಿ ಇದ್ದಾರೆ.
ಬಿಡುಗಡೆ ಆದ ಹದಿನಾರು ದಿನಗಳಲ್ಲಿಯೇ 300 ಕೋಟಿ ಕಲೆಕ್ಷನ್ ಮಾಡಿದ 'ಸಂಜು' ಸಿನಿಮಾ ಹಲವು ರೆಕಾರ್ಡ್ ಗಳನ್ನ ಪುಡಿ ಪುಡಿ ಮಾಡಿದೆ. ಈ ವರ್ಷದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ 'ಸಂಜು' ನಂಬರ್ 1 ಸ್ಥಾನದಲ್ಲಿದೆ. ಈಗಲೂ ರಣ್ಬೀರ್ ಕಪೂರ್ ಅಭಿನಯದ ರಾಜಕುಮಾರ್ ಹಿರಾನಿ ನಿರ್ದೇಶನದ 'ಸಂಜು' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಪ್ರೇಕ್ಷಕರು ಜೈಕಾರ ಹಾಕಿದ 'ಸಂಜು' ಸಿನಿಮಾ ಸದ್ಯ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿ ಭಾರತೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ (Indian Film Festival of Melbourne Awards) ನಡೆದಿತ್ತು. ಇದರಲ್ಲಿ ಬಹುತೇಕ ಪ್ರಶಸ್ತಿಗಳನ್ನ 'ಸಂಜು' ಸಿನಿಮಾ ತನ್ನದಾಗಿಸಿಕೊಂಡಿದೆ.

ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬರ್ನ್ ನಲ್ಲಿ 'ಅತ್ಯುತ್ತಮ ಚಿತ್ರ' ಪ್ರಶಸ್ತಿ ಪಡೆದ ಸಿನಿಮಾ 'ಸಂಜು'. ಇದೇ ಸಿನಿಮಾದ ನಿರ್ದೇಶನಕ್ಕಾಗಿ ರಾಜಕುಮಾರ್ ಹಿರಾನಿ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿ ಸ್ವೀಕರಿಸಿದರು. 'ಸಂಜು' ಸಿನಿಮಾದಲ್ಲಿ ನಾಯಕ ಸಂಜು ಸ್ನೇಹಿತನ ಪಾತ್ರ ನಿರ್ವಹಿಸಿದ್ದ ವಿಕ್ಕಿ ಕೌಶಲ್ 'ಅತ್ಯುತ್ತಮ ಪೋಷಕ ನಟ' ಪ್ರಶಸ್ತಿ ಪಡೆದರು. ಇನ್ನೂ ರಣ್ಬೀರ್ ಕಪೂರ್ ಗೆ IFFM Vanguard ಪ್ರಶಸ್ತಿ ಲಭಿಸಿತು.
ಪ್ರಶಸ್ತಿ ವಿಜೇತರ ಪಟ್ಟಿ:
Best Indie Film: ಲವ್ ಸೋನಿಯಾ
Best Indie Film (Special Mention): Gali Guleiyan
Equality in Cinema: ಮಹಾನಟಿ
Diversity Award: ಫ್ರೀಡಾ ಪಿಂಟೋ
ಅತ್ಯುತ್ತಮ ನಟ: ಮನೋಜ್ ಬಾಜ್ಪೈ (ಚಿತ್ರ-Gali Guleiyan)
IFFM Vanguard Award: ರಣ್ಬೀರ್ ಕಪೂರ್ (ಚಿತ್ರ-ಸಂಜು)
ಅತ್ಯುತ್ತಮ ನಟಿ: ರಾಣಿ ಮುಖರ್ಜಿ (ಚಿತ್ರ-ಹಿಚ್ಕಿ)
ಅತ್ಯುತ್ತಮ ಚಿತ್ರ: ಸಂಜು
ಅತ್ಯುತ್ತಮ ನಿರ್ದೇಶಕ: ರಾಜಕುಮಾರ್ ಹಿರಾನಿ (ಚಿತ್ರ-ಸಂಜು)
ಅತ್ಯುತ್ತಮ ಪೋಷಕ ನಟ: ವಿಕ್ಕಿ ಕೌಶಲ್ (ಚಿತ್ರ-ಸಂಜು)
ಅತ್ಯುತ್ತಮ ಪೋಷಕ ನಟಿ: ರಿಚಾ ಚಡ್ಡಾ (ಚಿತ್ರ-ಲವ್ ಸೋನಿಯಾ)


Click it and Unblock the Notifications











