ಗುರುವಿಗೆ ತಿರುಮಂತ್ರ ; ಮಹಾಕುಂಭದ ಮೊನಾಲಿಸಾಗೆ ಸಂಕಷ್ಟ - ವೈರಲ್ ಚೆಲುವೆ ವಿರುದ್ಧ ಮಾನನಷ್ಟ ಮೊಕದ್ದಮೆ

ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ತಮ್ಮ ಮನಮೋಹಕ ಕಣ್ಣುಗಳಿಂದನೇ ಎಲ್ಲರನ್ನು ಸೆಳೆದವರು ಮೊನಾಲಿಸಾ ಭೋಸಲೆ. ಮಣಿ ಸರ ಮಾರುತ್ತ ತನ್ನಷ್ಟಕ್ಕೆ ತಾನು ಇದ್ದ ಈ ಚೆಲುವೆಯ ಬದುಕನ್ನು ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಬದಲಿಸಿದ ಹೆಗ್ಗಳಿಕೆ ಸಾಮಾಜಿಕ ಜಾಲತಾಣದ್ದು. ಇವತ್ತು ಮೊನಾಲಿಸಾ ಕೈಯಲ್ಲಿ ಮಣಿ ಸರ ಇಲ್ಲ. ಹೂವು ಕೂಡ ಇಲ್ಲ. ಆದರೆ ವಿವಾದ ಮಾತ್ರ ಇವರ ಬೆನ್ನಹಿಂದೆ ಇದೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಮೊನಾಲಿಸಾ ಮತ್ತು ಫರ್ಮಾನ್ ಖಾನ್ ಲವ್ ಸ್ಟೋರಿಯನ್ನು ಲವ್ ಜಿಹಾದ್ ಎಂದು ಹಲವರು ಕರೆಯುತ್ತಿದ್ದಾರೆ. ಆದರೆ ಮೊನಾಲಿಸಾ ಮಾತ್ರ ನಮ್ಮದು ಪರಿಶುದ್ಧ ಪ್ರೇಮ ಎನ್ನುತ್ತಿದ್ದಾರೆ. ಇನ್ನೂ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮೊನಾಲಿಸಾ ಬೆಳ್ಳಿ ಪರದೆಯ ಮೇಲೆ ಮಿಂಚಬೇಕಿತ್ತು. ನಾಯಕಿಯಾಗಿ ಚಿತ್ರರಂಗದಲ್ಲಿ ನೆಲೆಯೂರಬಹುದಿತ್ತು. ಆ ಅವಕಾಶ ಕೂಡ ಮೊನಾಲಿಸಾಗಿತ್ತು. ''ದಿ ಡೈರಿ ಆಫ್ ಮಣಿಪುರ್'' ಚಿತ್ರದ ಅವಕಾಶ ಕೂಡ ಇವರನ್ನು ಅರಸಿಕೊಂಡು ಬಂದಿತ್ತು. ಮೊನಾಲಿಸಾ ಖುಷಿಯಿಂದ ಈ ಚಿತ್ರವನ್ನು ಒಪ್ಪಿಕೊಂಡಿದ್ದರು ಕೂಡ.

Sanoj Mishra to Sue Monalisa Bhosle for Defamation

ಆದರೆ.. ಅಂದು ಸನೋಜ್ ಮಿಶ್ರಾ ಅವರ ಇತಿಹಾಸ ಗೊತ್ತಿದ್ದ ಅನೇಕರು ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಯೂಟ್ಯೂಬ್ ವಿಡಿಯೋ ಮೂಲಕ ಸನೋಜ್ ಮಿಶ್ರಾ ಜನ್ಮವನ್ನೇ ಜಾಲಾಡಿದರು. ಇವನೊಬ್ಬ ಡೋಂಗಿ ನಿರ್ದೇಶಕ ಈತ ನಿರ್ದೇಶಿಸಿರುವ ಯಾವ ಚಿತ್ರ ಕೂಡ ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ ಎಂದು ಆರೋಪ ಮಾಡಿದ್ದರು. ಇಂತಹ ವ್ಯಕ್ತಿ ಜೊತೆ ಏನೂ ಅರಿಯದ 16 ವರ್ಷ ವಯಸ್ಸಿನ ಮೊನಾಲಿಸಾ ಚಿತ್ರ ಮಾಡಿದರೆ ಆಕೆಯ ಭವಿಷ್ಯ ಹಾಳಾಗಿ ಹೋಗುತ್ತೆ ಎಂದು ಅಲವತ್ತುಕೊಂಡರು.

ಆದರೆ, ಐಶ್ವರ್ಯ ರೈ ಅವರಂತೆಯೇ ಮಿನುಗುವ ತಾರೆಯಾಗಬೇಕೆಂಬ ಕನಸು ಕಾಣ್ತಿದ್ದ ಮೊನಾಲಿಸಾಗೆ ಇದ್ಯಾವುದು ಅರ್ಥ ಆಗಲಿಲ್ಲ. ಬದಲಿಗೆ ಫರ್ಮಾನ್ ಜೊತೆ ಮದುವೆಯ ಬಂಧನಕ್ಕೊಳಗಾದ ನಂತರ ಮೊನಾಲಿಸಾ ಅವಕಾಶ ನೀಡಿದ ಸನೋಜ್ ಮಿಶ್ರಾ ವಿರುದ್ಧ ತಿರುಗಿ ಬಿದ್ದರು.

ಸನೋಜ್ ಮಿಶ್ರಾ ಒಳ್ಳೆ ವ್ಯಕ್ತಿ ಅಲ್ಲ. ಚಿತ್ರೀಕರಣದ ವೇಳೆ ಹಲವು ಬಾರಿ ನನ್ನ ಖಾಸಗಿ ಅಂಗಗಳನ್ನು ಮುಟ್ಟಿದ್ದ. ನಾನು ಈ ವಿಚಾರವನ್ನು ನನ್ನ ಕುಟುಂಬ ಸದಸ್ಯರಿಗೆ ಹೇಳಿದೆ. ಆದರೆ ಪ್ರಯೋಜನವಾಗಲಿಲ್ಲ. ಇದು ನಿನ್ನ ಮೊದಲ ಸಿನಿಮಾ ಸುಮ್ಮನಿರು ಎನ್ನುವಂತೆ ಮಾತನಾಡಿದ್ರು. ಮೊದಲ ಸಿನಿಮಾ ಅನ್ನುವ ಕಾರಣಕ್ಕೆ ನಾನು ಅತ್ಯಾ*ಚಾರಕ್ಕೆ ಒಳಗಾಗಬೇಕೆ? ಎಂದು ಪ್ರಶ್ನೆ ಮಾಡಿದರು.

ನಟಿಯಾಗುವ ಕನಸನ್ನೊತ್ತು ಬರುವ ಯುವತಿಯರಿಗೆ ಸನೋಜ್ ಮಿಶ್ರಾ ಲೈಂ*ಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ ಎಂದು ಮೊನಾಲಿಸಾ ಆರೋಪಿಸಿದರು. ನಾನು ಫರ್ಮಾನ್‌ನನ್ನು ಮದುವೆ ಆಗಿದ್ದು ಸನೋಜ್ ಮಿಶ್ರಾಗೆ ಇಷ್ಟವಿಲ್ಲ. ಅದೇ ಕಾರಣಕ್ಕೆ ಲವ್ ಜಿಹಾದ್ ಎಂದು ಬಿಂಬಿಸಿ ಕೋಮು ಸಂಘರ್ಷ ಸೃಷ್ಟಿಸಲು ಮುಂದಾಗಿದ್ದಾರೆ. ಜೀವ ಬೆದರಿಕೆ ಕರೆಗಳು ಬರ್ತಿವೆ. ನನಗೆ ಅನ್ಯಾಯವಾದಾಗ ಜೊತೆಗೆ ನಿಲ್ಲದ ಕುಟುಂಬ ಈಗ ಆರೋಪ ಮಾಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು. ಸದ್ಯ ಮೊನಾಲಿಸಾ ಅವರ ಈ ಮಾತುಗಳಿಂದ ಸನೋಜ್ ಮಿಶ್ರಾ ಕೆರಳಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ಧಾರೆ.

Sanoj Mishra to Sue Monalisa Bhosle for Defamation

''ಹಿಂದೂಸ್ತಾನ್ ಟೈಮ್ಸ್''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸನೋಜ್ ಮಿಶ್ರಾ ಆಕೆಗೆ ಅಭಿನಯದ ಅ.ಆ.ಇ.ಈ ಕಲಿಸಿದ್ದೇ ನಾನು ಆದರೆ ಈಗ ನನ್ನಿಂದ ಕಲಿತ ಆಕ್ಟಿಂಗ್‌ದಿಂದ ನನ್ನನ್ನೇ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾಳೆ ಎಂದು ಹೇಳಿದ್ದಾರೆ. ಆಕೆಯ ಕುಟುಂಬದ ಸುಮಾರು 7-8 ಜನರು ಇನ್ನೂ ಉಜ್ಜಯಿನಿಯಲ್ಲಿರುವ ನನ್ನ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಹೇಳಿರುವ ಸನೋಜ್ ಮಿಶ್ರಾ ನಾನು ಆಕೆಯ ಮದುವೆ ಕಾನೂನುಬಾಹಿರ ಎಂದು ಹೇಳಿದೆ. ಹೀಗಾಗಿಯೇ ನನ್ನ ಮೇಲೆ ಆಕೆ ಆರೋಪ ಮಾಡಿದ್ದಾಳೆ ಎಂದಿದ್ದಾರೆ.

ಮುಂದುವರೆದು ನಾನು ಡೈಲಾಗ್ ಹೇಗೆ ಹೇಳಬೇಕು ಎನ್ನುವುದನ್ನು ಕಲಿಸಿದೆ, ಅಭಿನಯಿಸುವುದು ಕಲಿಸಿದೆ, ಕಥೆ ಅರ್ಥ ಮಾಡಿಸಿದೆ, ನಗುವುದು, ಅಳುವುದು, ಎಲ್ಲವನ್ನೂ ಕಲಿಸಿದೆ. ಆಗ ಆಕೆಗೆ ಯಾವುದೇ ತೊಂದರೆಯಾಗಲಿಲ್ಲ ಎಂದು ಹೇಳಿರುವ ಸನೋಜ್ ಮಿಶ್ರಾ ಹಾಗೊಂದು ವೇಳೆ ಆಗಿದ್ದರೆ ಕೂಡಲೇ ಕುಟುಂಬಕ್ಕೆ ದೂರು ನೀಡಬಹುದಿತ್ತು, ಅಲ್ಲಿಯೇ ಪ್ರತಿಕ್ರಿಯಿಸಬೇಕಿತ್ತು ಎಂದು ಹೇಳಿದ್ದಾರೆ.

ಆಕೆಯ ಮದುವೆಯನ್ನು 'ಲವ್-ಜಿಹಾದ್' ಎಂದು ಬಿಂಬಿಸಿದ ಕಾರಣ ಮತ್ತು ನಾನು ಅದನ್ನು ಮೊದಲಿನಿಂದಲೂ ವಿರೋಧಿಸಿದ್ದರಿಂದ, ಈಗ ನನ್ನನ್ನು ಈ ಪ್ರಕರಣಕ್ಕೆ ಎಳೆದು ತರಲಾಗಿದೆ ಎಂದು ಹೇಳಿರುವ ಸನೋಜ್ ಮಿಶ್ರಾ ಒಂದೆರಡು ದಿನಗಳಲ್ಲಿ ಆಕೆ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾರೆ.

ಆಕೆ ನನ್ನ ಹೆಸರನ್ನು ಸುಲಭವಾಗಿ ಹಾಳು ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವ ಸನೋಜ್ ಮಿಶ್ರಾ ಅವಳು ಹೇಳುತ್ತಿರುವುದು ನಿಜವಾಗಿದ್ದರೆ ಕಾನೂನು ಮೂಲಕ ಅವಳು ಕೂಡ ಹೋರಾಟ ಮಾಡಬಹುದು ಎಂದಿದ್ದಾರೆ. ಆಕೆ ಸಿನಿಮಾದ ಬಗ್ಗೆ ನಾನು ಈಗ ತಲೆಕೆಡಿಸಿಕೊಂಡಿಲ್ಲ.ಆ ಚಿತ್ರ ಇನ್ನು ನಿರ್ಮಾಣವಾಗುವುದಿಲ್ಲ, ನನಗೆ ಅದು ಪ್ರತ್ಯೇಕ ವಿಷಯ ಎಂದು ಕೂಡ ಹೇಳಿದ್ದಾರೆ.

More from Filmibeat

English summary
Director Sanoj Mishra to sue Monalisa Bhosle for defamation following shock misconduct charges. Read the full details of his explosive rebuttal here.
Read more about: monalisa mahakumbh mela 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X