For Quick Alerts
  ALLOW NOTIFICATIONS  
  For Daily Alerts

  ಹೊಸ ಬಾಯ್ ಫ್ರೆಂಡ್ ಜೊತೆ ಬರ್ತಡೇ ಆಚರಿಸಿಕೊಂಡ ಶ್ರುತಿ ಹಾಸನ್?

  |

  ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶ್ರುತಿ ಹಾಸನ್ 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಲವ್ ಬ್ರೇಕ್ ಅಪ್‌ ಆದ್ಮೇಲೆ ಒಂಟಿಯಾಗಿರುವ ಶ್ರುತಿ ಬೇಸರದಿಂದ ಇದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ, ಹೊಸ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡು ಎಲ್ಲರಿಗು ಅಚ್ಚರಿ ಉಂಟು ಮಾಡಿದ್ದಾರೆ.

  ಶ್ರುತಿ ಹಾಸನ್ ಈ ಹಿಂದೆ ಸಂಗೀತಗಾರ ಮೈಕಲ್ ಕೋರ್ಸೆಲ್ ಜೊತೆ ಪ್ರೀತಿಯಲ್ಲಿದ್ದರು. ಇಬ್ಬರು ಮದುವೆ ಸಹ ಆಗುತ್ತಾರೆ ಎನ್ನುವಷ್ಟು ಸುದ್ದಿಯಾಗಿತ್ತು. ಶ್ರುತಿ ಹಾಸನ್ ಅವರ ಕೌಟುಂಬಿಕ ಕಾರ್ಯಕ್ರಮಗಳಲ್ಲಿಯೂ ಮೈಕಲ್ ಭಾಗಿಯಾಗಿದ್ದರು. ಆದ್ರೆ, ಇದ್ದಕ್ಕಿದ್ದಂತೆ ಶ್ರುತಿ ಪ್ರೀತಿ ಬ್ರೇಕ್ ಅಪ್ ಆಯಿತು. ಪ್ರೀತಿಯನ್ನು ಕಳೆದುಕೊಂಡು ನೋವಿನಲ್ಲಿದ್ದ ಶ್ರುತಿ ಹಾಸನ್‌ಗೆ ಈಗ ಮತ್ತೆ ಲವ್ ಆಗಿದೆ. ಹೊಸ ಬಾಯ್ ಫ್ರೆಂಡ್ ಜೊತೆ ತಮ್ಮ ಬರ್ತಡೇ ಸೆಲೆಬ್ರೆಟ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ.....

  ಬ್ರೇಕ್ ಅಪ್ ನೋವು ದೂರ ಮಾಡಿದ ಲಾಕ್‌ಡೌನ್: ಶೃತಿ ಹಾಸನ್ಬ್ರೇಕ್ ಅಪ್ ನೋವು ದೂರ ಮಾಡಿದ ಲಾಕ್‌ಡೌನ್: ಶೃತಿ ಹಾಸನ್

  ಪೊಗರು, ರಾಬರ್ಟ್ ಬಗ್ಗೆ ಮಾತನಾಡಿದ ಪುನೀತ್ ರಾಜ್ ಕುಮಾರ್ | Filmibeat Kannada
  ಹಜಾರಿಕ ಜೊತೆ ಶ್ರುತಿ ಬರ್ತಡೇ

  ಹಜಾರಿಕ ಜೊತೆ ಶ್ರುತಿ ಬರ್ತಡೇ

  ಶ್ರುತಿ ಹಾಸನ್ 35ನೇ ವರ್ಷದ ಜನುಮದಿನವನ್ನು ತಮ್ಮ ಬಾಯ್ ಫ್ರೆಂಡ್ ಸಂತನು ಹಜಾರಿಕ (Santanu Hazarika) ಜೊತೆ ಆಚರಿಸಿಕೊಂಡಿದ್ದಾರೆ. ದೆಹಲಿ ಮೂಲದ ಡೂಡಲ್ ಕಲಾವಿದ ಮತ್ತು ಸಚಿತ್ರಕಾರ ಸಂತನು ಹಜಾರಿಕ ಜೊತೆ ಶ್ರುತಿ ಡೇಟಿಂಗ್ ಮಾಡ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಕುರಿತು ಶ್ರುತಿ ಮಾತನಾಡಲು ನಿರಾಕರಿಸಿದ್ದರು.

  ರೊಮ್ಯಾಂಟಿಕ್ ವಿಶ್ ಮಾಡಿದ ಹಜಾರಿಕ

  ರೊಮ್ಯಾಂಟಿಕ್ ವಿಶ್ ಮಾಡಿದ ಹಜಾರಿಕ

  ಸಂತನು ಹಜಾರಿಕ ಜೊತೆ ಹುಟ್ಟುಹಬ್ಬವನ್ನು ಆಚರಣೆ ಮಾಡಿರುವ ಫೋಟೋವನ್ನು ಶ್ರುತಿ ಹಾಸನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ ಶ್ರುತಿ ಹಾಸನ್ ಅವರ ಫೋಟೋ ಹಂಚಿಕೊಂಡಿರುವ ಹಜಾರಿಕ ''ಹ್ಯಾಪಿ ಬರ್ತಡೇ ಪ್ರಿನ್ಸಸ್'' ಎಂದು ಪೋಸ್ಟ್ ಹಾಕಿದ್ದಾರೆ.

  ಮದುವೆಗೂ ಮುನ್ನ ಮುರಿದು ಬಿತ್ತು ಕಮಲ್ ಹಾಸನ್ ಪುತ್ರಿಯ ಪ್ರೀತಿಮದುವೆಗೂ ಮುನ್ನ ಮುರಿದು ಬಿತ್ತು ಕಮಲ್ ಹಾಸನ್ ಪುತ್ರಿಯ ಪ್ರೀತಿ

  ಮುಂಬೈನಲ್ಲಿ ಕೈ ಕೈ ಹಿಡಿದು ಕಾಣಿಸಿಕೊಂಡಿದ್ದ ಜೋಡಿ

  ಮುಂಬೈನಲ್ಲಿ ಕೈ ಕೈ ಹಿಡಿದು ಕಾಣಿಸಿಕೊಂಡಿದ್ದ ಜೋಡಿ

  ಎರಡ್ಮೂರು ದಿನದ ಹಿಂದೆಯಷ್ಟೇ ಶ್ರುತಿ ಹಾಸನ್ ಮತ್ತು ಹಜಾರಿಕ ಜೋಡಿ ಮುಂಬೈನಲ್ಲಿ ಕೈ ಕೈ ಹಿಡಿದು ಕಾಣಿಸಿಕೊಂಡಿದ್ದರು. ಶ್ರುತಿ ಹಾಸನ್ ಮತ್ತೆ ಲವ್ವಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿತ್ತಾದರೂ ಯಾರ ಜೊತೆ ಎಂದು ಖಚಿತವಾಗಿರಲಿಲ್ಲ. ಆದರೆ, ಹಜಾರಿಕ ಜೊತೆ ಮುಂಬೈನಲ್ಲಿ ಶ್ರುತಿ ಅವರನ್ನು ನೋಡಿದ್ಮೇಲೆ ಈ ಸುದ್ದಿ ನಿಜಾ ಎಂದು ನಂಬುವಂತಾಗಿತ್ತು.

  ಶ್ರುತಿ ಹಾಸನ್ ಮಾಜಿ ಗೆಳೆಯ ಯಾರು?

  ಶ್ರುತಿ ಹಾಸನ್ ಮಾಜಿ ಗೆಳೆಯ ಯಾರು?

  ಇಟಲಿ ಮೂಲದ ಮೈಕಲ್ ಕೋರ್ಸೆಲ್ ಜೊತೆ ಶ್ರುತಿ ಲವ್ವಲ್ಲಿ ಇದ್ದರು. ಮೈಕಲ್‌ಗೋಸ್ಕರ್ ಶ್ರುತಿ ಆಗಾಗ ಇಟಲಿಗೆ ಸಹ ಹೋಗುತ್ತಿದ್ದರು. ಇಬ್ಬರು ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, 2019ರ ಕೊನೆಯಲ್ಲಿ ಶ್ರುತಿ ಬ್ರೇಕ್ ಅಪ್ ಬಗ್ಗೆ ಹೇಳಿಕೊಂಡಿದ್ದರು. ಮೈಕಲ್ ಸಹ ಬ್ರೇಕ್‌ ಅಪ್ ಪೋಸ್ಟ್ ಹಾಕಿದ್ದರು.

  English summary
  Actress Shruti hassan boyfriend Santanu hazarika celebrated her 35th Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X