Sanya Malhotra: ಜವಾನ್‌ನಿಂದ ಖುಲಾಯಿಸಿದ ಸಾನ್ಯಾ ಮಲ್ಹೋತ್ರಾ ಅದೃಷ್ಟ, ಮತ್ತೆ ಅಟ್ಲಿ ಜೊತೆ ಸಿನಿಮಾ!

ದಂಗಲ್ ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಟಿ ಸಾನ್ಯಾ ಮಲ್ಹೋತ್ರಾ ಹಲವು ಸಿನಿಮಾಗಳ ಮೂಲಕ ತಾವು ಪ್ರತಿಭಾನ್ವಿತ ನಟಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಅಟ್ಲಿ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಜವಾನ್‌ನಲ್ಲಿ ಶಾರುಖ್ ಖಾನ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ದಕ್ಷಿಣ ಭಾರತದಲ್ಲಿಯೂ ಅಪಾರ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ.

ಈಗ ಮತ್ತೆ ನಿರ್ದೇಶಕ ಅಟ್ಲಿ ಅವರ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಸ್... ಸಿನಿಮಾವೊಂದು ಹಿಟ್ ಆದರೆ ಬರೀ ನಾಯಕ ನಟ, ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲದೆ ಸಿನಿಮಾದಲ್ಲಿ ಕೆಲಸ ಮಾಡಿದ ಇತರ ಪಾತ್ರವರ್ಗಕ್ಕೂ ಜನಪ್ರಿಯತೆ ಬರುತ್ತದೆ. ಇದೇ ಸಾನ್ಯಾ ಮಲ್ಹೋತ್ರಾ ಅವರಿಗೂ ಪ್ಲಸ್ ಪಾಯಿಂಟ್ ಆಗಿದೆ.

Sanya Malhotra to work with Atlee for Varun Dhawans film

ವರುಣ್ ಧವನ್ ಸಿನಿಮಾದಲ್ಲಿ ಸಾನ್ಯಾ ಮಲ್ಹೋತ್ರಾ

ನಿತೇಶ್ ತಿವಾರಿಯವರ 'ಬವಾಲ್' ಸಿನಿಮಾದಲ್ಲಿ ನಟಿ ಜಾನ್ವಿ ಕಪೂರ್ ಜೊತೆಗೆ ಕಾಣಿಸಿಕೊಂಡಿದ್ದ ವರುಣ್ ಧವನ್ ಈಗ ನಿರ್ದೇಶಕ ಅಟ್ಲಿ ಜೊತೆಗೆ ಕೆಲಸ ಮಾಡಲಿದ್ದಾರೆ. ವರುಣ್ ಧವನ್ ಅವರ ಮುಂದಿನ 'VD18' ಸಿನಿಮಾವನ್ನು ಅಟ್ಲಿ ಪ್ರಸ್ತುತಪಡಿಸುತ್ತಿದ್ದು, ಈಗಾಗಲೇ ಸಿನಿಮಾ ಚಿತ್ರೀಕರಣ ಕೂಡ ಪ್ರಾರಂಭವಾಗಿದೆ.

ಸಿನಿಮಾದಲ್ಲಿ ವರುಣ್ ಧವನ್ ಜೊತೆಗೆ ಸೌತ್ ನಟಿ ಕೀರ್ತಿ ಸುರೇಶ್ ಮತ್ತು ಜುಬಿಲಿ ಸಿನಿಮಾದ ನಟಿ ವಾಮಿಕಾ ಗಬ್ಬಿ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಚಿತ್ರದಲ್ಲಿ ಮತ್ತೊಂದು ನಿರ್ಣಾಯಕ ಪಾತ್ರದಲ್ಲಿ ಸಾನ್ಯಾ ಮಲ್ಹೋತ್ರಾ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

'ವಿಡಿ 18' ನಲ್ಲಿ ವರುಣ್ ಧವನ್‌ ಜೊತೆಗೆ ಸಾನ್ಯಾ ಮಲ್ಹೋತ್ರಾ

ಪ್ರಸ್ತುತ ವರುಣ್ ಧವನ್ ಅವರು ತಮ್ಮ ಮುಂದಿನ 'VD18' ಸಿನಿಮಾದ ಶೂಟಿಂಗ್ ಶೆಡ್ಯೂಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸುದ್ದಿತಾಣ ಪಿಂಕ್ವಿಲ್ಲಾ ವರದಿಗಳ ಪ್ರಕಾರ, ವರುಣ್ ಧವನ್ ಅವರ ಸಿನಿಮಾದ ಪ್ರಮುಖ ಪಾತ್ರಕ್ಕೆ ಸಾನ್ಯಾ ಮಲ್ಹೋತ್ರಾ ಸೇರಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟಿ ಅತಿಥಿ ಪಾತ್ರವನ್ನು ನಿರ್ವಹಿಸಲಿದ್ದಾರೆ.

Sanya Malhotra to work with Atlee for Varun Dhawans film

ಬ್ಲಾಕ್‌ಬಸ್ಟರ್ 'ಜವಾನ್' ನಂತರ ಮತ್ತೊಮ್ಮೆ ನಿರ್ದೇಶಕ ಅಟ್ಲಿ ಅವರ ಜೊತೆ ಸೇರಲಿದ್ದಾರೆ. ಆದರೆ, ಸಿನಿಮಾದಲ್ಲಿ ಸಾನ್ಯಾ ಮಲ್ಹೋತ್ರಾ ಅವರು ನಿರ್ವಹಿಸಲಿರುವ ಪಾತ್ರದ ವಿವರಗಳನ್ನು ಮುಚ್ಚಿಡಲಾಗಿದೆ. ಆದರೆ ಸಿನಿಮಾ ಕಥೆಯಲ್ಲಿ ಮಹತ್ವದ ಪಾತ್ರ ಇದು ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ವರದಿ ಮಾಡಿರುವ ಪಿಂಕ್ವಿಲ್ಲಾ ಮೂಲಗಳನ್ನು ಉಲ್ಲೇಖಿಸಿದೆ. "ಅಟ್ಲಿ ಅವರು ಅತಿಥಿ ಪಾತ್ರಕ್ಕಾಗಿ ಸಾನ್ಯಾ ಅವರನ್ನು ಕೇಳಿದ ತಕ್ಷಣವೇ ಅವರು ಒಪ್ಪಿಕೊಂಡರು. ಜವಾನ್‌ ಸಿನಿಮಾದಲ್ಲಿ ಅಟ್ಲಿ ಅವರೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿರಿವ ಕಾರಣ ಮತ್ತು ಅವರ ಜೊತೆಗೆ ಕೆಲಸ ಮಾಡಲು ಆಸಕ್ತಿ ಇರುವ ಕಾರಣ ಯಾವುದೇ ರೀತುಯಲ್ಲಿಯೂ ಪ್ರಸ್ತಾಪವನ್ನು ತಿರಸ್ಕರಿಸಲಿಲ್ಲ" ಎಂದು ಮೂಲವೊಂದು ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ ಬಾಂದ್ರಾದಲ್ಲಿ ವರುಣ್ ಧವನ್ ಜೊತೆಗೆ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾ ಪಕ್ಕಾ ಮನರಂಜನೆ ನೀಡಲಿದ್ದು, ಆಕ್ಷನ್ ಸೀಕ್ವೆನ್ಸ್‌ಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುವ ಭರವಸೆ ನೀಡುತ್ತದೆ ಎಂದು ಮೂಲ ಉಲ್ಲೇಖಿಸಿದೆ.

ವರುಣ್ ಧವನ್ ಅವರ 'VD18'

ವರದಿಯ ಪ್ರಕಾರ,ವರುಣ್ ಧವನ್ ಅವರ 'VD18' ಸಿನಿಮಾದಲ್ಲಿವರುಣ್ ತನ್ನ ಮಗಳಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಲು ತಲೆಮರೆಸಿಕೊಳ್ಳುವ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಕೀರ್ತಿ ಸುರೇಶದ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರಾಜ್‌ಪಾಲ್ ಯಾದವ್ ಮತ್ತು ಶೀಬಾ ಚಡ್ಡಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮುರಾದ್ ಖೇತಾನಿ ಮತ್ತು ಪ್ರಿಯಾ ಅಟ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಅಟ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಫೆಬ್ರವರಿ 2024 ರ ವೇಳೆಗೆ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ, ಮೇ 2024 ರಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Sanya Malhotra to work with Atlee.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X