»   » ಭಾಯ್ ಜಾನ್ ಸಲ್ಮಾನ್ ಗೆ 'ಮಂಕಿ' ಎಂದ ಸಪ್ನಾ ಭಾವನಾನಿ

ಭಾಯ್ ಜಾನ್ ಸಲ್ಮಾನ್ ಗೆ 'ಮಂಕಿ' ಎಂದ ಸಪ್ನಾ ಭಾವನಾನಿ

By: ಸೋನು ಗೌಡ
Subscribe to Filmibeat Kannada

ಮೊನ್ನೆ-ಮೊನ್ನೆ ಬಾಲಿವುಡ್ ಭಾಯ್ ಅವರು 'ಸುಲ್ತಾನ್' ಚಿತ್ರದ ಶೂಟಿಂಗ್ ಅನುಭವ ಬಿಚ್ಚಿಟ್ಟು ಭಾರಿ ಟೀಕೆಗೆ ಗುರಿಯಾದ ಬೆನ್ನಲ್ಲೇ, ಮತ್ತೆ ಸಲ್ಮಾನ್ ಖಾನ್ ಅವರು ಬಿಟೌನ್ ನಲ್ಲಿ ಸುದ್ದಿಯಾಗಿದ್ದಾರೆ.

ಆದ್ರೆ ಈ ಬಾರಿ ಸಲ್ಮಾನ್ ಖಾನ್ ಅವರು ಸುದ್ದಿ ಮಾಡಿದ್ದೇನು ನಿಜ, ಆದರೆ ಅವರಾಗಿ ಏನೋ ಹೇಳಿಕೆ ಕೊಡೋದ್ರಿಂದ ಆಗ್ಲಿ, ಅಥವಾ ಯಾವುದೇ ಬೇರೆ ರೀತಿಯಲ್ಲಿ ಸುದ್ದಿ ಮಾಡಿಲ್ಲ, ಬದ್ಲಾಗಿ ಸಲ್ಮಾನ್ ಖಾನ್ ಅವರಿಗೆ ಬಿಗ್ ಬಾಸ್ ಸ್ಪರ್ಧಿಯೊಬ್ಬರು ಮಾಡಿದ ಕಾಮೆಂಟ್ ಎಲ್ಲಾ ಕಡೆ ವೈರಲ್ ಆಗಿದೆ.

'ಹಿಂದಿ ಬಿಗ್ ಬಾಸ್ ಸೀಸನ್ 6' ನಲ್ಲಿ ಸ್ಪರ್ಧಿಯಾಗಿದ್ದ ಸಪ್ನಾ ಭಾವನಾನಿ ಅವರು, ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರ ಬಗ್ಗೆ ರೊಚ್ಚಿಗೆದ್ದು, ಬಾಯಿಗೆ ಬಂದಂತೆ ಬಡಬಡಿಸಿದ್ದಾರೆ. ಸಪ್ನಾ ಅವರ ವಿವಾದಾತ್ಮಕ ಹೇಳಿಕೆ ಇದೀಗ, ಇಡೀ ಬಿಟೌನ್ ನಲ್ಲಿ ಸಂಚಲನ ಸೃಷ್ಟಿ ಮಾಡಿದೆ.['ರೇಪ್ ಆದ ಮಹಿಳೆ ಪರಿಸ್ಥಿತಿ ನನ್ನದಾಗಿತ್ತು': ಸಲ್ಲು ವಿವಾದಾತ್ಮಕ ಹೇಳಿಕೆ]

ಖ್ಯಾತ ಹೇರ್ ಸ್ಟೈಲಿಸ್ಟ್ ಸಪ್ನಾ ಭಾವನಾನಿ ಅವರು ಅಷ್ಟಕ್ಕೂ ಸಲ್ಮಾನ್ ಖಾನ್ ಅವರಿಗೆ ಮಾಡಿದ ಕಾಮೆಂಟ್ ಏನು ಅನ್ನೋದನ್ನ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ...

ಇಲ್ಲ-ಸಲ್ಲದ್ದನ್ನು ಹೇಳಿದ ಸಪ್ನಾ

ಬಾಲಿವುಡ್ ಸೆಲೆಬ್ರಿಟಿಗಳಿಗೆ ಹೇರ್ ಸ್ಟೈಲ್ ಸ್ಪೆಷಲಿಸ್ಟ್ ಹಾಗೂ 'ಬಿಗ್ ಬಾಸ್ ಸೀಸನ್ 6' ಸ್ಪರ್ಧಿ ಸಪ್ನಾ ಭಾವನಾನಿ ಅವರು, ಹಿಂದುಸ್ಥಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ, ಸಲ್ಮಾನ್ ಖಾನ್ ಅವರ ಬಗ್ಗೆ ಇಲ್ಲ-ಸಲ್ಲದ ಪ್ರಚಾರ ಮಾಡಿದ್ದಾರೆ. ಇದರಿಂದ ಭಾವನಾನಿ ಅವರು ಸಲ್ಲು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.[ಸಲ್ಮಾನ್ ಖಾನ್ ತಂಗಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ದರೋಡೆ!]

'ಮಂಗ'ನ ತರ ಡ್ಯಾನ್ಸ್ ಮಾಡ್ತಾರಂತೆ ಸಲ್ಮಾನ್

ಸಲ್ಮಾನ್ ಖಾನ್ ಅವರು ಒಳ್ಳೆ 'ಮಂಗ'ನ ತರ ಡ್ಯಾನ್ಸ್ ಮಾಡ್ತಾರೆ. ಅವರು ಎಲ್ಲಾ ಜನರನ್ನು ಮಿಸ್ ಯೂಸ್ ಮಾಡುತ್ತಿದ್ದಾರೆ. ಆದ್ದರಿಂದ ನನ್ನ ಪುಸ್ತಕದಲ್ಲಿ ಸಲ್ಮಾನ್ ಅವರಿಗೆ ಹೆಚ್ಚಿನ ಮಹತ್ವ ನೀಡಲಿಲ್ಲ" ಎಂದು ಸಪ್ನಾ ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.

'ಮಹಿಳಾ ಸರಣಿ ಬೀಟರ್' ಎಂದಿದ್ದ ಸಲ್ಮಾನ್

'ಬಿಗ್ ಬಾಸ್ ಸೀಸನ್ 6' ಭಾಗವಹಿಸಿದ್ದ ಸಪ್ನಾ ಭಾವನಾನಿ ಅವರನ್ನು ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಅವರು 'ಮಹಿಳಾ ಸರಣಿ ಬೀಟರ್' ಅಂತ ಕರೆದಿದ್ದರಂತೆ.

ಸಪ್ನಾಗೆ ಬೆದರಿಕೆ

ಸಲ್ಮಾನ್ ಮತ್ತು ಸಪ್ನಾ ಅವರಿಗೆ ಬಿಗ್ ಬಾಸ್ ವೇದಿಕೆಯಲ್ಲಿ ಕೊಂಚ ಮಾತು-ಕತೆ ಆಗಿದ್ದರಿಂದ, ಮನೆಯಿಂದ ಹೊರಬಂದ ಮೇಲೆ, ಸಲ್ಮಾನ್ ವಿರುದ್ಧ ಮಾತನಾಡಿದರೆ ಕೊಲೆ ಮಾಡಲಾಗುತ್ತದೆ ಎಂದು ಭಾವನಾನಿ ಅವರಿಗೆ ಬೆದರಿಕೆ ಕರೆ ಬಂದಿತ್ತಂತೆ.

ಕ್ಯಾರೆ ಅನ್ನದ ಸಪ್ನಾ

"ಆದರೆ ವಾಸ್ತವವಾಗಿ ಬಹಳಷ್ಟು ಜನರು ಸಪ್ನಾ ಅವರಿಗೆ ಎಚ್ಚರಿಕೆ ನೀಡಿದರೂ ಕೂಡ ನನಗೆ ಭಯವಿಲ್ಲ. ಕೆಲ ದಿನಗಳಿಂದ ನನ್ನ ಬಗ್ಗೆ ವದಂತಿಗಳು ಕೇಳಿ ಬಂದಿದ್ದವು. ನಾಲ್ಕು ವರ್ಷಗಳಿಂದ ನಾನು ಹೀಗೆ ಇದ್ದೇನೆ. ಯಾರು ನನ್ನನ್ನು ಏನು ಮಾಡೋಕೆ ಆಗಿಲ್ಲ" ಎಂದು ಸಪ್ನಾ ಭಾವನಾನಿ ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.

English summary
Sapna Bhavnani, who is a popular celebrity hairstylist and a former Bigg Boss contestant, is very vocal and doesn't mince words. In an exclusive interview with Hindustan Times, Sapna used many shocking words against Bollywood Actor Salman Khan and said many unethical things.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada