ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಬಂಗಲೆ ಮೇಲೆ ಸಾರಾ, ತಾಯಿ ಅಮೃತ ಕಣ್ಣು.!
ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಬಂಗಲೆ ನಮ್ಮದು ಎಂದು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ತಾಯಿ ಅಮೃತ ಸಿಂಗ್ ದೆಹರಾದೂನ್ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ.
ದೆಹರಾದೂನ್ ಹೊರವಲಯದಲ್ಲಿ ಇರುವ 1600 ಚದರ ಅಡಿ ವಿಸ್ತೀರ್ಣ ಹೊಂದಿರುವ ಬಂಗಲೆ ಮೇಲೆ ಹಕ್ಕು ಚಲಾಯಿಸಲು ನಟಿ ಸಾರಾ ಅಲಿ ಖಾನ್ ಮತ್ತು ತಾಯಿ ಅಮೃತಾ ಸಿಂಗ್ ಪೊಲೀಸರ ಮೊರೆ ಹೋಗಿದ್ದಾರೆ.
ಸದ್ಯ ಬಂಗಲೆಗೆ ಬೀಗ ಜಡಿಯಲಾಗಿದ್ದು, ಯಾರನ್ನೂ ಒಳಗೆ ಬಿಡುತ್ತಿಲ್ಲ. ಕಾನೂನು ಪ್ರಕಾರ, ಕೇಸ್ ಕ್ಲೋಸ್ ಆಗುವವರೆಗೂ ಬಂಗಲೆಯೊಳಗೆ ಯಾರಿಗೂ ಪ್ರವೇಶ ಸಿಗುವುದಿಲ್ಲ ಎಂದು ವರದಿ ಆಗಿದೆ.
ಅಸಲಿಗೆ, ಬಾಲಿವುಡ್ ನಟಿ ಸಾರಾ ಅಲಿ ಖಾನ್ ಇತ್ತೀಚೆಗಷ್ಟೇ ಬಣ್ಣದ ಬದುಕಿಗೆ ಕಾಲಿಟ್ಟರು. 'ಕೇದಾರನಾಥ್' ಮತ್ತು 'ಸಿಂಬಾ' ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡುತ್ತಿದೆ. ಹೀಗಿರುವಾಗಲೇ, ಬಂಗಲೆಯೊಂದರ ಮೇಲೆ ಕಣ್ಣು ಹಾಕಿ ಸಾರಾ ಮತ್ತು ತಾಯಿ ವಿವಾದಕ್ಕೆ ಸಿಲುಕಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಬಂಗಲೆ ಯಾರದ್ದು.?
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮಾಜಿ ಪತ್ನಿ ಅಮೃತ ಸಿಂಗ್ ಸಂಬಂಧಿ ಮಧುಸೂದನ್ ಎಂಬುವರಿಗೆ ಸೇರಿದ ಬಂಗಲೆ ದೆಹರಾದೂನ್ ಹೊರವಲಯದಲ್ಲಿದೆ. ಜನವರಿ 19, 2019 ರಂದು ಮಧುಸೂದನ್ ವಿಧಿವಶರಾಗಿದ್ದು, ಅಂತ್ಯಕ್ರಿಯೆಯಲ್ಲಿ ಸಾರಾ ಅಲಿ ಖಾನ್ ಮತ್ತು ಅಮೃತ ಸಿಂಗ್ ಪಾಲ್ಗೊಂಡಿದ್ದರು. ಇದಾದ ಮೇಲೆ ಮಧುಸೂದನ್ ಗೆ ಸೇರಿದ ಬಂಗಲೆ ಮೇಲೆ ಹಕ್ಕು ಸಾಧಿಸಲು ಅಮೃತ ಸಿಂಗ್ ಮತ್ತು ಸಾರಾ ಮುಂದಾಗಿದ್ದಾರೆ ಎನ್ನಲಾಗಿದೆ.

ಪ್ರಕರಣಕ್ಕೆ ಹೊಸ ತಿರುವು
ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಮಿಸ್ಟರ್ ಖುಷಿರಾಮ್ ಎಂಬುವರಿಂದ. ಮಧುಸೂದನ್ ರವರನ್ನ ಮೂರು ವರ್ಷಗಳಿಂದ ನೋಡಿಕೊಳ್ಳುತ್ತಿದ್ದ ಖುಷಿರಾಮ್ ಪೊಲೀಸರ ಮುಂದೆ ಬೇರೆಯದ್ದೇ ಕಥೆ ಬಾಯ್ಬಿಟ್ಟಿದ್ದಾರೆ.

ಬಂಗಲೆಗೆ ಬೀಗ ಹಾಕಿದ್ಯಾರು.?
ಪೊಲೀಸರ ಮುಂದೆ ಖುಷಿರಾಮ್ ಹೇಳಿಕೆ ಕೊಟ್ಟಿರುವ ಪ್ರಕಾರ, ಸ್ವತಃ ಮಧುಸೂದನ್ ರವರೇ ಬಂಗಲೆಗೆ ಬೀಗ ಹಾಕಿದ್ದರು. ತಮ್ಮ ಬಂಗಲೆಯೊಳಗೆ ಇತರರು ಕಾಲಿಡುವುದು ಮಧುಸೂದನ್ ಗೆ ಇಷ್ಟವಿರಲಿಲ್ಲವಂತೆ.

ಈಗ ಬಂದಿದ್ಯಾಕೆ.?
ತನಿಖೆಯಲ್ಲಿ ಮಧುಸೂದನ್ ಆತ್ಮೀಯ ಸ್ನೇಹಿತ ಧೀರೇಂದ್ರ ಸೆಮಾಲ್ ರನ್ನು ಪೊಲೀಸರು ಪ್ರಶ್ನಿಸಿದಾಗ, ''ಇಷ್ಟು ದಿನ ಇತ್ತ ತಿರುಗಿ ನೋಡದ ಅಮೃತ ಸಿಂಗ್ ಮತ್ತು ಸಾರಾ ಅಲಿ ಖಾನ್ ಈಗ ಬಂದಿರೋದು ಯಾಕೆ.? ಮೂರು ವರ್ಷಗಳಿಂದ ಮಧುಸೂದನ್ ಅನಾರೋಗ್ಯದಿಂದ ಬಳಲುತ್ತಿರುವಾಗ, ಅಮೃತ ಸಿಂಗ್ ಕ್ಯಾರೆ ಎನ್ನಲಿಲ್ಲ. ಈಗ ಮಧುಸೂದನ್ ತೀರಿಕೊಂಡ ಮೇಲೆ ಆಸ್ತಿ ಮೇಲೆ ಕಣ್ಣು ಹಾಕಿದ್ದಾರೆ'' ಅಂತ ಆರೋಪಿಸಿದ್ದಾರೆ.

ವಿವಾದದಲ್ಲಿ ಅಮ್ಮ-ಮಗಳು
ಇಷ್ಟು ದಿನ ಯಾವುದೇ ವಿವಾದಗಳಿಗೆ ಸಿಲುಕದ ತಾಯಿ ಅಮೃತ ಸಿಂಗ್ ಮತ್ತು ಮಗಳು ಸಾರಾ ಅಲಿ ಖಾನ್ ಇದೀಗ ಬೇಡದ ವಿಷಯಕ್ಕೆ ಸದ್ದು ಮಾಡುತ್ತಿದ್ದಾರೆ. ಈ ಪ್ರಕರಣ ಮುಂದೆ ಯಾವ ಹಂತಕ್ಕೆ ಹೋಗಿ ತಲುಪುತ್ತದೋ, ನೋಡಬೇಕು.


Click it and Unblock the Notifications











