Sara Ali Khan birthday: ಕೇಕ್ ನೋಡಿ ಶಾಕ್ ಆದ ಸಾರಾ ಅಲಿ ಖಾನ್!

2018 ರಲ್ಲಿ ತನ್ನ ಚೊಚ್ಚಲ ಚಿತ್ರ ಕೇದಾರನಾಥ್ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ನಟಿ ಸಾರಾ ಅಲಿ ಖಾನ್ ಶನಿವಾರ 28 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಮಗಳಾಗಿರುವ ಸಾರಾ ಅಲಿ ಖಾನ್ ತಮ್ಮ ಕುಟುಂಬ ಮತ್ತು ಕೆಲವು ಸ್ನೇಹಿತರೊಂದಿಗೆ ಮನೆಯಲ್ಲಿ ಕೇಕ್ ಕತ್ತರಿಸುವ ಪುಟ್ಟ ಸಮಾರಂಭ ಮಾಡಿದ್ದಾರೆ.

ಸಾರಾ ಅಲಿಖಾನ್‌ಗೆ ಬಾಲಿವುಡ್ ಮಂದಿ ಶುಭಾಶಯಗಳ ಮಹಾಪೂರ ಹರಿಸಿದ್ದಾರೆ. ಮನೆಯಲ್ಲಿ ಆಕೆಯ ಸ್ನೇಹಿತರು ಮತ್ತು ಆಕೆಯ ತಾಯಿ ಅಮೃತಾ ಸಿಂಗ್ ಮತ್ತು ಸಹೋದರ ಇಬ್ರಾಹಿಂ ಅಲಿ ಖಾನ್ ಅವರೊಂದಿಗಿರುವ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಸಾರಾ ಕೇಕ್ ನೋಡಿ ಶಾಕ್ ಆಗಿರುವ ಕ್ಷಣಗಲಿವೆ. ಇದನ್ನು ಫನ್ನಿ ವಿಡಿಯೋ ಎಂದು ಶೇರ್ ಮಾಡಿಕೊಂಡಿದ್ದಾರೆ.

sara-ali-khan-celebrates-her-28th-birthday

ಕಲರ್‌ಪುಲ್ ಕೇಕ್‌ ಮೇಲಿನ ಮೇಣದ ಬತ್ತಿ ಮತ್ತು ಪಟಾಕಿ ಸದ್ದಿಗೆ ಹೆದರಿದ್ದಾರೆ. ಈ ವಿಡಿಯೋವನ್ನು Instagram ಸ್ಟೋರಿ ಹಂಚಿಕೊಂಡಿರುವ ನಟಿಯ ಸ್ನೇಹಿತರೊಬ್ಬರು, " ಈ ಹುಡುಗಿ ತನ್ನ ಹುಟ್ಟುಹಬ್ಬದ ಕೇಕ್ ಅನ್ನು ಹೊರತುಪಡಿಸಿ ಯಾರಿಗೂ ಹೆದರುವುದಿಲ್ಲ" ಎಂದು ಫನ್ನಿ ಕ್ಯಾಪ್ಷನ್ ನೀಡಿದ್ದಾರೆ.

ಸಾರಾ ಅಲಿ ಖಾನ್‌ಗೆ ಜನ್ಮದಿನದ ಶುಭಾಶಯಗಳು

ಸೈಫ್ ಅಲಿ ಖಾನ್ ಅವರ ಪತ್ನಿ, ನಟಿ ಕರೀನಾ ಕಪೂರ್ ಅವರು Instagram ಸ್ಟೋರೀಸ್‌ನಲ್ಲಿ ಎರಡು ಚಿತ್ರಗಳ ಕೊಲಾಜ್‌ನಲ್ಲಿ 'ಬರ್ತ್‌ಡೇ ಬೇಬ್' ಎಂಬ ಸ್ಟಿಕ್ಕರ್ ಅನ್ನು ಪೋಸ್ಟ್ ಮಾಡಿ, "ಜನ್ಮದಿನದ ಶುಭಾಶಯಗಳು ಸಾರಾ ಅಲಿ ಖಾನ್‌. ಈ ವರ್ಷ ಅದ್ಭುತವಾಗಿರಲಿ" ಎಂದು ಶುಭ ಹಾರೈಸಿದ್ದಾರೆ. ಈ ಎರಡು ಫೋಟೋಗಳಲ್ಲಿ ಒಂದರಲ್ಲಿ ಸಾರಾ ಮತ್ತು ಆಕೆಯ ತಂದೆ ಸೈಫ್ ಅಲಿ ಖಾನ್ ಅವರ ಬಾಲ್ಯದ ಚಿತ್ರವಾಗಿದ್ದರೆ, ಇನ್ನೊಂದು ಕರೀನಾ ಮತ್ತು ಸೈಫ್ ಅವರ ಕಿರಿಯ ಮಗ ಜಹಾಂಗೀರ್ ಅಲಿ ಖಾನ್ ಅವರೊಂದಿಗೆ ಸಾರಾ ಇರುವ ಕ್ಯಾಂಡಿಡ್ ಚಿತ್ರವಾಗಿದೆ.

sara-ali-khan-celebrates-her-28th-birthday

ಇನ್ನು ಬಾಲಿವುಡ್‌ನಲ್ಲಿ ಸಾರಾ ಅವರ ಸ್ನೇಹಿತೆಯಾಗಿರುವ ನಟಿ ಅನನ್ಯಾ ಪಾಂಡೆ ಕೂಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಒಟ್ಟಿಗೆ ಇರುವ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ನಟಿ ರಾಧಿಕಾ ಮದನ್ ಕೂಡ ಗುಡ್ಡಗಾಡು ಪ್ರದೇಶದಲ್ಲಿ ಇಬ್ಬರು ಬಂಡೆಯ ಮೇಲೆ ಕುಳಿತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಸಾರಾ ಅಲಿ ಖಾನ್ ಬಗ್ಗೆ

ಸಾರಾ ಅಲಿ ಖಾನ್, ಸೈಫ್ ಅಲಿ ಖಾನ್ ಮತ್ತು ಅವರ ಮೊದಲ ಪತ್ನಿ ಅಮೃತಾ ಸಿಂಗ್ ಅವರ ಏಕೈಕ ಪುತ್ರಿ. ಸಾರಾ ಅಲಿ ಖಾನ್ ಐದು ವರ್ಷಗಳ ಹಿಂದೆ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆ ಕೇದಾರನಾಥ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ಸಸ್ಪೆನ್ಸ್ ಥ್ರಿಲ್ಲರ್ ಗ್ಯಾಸ್‌ಲೈಟ್ ಮತ್ತು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಜರಾ ಹಟ್ಕೆ ಜರಾ ಬಚ್ಕೆ ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ನಟಿ ಸಾರಾ ಅಲಿ ಖಾನ್ ಕಿಸೆಯಲ್ಲಿ ಕನಿಷ್ಠ ನಾಲ್ಕು ಚಿತ್ರಗಳಿವೆ. ದೇಶಭಕ್ತಿಯನ್ನು ಬಿಂಬಿಸುವ ಏ ವತನ್ ಮೇರೆ ವತನ್, ಅನುರಾಗ್ ಬಸು ಅವರ ಮಲ್ಟಿ ಸ್ಟಾರರ್ ಮೆಟ್ರೋ, ಡಿನೋ ಮತ್ತು ಹೋಮಿ ಅದಾಜಾನಿಯಾ ಅವರ ಮರ್ಡರ್ ಮುಬಾರಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಜಗನ್ ಶಕ್ತಿ ವಾರ ಹೆಸರಿಡದ ಮುಂದಿನ ಚಿತ್ರದಲ್ಲಿಯೂ ನಟಿಸಲಿದ್ದಾರೆ.

More from Filmibeat

English summary
Sara Ali Khan is celebrating her 28th birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X