'ಕ್ಯಾಮರಾ'ದಲ್ಲಿ ಸೆರೆಯಾಯಿತು 'ಸಾರಾ' ಮಾಡಿದ 'ಸಹಾಯ' ; ಸಿಟ್ಟಾದ ಸೈಫ್ ಪುತ್ರಿ..!

''ಪಾಪ ಪುಣ್ಯ ಪುಸ್ತಕದ ಮೇಲೆ, ದುಡ್ಡಿದ್ದರೆ ದುನಿಯಾ ಮೇಲೆ'' ಅನ್ನುವ ಮಾತನ್ನ ಬಾಲಿವುಡ್ ನವರು ಅನೇಕ ವರ್ಷಗಳ ಹಿಂದೆಯೇ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ''ಯಾರಾದರೂ ಹಾಳಾಗೋಗ್ಲಿ ನಾವು ನೆಟ್ಟಗಿದ್ದರೆ ಸಾಕು'' ಎಂದು ಬದುಕುತ್ತಿದ್ದಾರೆ.

ಆದರೆ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಮಾತ್ರ ಈ ಮಾತುಗಳಿಗೆ ತದ್ವಿರುದ್ದ. ಯಾಕೆಂದರೆ ಬಡವರ ಕಷ್ಟಕ್ಕೆ ಕರಗುವ ಮನಸ್ಸು ಇವರದ್ದು. ಈ ಹಿಂದೆಯೂ ಇದು ಸಾಬೀತಾಗಿದೆ. ಇದಕ್ಕೆ ಇನ್ನೊಂದು ಉದಾಹರಣೆ ಅನ್ನುವಂತೆ ಸಾರಾ ಅಲಿ ಖಾನ್ ಅವರ ಇತ್ತೀಚಿನ ವಿಡಿಯೋ ಒಂದು ವೈರಲ್ ಆಗಿದೆ.

Sara Ali Khan Distributed Food To Poor People Slams Paparazzi

ಸಾರಾ ಅಲಿ ಖಾನ್ ಹೃದಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿಯಂತೆ ಇರುವ ಈ ವಿಡಿಯೋದಲ್ಲಿ ದೇವಸ್ಥಾನದ ಹೊರಗೆ ಕುಳಿತಿದ್ದ ಬಡಜನರ ಯೋಗ ಕ್ಷೇಮವನ್ನ ಸಾರಾ ಅಲಿ ಖಾನ್ ವಿಚಾರಿಸಿದ್ದಾರೆ. ಆಹಾರದ ಪೊಟ್ಟಣಗಳನ್ನ ಅಲ್ಲಿ ಕುಳಿತಿದ್ದ ಎಲ್ಲರಿಗೂ ಸಾರಾ ವಿತರಿಸಿದ್ದಾರೆ.

ಇನ್ನೂ ಈ ವಿಡಿಯೋ ನೋಡ್ತಿದ್ದರೆ, ಅನೇಕರಿಗೆ ಇದು ಪ್ರಚಾರದ ಗಿಮಿಕ್ ಎಂದು ಅನಿಸಬಹುದು. ಆದರೆ ಸಾರಾ ಅಲಿ ಖಾನ್ ತಮ್ಮನ್ನ ಸುತ್ತುವರೆದ ಪಾಪರಾಜಿಗಳಿಗೆ ವಿಡಿಯೋವನ್ನ ಚಿತ್ರೀಕರಿಸಿದಂತೆ ಮನವಿಯನ್ನ ಮಾಡಿದ್ದಾರೆ. ಆದರೂ ಕೂಡ ಆ ಮನವಿಗೆ ಮನ್ನಣೆ ಸಿಕ್ಕಿಲ್ಲ. ವಿಡಿಯೋ ಚಿತ್ರೀಕರಣ ನಿಲ್ಲಲಿಲ್ಲ. ಸಾರಾ ಅಲಿ ಖಾನ್ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ಕೂಡ ಇದೇ ಸಮಯದಲ್ಲಿ ವೈರಲ್ ಆಗಿದೆ.

ಹಣ.. ಕೀರ್ತಿ.. ಅಂತಸ್ತು.. ಎಲ್ಲವೂ ಇದ್ದರು ಕೂಡ ಸೈಫ್ ಪುತ್ರಿ ಸಾರಾ ಅವರ ಈ ಸಾಮಾನ್ಯ ನಡವಳಿಕೆ, ಸಾಮಾಜಿಕ ಜಾಲತಾಣದಲ್ಲಿ ಈಗ ಚರ್ಚೆಗೀಡಾಗುತ್ತಿದೆ. ಬಹುತೇಕರು ಸಾರಾ ಅಲಿ ಖಾನ್ ಅವರ ಸಾಮಾಜಿಕ ಕಾಳಜಿ, ಮಾನವೀಯ ಮೌಲ್ಯಗಳನ್ನ ಮನಸಾರೆ ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಸಹಾಯ ಮಾಡಿದ್ದು, ಪಾಪರಾಜಿಗಳಲ್ಲಿ ಮನವಿ ಮಾಡಿಕೊಂಡಿದ್ದು ಎಲ್ಲವೂ ಪಬ್ಲಿಸಿಟಿ ಸ್ಟಂಟ್ ಅಷ್ಟೇ ಎನ್ನುವ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ

Sara Ali Khan Distributed Food To Poor People Slams Paparazzi

ಅಂದ್ಹಾಗೇ ಸಾರಾ ಅಲಿ ಖಾನ್ ಸಹಾಯದ ಹಸ್ತವನ್ನ ಚಾಚಿದ್ದು ಇದು ಮೊದಲೇನಲ್ಲ. ಈ ಹಿಂದೆಯೂ ಸಾರಾ ಅಲಿ ಖಾನ್ ಬಡವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದ್ದರು. ಕೊರೊನಾ ಸಮಯದಲ್ಲಿ ಸೋನು ಸೂದ್ ಅವರ ಜೊತೆ ಕೈ ಜೋಡಿಸಿ ಅನೇಕರಿಗೆ ನೆರವಾಗಿದ್ದರು ಸಾರಾ ಅಲಿ ಖಾನ್

ಉಳಿದಂತೆ ಸಾರಾ ಅಲಿ ಖಾನ್ ಅವರ ಎರಡು ಸಿನಿಮಾಗಳು ಒಂದೇ ವಾರದ ಅಂತರದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಿವೆ. ಆ ಪೈಕಿ ಮರ್ಡರ್ ಮುಬಾರಕ್ ಚಿತ್ರವನ್ನ ಜನ ಮೆಚ್ಚಿಕೊಂಡರೆ, ಏ ವತನ್ ಮೇರೆ ವತನ್ ಚಿತ್ರವನ್ನ ನೋಡುವ ಧೈರ್ಯವನ್ನ ಮಾಡಬೇಡಿ ಎಂದು ಅನೇಕರು ಹೇಳಿದ್ದಾರೆ. ಅತ್ಯಂತ ಕಳಪೆ ಸಿನಿಮಾ ಎಂದು ಜರಿದಿದ್ದಾರೆ

ಒಟ್ನಲ್ಲಿ ಸದ್ಯಕ್ಕೆ ಸಾರಾ ಅಲಿ ಖಾನ್ ಅವರ ಎರಡು ವಿಡಿಯೋಗಳು ಸಾಂಆಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಚರ್ಚೆಯನ್ನು ಹುಟ್ಟು ಹಾಕಿವೆ. ಎಲ್ಲವೂ ಅವರವರ ಭಾವಕ್ಕೆ ಅವರವರ ಭಕುತಿಗೆ.

More from Filmibeat

English summary
Sara Ali Khan was seen distributing food packets to the needy who were sitting outside the temple. Actress also requested the paparazzi to not click pictures of her during the visit to Shani temple in Juhu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X