ಬಿಜೆಪಿ ನಾಯಕನ ಮನೆ ಬೆಳಗಲಿರುವ ಸೈಫ್ ಅಲಿ ಖಾನ್ ಪುತ್ರಿ ಸಾರಾ...?

ಪ್ರೀತಿಯಲ್ಲಿ ಬೀಳುವುದಕ್ಕಿಂತ ಪ್ರೀತಿಯನ್ನೇ ಊರುಗೋಲಾಗಿ ಹಿಡಿದು ಮೇಲೇಳಬೇಕು. ಪ್ರೀತಿ ಯಾರಲ್ಲಿ, ಯಾವಾಗ ಎಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಆದರೆ ಪ್ರೀತಿ ಹುಟ್ಟಿದ ಮೇಲೆ ಅದನ್ನು ಕಾಪಾಡಿಕೊಂಡು ಹೋಗಬೇಕು. ಆದರೆ .. ಇದು ಬಣ್ಣದ ಲೋಕ. ಇಲ್ಲಿ .. ಪ್ರೀತಿ ಮೊಳಕೆಯೊಡೆದಷ್ಟೇ ವೇಗವಾಗಿ ಉಸಿರುಗಟ್ಟಿ ಸತ್ತು ಹೋಗುತ್ತದೆ. ಆ ನಂತರ ಅಷ್ಟೇ ಬೇಗ ಇನ್ಯಾರದ್ದೋ ಮೇಲೆ ಮತ್ತೊಮ್ಮೆ ಪ್ರೇಮಾಂಕುರವಾಗುತ್ತೆ. ಇದಕ್ಕೆ ಸಾರಾ ಅಲಿ ಖಾನ್ ಮತ್ತೊಂದು ಉದಾಹರಣೆ.

ಹೌದು, ಮಾಜಿ ಮುಖ್ಯಮಂತ್ರಿ ಸುಶೀಲ್​ಕುಮಾರ್​ಶಿಂಧೆ ಮೊಮ್ಮಗ ವೀರ್‌ ಪಹಾರಿಯಾ ಜೊತೆ ವರ್ಷಾನುವರ್ಷಗಳ ಕಾಲ ಪ್ರೀತಿಯಲ್ಲಿ ಬಿದ್ದು ಲೋಕವನ್ನೇ ಮರೆತಿದ್ದ ಸಾರಾ ಅಲಿ ಖಾನ್ ಆ ನಂತರ ಅವರಿಂದ ದೂರವಾದರು. ವೀರ್ ಪಹಾರಿಯಾ ಬದುಕಿನಲ್ಲಿ ಸಾರಾ ಅಲಿ ಖಾನ್ ನಿರ್ಗಮನವಾಗುತ್ತಿದ್ದಂತೆಯೇ ಮಾನುಷಿ ಚಿಲ್ಲರ್ ಬಂದರು. ಈ ಕಾರಣಕ್ಕೆ ತಮ್ಮನ್ನು ಮರೆತು ಮಾನುಷಿ ಚಿಲ್ಲರ್ ಜೊತೆ ವೀರ್ ಪಹಾರಿಯಾ ನೆಮ್ಮದಿಯಿಂದ ಇರಬೇಕಾದರೆ ನಾನ್ಯಾಕೇ ನೆಮ್ಮದಿಯನ್ನು ಕೆಡಿಸಿಕೊಂಡು ಬದುಕಬೇಕು ಎನ್ನುವ ತೀರ್ಮಾನಕ್ಕೆ ಬಂದಂತೆ ಇರುವ ಸಾರಾ ಅಲಿ ಖಾನ್ ಸದ್ಯ ಅರ್ಜುನ್ ಬಾಜ್ವಾ ಜೊತೆ ಓಡಾಡುತ್ತಿದ್ದಾರೆ. ಜೊತೆಯಲ್ಲಿ ತೆರಳಿ ಇಬ್ಬರು ಕೇದಾರನಾಥನ ದರ್ಶನವನ್ನು ಪಡೆದಿದ್ದಾರೆ.

sara-ali-khan-fuels-dating-rumors-with-model-and-politician-arjun-pratap-bajwa

ಅಂದ್ಹಾಗೇ ಅರ್ಜುನ್ ಬಾಜ್ವಾ ಈ ಹಿಂದೆ ಮಾಡೆಲ್ ಆಗಿ ಹೆಸರು ಮಾಡಿದವರು. ಹಲವಾರು ಡಿಸೈನರ್‌ಗಳಿಗೆ ರ್ಯಾಂಪ್ ವಾಕ್‌ ಮಾಡಿದ್ದಾರೆ. ಇನ್ನೂ ಅಕ್ಷಯ್ ಕುಮಾರ್ ಅಭಿನಯದ ಸಿಂಗ್ ಇಸ್ ಬ್ಲಿಂಗ್‌ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಕೂಡ ಇವರ ಬೆನ್ನಿಗೆ ಇದೆ. ಇಷ್ಟೇ ಅಲ್ಲ ಎಂಎಂಎ ಫೈಟರ್ ಕೂಡ ಹೌದು ಇವರು. ಎಲ್ಲಕ್ಕಿಂತ ಹೆಚ್ಚಾಗಿ ಅರ್ಜುನ್ ಬಾಜ್ವಾ ಪಂಜಾಬ್‌ನ ಬಿಜೆಪಿಯ { ಭಾರತೀಯ ಜನತಾ ಪಕ್ಷ } ಉಪಾಧ್ಯಕ್ಷರಾಗಿರುವ ಫತೇ ಜಂಗ್ ಸಿಂಗ್ ಬಾಜ್ವಾ ಅವರ ಮಗ. ಕೋಟಿ ಮೌಲ್ಯದ ಆಸ್ತಿಯ ಒಡೆಯ.

ಇಂಥಾ ಅರ್ಜುನ್ ಬಾಜ್ವಾ ಜೊತೆ ಈಗ ಸಾರಾ ಅಲಿ ಖಾನ್ ಹೆಸರು ಥಳುಕು ಹಾಕಿಕೊಂಡಿದೆ. ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಮುಂಬೈನಲ್ಲಿ ಕೇಳಿ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಕುರಿತು ಬಿಸಿ ಬಿಸಿ ಚರ್ಚೆ ಕೂಡ ನಡೆಯುತ್ತಿದೆ. ಇಬ್ಬರ ಕೇದಾರನಾಥ್ ಪ್ರವಾಸದ ಫೋಟೊಗಳು ಕೂಡ ವೈರಲ್ ಆಗುತ್ತಿವೆ.

ಇನ್ನುಳಿದಂತೆ ಸಾರಾ ಅಲಿ ಖಾನ್ ಅದೃಷ್ಟ ಇತ್ತೀಚೆಗೆ ಕೈ ಕೊಟ್ಟಿದೆ. 2021ರ ನಂತರ ಸಾರಾ ಅಲಿ ಖಾನ್ ಅಭಿನಯಿಸಿದ ಯಾವ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟಾಗಿ ಸದ್ದು ಮಾಡಿಲ್ಲ. ಇನ್ನೂ ಓಟಿಟಿ ವೇದಿಕೆಯಲ್ಲಿ 'ಗ್ಯಾಸ್ ಲೈಟ್', 'ಮರ್ಡರ್ ಮುಬಾರಕ್' ಮತ್ತು 'ಏ ವತನ್ ಮೇರೆ ವತನ್' ಚಿತ್ರಗಳ ಮೂಲಕ ಸಾರಾ ಅಲಿ ಖಾನ್ ಕಾಣಿಸಿಕೊಂಡರು ಇಲ್ಲಿಯೂ ಕೂಡ ಪ್ರೇಕ್ಷಕರು ಇವರಿಗೆ ಜೈಕಾರ ಹಾಕಲಿಲ್ಲ. ಬದಲಿಗೆ 'ಏ ವತನ್ ಮೇರೆ ವತನ್' ಚಿತ್ರದಲ್ಲಿನ ಅಭಿನಯಕ್ಕೆ ವ್ಯಾಪಕ ಟೀಕೆಗೆ ಒಳಗಾಗಿದ್ದರು ಸಾರಾ ಅಲಿ ಖಾನ್. ಸದ್ಯಕ್ಕೆ ಸಾರಾ ಅಲಿ ಖಾನ್ ಕೈಯಲ್ಲಿ ಸ್ಕೈ ಫೋರ್ಸ್ ಎಂಬ ಸಿನಿಮಾ ಇದೆ. ಈ ಚಿತ್ರದಲ್ಲಿ ಇವರ ಮಾಜಿ ಪ್ರಿಯಕರ ವೀರ್ ಪಹಾರಿಯಾ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವರಿಬ್ಬರ ಜೊತೆ ಅಕ್ಷಯ್ ಕುಮಾರ್ ಮತ್ತು ಸುನಿಲ್ ಶೆಟ್ಟಿ ಕೂಡ ಚಿತ್ರದಲ್ಲಿದ್ದಾರೆ.

ಒಟ್ನಲ್ಲಿ ಸದ್ಯಕ್ಕೆ ಸಾರಾ ಅಲಿ ಖಾನ್ ಅವರ ಹೆಸರು ಅರ್ಜುನ್ ಬಾಜ್ವಾ ಜೊತೆ ಥಳುಕು ಹಾಕಿಕೊಂಡಿದೆ. ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ. ಅರ್ಜುನ್ ಪ್ರತಾಪ್ ಬಾಜ್ವಾ ಜೊತೆ ಮದುವೆಯಾಗುವ ಮೂಲಕ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಪಂಜಾಬ್‌ನ ಬಿಜೆಪಿಯ ಉಪಾಧ್ಯಕ್ಷರಾಗಿರುವ ಫತೇ ಜಂಗ್ ಸಿಂಗ್ ಬಾಜ್ವಾ ಅವರ ಮನೆ ಬೆಳಗುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Read more about: sara ali khan love bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X